Anirudh: ವಿಷ್ಣು ದಾದಾನ ಹುಟ್ಟು ಹಬ್ಬದ ಅಂಗವಾಗಿ ನಡೆಯಬೇಕಿದ್ದ ಚಿತ್ರೋತ್ಸವ ರದ್ದು! ಪದೇ ಪದೇ ಮೇರು ನಟನಿಗೆ ಆಗುತ್ತಿರುವ ಈ ಅವಮಾನ ಎಷ್ಟು ಸರಿ?

0

Anirudh: ಸ್ನೇಹಿತರೆ, ನಾಳೆ ಅಂದ್ರೆ ಸೆಪ್ಟೆಂಬರ್ 18ನೇ ತಾರೀಖು ಕನ್ನಡ ಚಿತ್ರರಂಗದ ಅಪರೂಪದ ಮುತ್ತು ರತ್ನಗಳಲ್ಲಿ ಒಂದಾದ ನಟನ ಭಾರ್ಗವ ಡಾಕ್ಟರ್ ವಿಷ್ಣುವರ್ಧನ್ ಅವರ ಹುಟ್ಟು ಹಬ್ಬದ ಸಂಭ್ರಮ. ಇದರ ಬೆನ್ನೆಲ್ಲೆ ಸಾಕಷ್ಟು ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಾಗೂ ವಿಷ್ಣುದಾದರ ಕುಟುಂಬ ಹಮ್ಮಿಕೊಂಡಿದ್ದರು. ಆದರೆ ಈಗ ಕಾರಣಾಂತರದಿಂದಾಗಿ ಆ ಕಾರ್ಯಕ್ರಮಗಳು ರದ್ದಾಗಿರುವುದರ ಕುರಿತು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಒಂದನ್ನು ನೀಡಿದ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ(Aniruddh) ಎಲ್ಲರಲ್ಲಿ ಕ್ಷಮೆಯಾಚಿಸಿದ್ದಾರೆ ಹಾಗೂ ಭಾರತೀಯ ಅಮ್ಮನವರ ಆರೋಗ್ಯ ಪರಿಸ್ಥಿತಿಯ ಕುರಿತು ಮಾತನಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವಂತಹ ಅನಿರುದ್ಧವರು ” ನಮಸ್ಕಾರ ಎಲ್ಲರಿಗೂ, ತಮ್ಮೆಲ್ಲರಿಗೂ ಈಗಾಗಲೇ ಗೊತ್ತಿರುವ ಹಾಗೆ ಸಾಮಾಜಿಕ ಜಾಲತಾಣಗಳಿಂದ ಇದೆ 15, 16, 17 ಹಾಗೂ 18ನೇ ತಾರೀಕು ಅಪ್ಪ ಅವರ ಹುಟ್ಟು ಹಬ್ಬದ ಸಂದರ್ಭ. ಈ ನಾಲ್ಕು ದಿನಗಳನ್ನು ಅಪ್ಪ ಅವರು/ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ (Dr.Vishnuvardhan) ಅವರ ಚಲನಚಿತ್ರೋತ್ಸವ ಮಾಡಲು ಯೋಜನೆಯಾಗಿತ್ತು. ಇದು ಅಪ್ಪ ಅವರ ಸ್ಮಾರಕ ಅಥವಾ ಸಭಾಂಗಣ ಏನಿದೆ ಮೈಸೂರಿನಲ್ಲಿ ಆಯೋಜಿಸಲಾಗುತ್ತದೆ ಎಂಬ ಮಾಹಿತಿ ಇತ್ತು,

ನಾವೆಲ್ಲರೂ ಅದರ ಬಗ್ಗೆ ಕೇಳಿದ್ದೇವೆ ಹಾಗೂ ನಾನು ಕೂಡ ಅದರ ಬಗ್ಗೆ ಹೇಳಿದ್ದೆ ರಾ ಫಿಲಂ ಫ್ಯಾಕ್ಟರಿ (Raw Film factory)ನವರು ಈ ಒಂದು ಚಿತ್ರೋತ್ಸವದ ಕಾರ್ಯಕ್ರಮವನ್ನು ಆಯೋಜಿಸಬೇಕಿತ್ತು, ಆದರೆ ಕಾರಣಾಂತರಗಳಿಂದಾಗಿ ಇದು ರದ್ದಾಗಿದೆ. ಇದು ನಮಗೆ ಮತ್ತು ನಮ್ಮ ವೈಯಕ್ತಿಕ ಕುಟುಂಬಕ್ಕೆ ಬಹಳ ಬೇಸರವನ್ನುಂಟು ಮಾಡಿದೆ, ತಮ್ಮೆಲ್ಲರಿಗೂ ಹಾಗೂ ಅಭಿಮಾನಿಗಳಿಗೂ ಕೂಡ ತುಂಬಾ ತುಂಬಾ ಬೇಸರ ಉಂಟಾಗಿದೆ. ಅಭಿಮಾನಿಗಳಿಗೂ ಕೂಡ ತುಂಬಾ ಬೇಸರ ಉಂಟಾಗಿದೆ ಚಿತ್ರೋತ್ಸವ ಇದೆ ಎಂಬ ಕಾರಣದಿಂದ ಸಿನಿಮಾ ನೋಡಲು ಮೈಸೂರಿನ ಸಭಾಂಗಣದ ಬಳಿ ಕೆಲವರು ಹೋಗಿದ್ದರು.

18ನೇ ತಾರೀಕು ನಾನು ಹಾಗೂ ಭಾರತೀಯ (Bharathi) ಅಮ್ಮನವರು, ಅವರಿಗೆ ಸ್ವಲ್ಪ ಹುಷಾರಿಲ್ಲ ಆದರೂ ಕೂಡ ಆ ದಿನ ಸ್ಮಾರಕದ ಬಳಿ ಸ್ವಲ್ಪ ಹೊತ್ತು ಇರುತ್ತೇವೆ. ಮತ್ತೊಮ್ಮೆ ಮಗದೊಮ್ಮೆ ಯಾರಿಗಾದರೂ ಬೇಸರವಾಗಿದ್ದರೆ ಎಲ್ಲರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ” ಎಂದು ಅನಿರುದ್ಧ ವಿಷ್ಣು ದಾದಾನ ವಿಚಾರದಲ್ಲಿ ಜನರು ಮಾಡುತ್ತಿರುವಂತಹ ಅಸಡ್ಡೆಯ ಕುರಿತು ಬೇಸರ ವ್ಯಕ್ತಪಡಿಸಿದ.

Leave A Reply

Your email address will not be published.

error: Content is protected !!
Footer code: