SIIMA Awards: ಸ್ನೇಹಿತರೆ ಸೆಪ್ಟೆಂಬರ್ 15ನೇ ತಾರೀಕಿನಂದು 2022 ರಲ್ಲಿ ಬಿಡುಗಡೆಯಾದಂತಹ ಸಾಲು ಸಾಲು ಸಿನಿಮಾಗಳಿಗೆ ಅವಾರ್ಡ್ಗಳನ್ನು ಘೋಷಣೆ ಮಾಡಲಾಗಿದೆ. 15ನೇ ತಾರೀಕು ಕೇವಲ ಕನ್ನಡ ಮತ್ತು ತೆಲುಗು ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗಿತ್ತು, ಅದರಂತೆ ಸೆಪ್ಟೆಂಬರ್ ಹದಿನಾರನೇ ತಾರೀಕು ತಮಿಳು ಮತ್ತು ಮಲಯಾಳಂ ಸಿನಿಮಾಗಳಿಗೆ ಅವಾರ್ಡ್ ವಿತರಣೆ ಮಾಡಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ಕನ್ನಡ ಸಿನಿಮಾ ರಂಗದ ಸಾಕಷ್ಟು ಸ್ಟಾರ್ ನಟ ನಟಿಯರು ಪಾಲ್ಗೊಂಡು ತಮ್ಮ ತಮ್ಮ ಸಿನಿಮಾದ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಇನ್ನು ವಿಶೇಷವಾಗಿ ಈ ಬಾರಿ ದುಬೈನಲ್ಲಿ ನಡೆದಂತಹ ಸೈಮ ಅವಾರ್ಡ್ (SIIMA Awards) ಕಾರ್ಯಕ್ರಮದಲ್ಲಿ ನಮ್ಮ ಕನ್ನಡಕ್ಕೆ ಅತಿ ಹೆಚ್ಚು ಪ್ರಶಸ್ತಿಗಳು ಲಭಿಸಿದ್ದು ಕೆಜಿಎಫ್ ಚಾಪ್ಟರ್ 2 ನಟನೆಗಾಗಿ ಶ್ರೀನಿಧಿ ಶೆಟ್ಟಿಯವರು ಅತ್ಯುತ್ತಮ ನಟಿ ಅವಾರ್ಡ್ ಅನ್ನು ಪಡೆದುಕೊಂಡರೆ,
777 ಚಾರ್ಲಿ ಸಿನಿಮಾ ಗಾಗಿ ರಕ್ಷಿತ್ ಶೆಟ್ಟಿ(Rakshith Shetty) ಅತ್ಯುತ್ತಮ ನಟ ಎಂಬ ಅವಾರ್ಡ್ ಪಡೆದುಕೊಂಡು ವೇದಿಕೆಯ ಮೇಲೆ ತಮ್ಮ ಹಾಗೂ ಚಾರ್ಲಿ ಸಿನಿಮಾ ಜರ್ನಿಯ ಕುರಿತು ಮಾತನಾಡುತ್ತಾ ಸಿನಿಮಾದ ಸಕ್ಸಸ್ಗೆ ಕಾರಣರಾದಂತಹ ಪ್ರತಿಯೊಬ್ಬರಿಗೂ ಧನ್ಯವಾದಗಳು ತಿಳಿಸಿದರು. ಅದರಂತೆ ಕಾಂತರಾ ಸಿನಿಮಾದ ನಿರ್ದೇಶನಕ್ಕಾಗಿ ರಿಶಬ್ ಶೆಟ್ಟಿ (Rishab Shetty) ಅತ್ಯುತ್ತಮ ನಿರ್ದೇಶಕನಾದರೆ, ಅದ್ಭುತ ಸಂಗೀತ ಸಂಯೋಜನೆಗಾಗಿ ಅಜನೀಶ್ ಲೋಕನಾಥ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.
ಇನ್ನು ಕಾಂತಾರ ಸಿನಿಮಾ ವಿಭಾಗದಲ್ಲಿಯೇ ಅತಿ ಹೆಚ್ಚಿನ ಅವಾರ್ಡ್ಗಳು ದೊರಕಿದ್ದು, ಈ ಚಿತ್ರದ ಅತ್ಯುತ್ತಮ ಖಳ ನಟನೆಗಾಗಿ ಅಚ್ಚುತ್ ಕುಮಾರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಹಾಗೆ ಅತ್ಯುತ್ತಮ ಹಾಸ್ಯ ನಟನಾಗಿ ಪ್ರಕಾಶ್ ತಮ್ಮಿನಾಡು ಹಾಗೂ ಅತ್ಯುತ್ತಮ ನಟಿಯಾಗಿ ಸಪ್ತಮಿ ಗೌಡ(Saptami Gowda) ಪ್ರಶಸ್ತಿಯನ್ನು ಪಡೆದುಕೊಂಡರು. ಅಲ್ಲದೆ ಈ ಚಿತ್ರದ ಸಿಂಗಾರ ಸಿರಿಯೇ ಹಾಡಿಗಾಗಿ ವಿಜಯ್ ಪ್ರಕಾಶ್ ಅವರು ಅತ್ಯುತ್ತಮ ಗಾಯಕ ಪ್ರಶಸ್ತಿಯನ್ನು ಸ್ವೀಆಕರ್ಷಿಸುತ್ತಿದೆ.
ವೇದಿಕೆಯ ಮೇಲೆ ರಕ್ಷಿತ್ ಶೆಟ್ಟಿ ಹಾಗೂ ರಿಶಬ್ ಶೆಟ್ಟಿ ಇಬ್ಬರು ಒಂದೇ ಬಣ್ಣದ ಬಟ್ಟೆಯನ್ನು ಧರಿಸಿ ಅವಾರ್ಡ್ ಹಿಡಿದು ಕ್ಯಾಮೆರಾದ ಕಣ್ಣಿಗೆ ಫೋಸ್ ನೀಡಿದ್ದು ಎಲ್ಲಾ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ನೆಟ್ಟಿಗರನ್ನು