ಮೀನ ರಾಶಿಯಲ್ಲಿ ರಾಹುವಿನ ಸಂಚಾರದಿಂದ ಉಳಿದ 4 ರಾಶಿಗಳ ಜೀವನ ಶೈಲಿಯಲ್ಲಿ ಬದಲಾವಣೆ ಆಗಲಿದೆ

0

Kannada Astrology Sep Month: ಮೀನ ರಾಶಿಯಲ್ಲಿ ರಾಹುವಿನ ಸಂಚಾರದಿಂದ ಉಳಿದ ನಾಲ್ಕು ರಾಶಿಗಳ ಜೀವನ ಶೈಲಿಯಲ್ಲಿ ಬದಲಾವಣೆ ಕಾಣಲಿದ್ದು ಈ ಕುರಿತು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ರಾಹು ತನ್ನ ಸ್ಥಾನವನ್ನ ಬೇರೆ ಬೇರೆ ರಾಶಿಗಳಿಗೆ ವರ್ಗಾಯಿಸುತ್ತಾ ಇರುತ್ತಾನೆ. ಕೆಲವೊಂದು ರಾಶಿಗಳಿಗೆ ಈತ ಅಶುಭಕರ ಪರಿಣಾಮವನ್ನು ಬೀರುತ್ತಾನೆ ಅಷ್ಟೇ ಅಲ್ಲದೆ ಪ್ರತಿಯೊಂದು ಗ್ರಹವು ಸಹ ತನ್ನ ನಿರ್ದಿಷ್ಟ ಸಮಯದಲ್ಲಿ ಉಂಟಾಗುವ ಚಲನೆಯ ಮೂಲಕ ಅನೇಕ ರಾಶಿಗಳ ಮೇಲೆ ಪರಿಣಾಮವನ್ನು ಬೀರುತ್ತವೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹುವನ್ನು ನೆರಳು ಗ್ರಹ ಎಂದು ಪರಿಗಣಿಸಲಾಗಿದ್ದು ಈ ರಾಹುವಿನ ದಶಯ ವ್ಯಕ್ತಿಗೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ ಇದು ಆತನ ಮನಸ್ಥಿತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಇದರಿಂದಾಗಿ ವ್ಯಕ್ತಿಯ ಜೀವನದಲ್ಲಿ ಹಲವಾರು ರೀತಿಯ ತೊಂದರೆಗಳು ಬರಬಹುದು ಇಂತಹ ರಾಹುವು ಇದೀಗ ಅಕ್ಟೋಬರ್ 30ರಂದು ಮೀನ ರಾಶಿಯನ್ನು ಪ್ರವೇಶಿಸುತ್ತಿದ್ದು ಮೀನ ರಾಶಿಯವರು ರಾಮಸಂಕ್ರಮಣದ ಸಮಯದಲ್ಲಿ ಜಾಗರೂಕತೆಯಿಂದ ಇರಬೇಕಾಗುತ್ತದೆ.

ರಾಹುವಿನ ಮೀನ ರಾಶಿಯ ಪ್ರವೇಶದಿಂದ ಕೇವಲ ಮೀನ ರಾಶಿಗಷ್ಟೇ ಅಲ್ಲದೆ ಇನ್ನು ಕೆಲವು ರಾಶಿಗಳಿಗೆ ಪರಿಣಾಮ ಬೀರಲಿದ್ದು ಅದರಲ್ಲಿ ಮೊದಲ ರಾಶಿ ಕಟಕ ರಾಶಿ. ಕಟಕ ರಾಶಿಯವರಿಗೆ ರಾಹುವಿನ ಚಲನೆಯಿಂದ ಮಂಗಳಕರ ಪರಿಣಾಮ ಇರುವುದಿಲ್ಲ ರಾಹುವು ಮೀನ ರಾಶಿಗೆ ಪ್ರವೇಶಿಸಿದ ಸಮಯ ಕಟಕರಾಶಿಯ ಜನರಿಗೆ ಕ್ಲಿಷ್ಟಕರ ಸಂದರ್ಭವಾಗಿರುತ್ತದೆ ಕಟಕ ರಾಶಿಯ ಜನರು ಈ ಸಮಯದಲ್ಲಿ ತಮ್ಮ ಕೆಲಸದ ಸ್ಥಳಗಳಲ್ಲಿ ಉನ್ನತ ಅಧಿಕಾರಿಗಳಿಂದ ಅಸಮಾಧಾನ ಎದುರಿಸುವ ಪರಿಸ್ಥಿತಿ ಬರುತ್ತದೆ ಹಾಗೂ ದಾಂಪತ್ಯ ಜೀವನದ ವಿಚಾರದಲ್ಲಿಯೂ ಸಹ ಸಣ್ಣಪುಟ್ಟ ಕಲಹಗಳು ನಡೆಯುತ್ತವೆ.

ಮೀನ ರಾಶಿಯ ಚಲನೆಯಿಂದ ಪರಿಣಾಮವನ್ನು ಎದುರಿಸುವ ಇನ್ನೊಂದು ರಾಶಿ ಸಿಂಹ ರಾಶಿ ರಾಹು ಮೀನ ರಾಶಿಗೆ ಸಂಚಾರ ಮಾಡುವ ಈ ಸಮಯದಲ್ಲಿ ಸಿಂಹ ರಾಶಿಯವರು ಆರ್ಥಿಕವಾಗಿ ಹಲವಾರು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ನೀವು ಮಾಡುವ ಕಾರ್ಯದಲ್ಲಿ ಯಶಸ್ಸು ಸಾಧಿಸಲು ನಿಮಗೆ ಕಷ್ಟವಾಗುತ್ತದೆ ಹಾಗೂ ನಿಮ್ಮ ಜೀವನದಲ್ಲಿ ಕಷ್ಟಕರ ಸವಾಲುಗಳು ಎದುರಾಗಲಿದ್ದು ನಿಮ್ಮನ್ನ ಕುಗ್ಗಿಸುವ ಪ್ರಯತ್ನವನ್ನು ಮಾಡುತ್ತದೆ ಯಾವುದೇ ವ್ಯಾಪಾರ ವ್ಯವಹಾರದಲ್ಲಿ ಹೂಡಿಕೆ ಮಾಡುವುದರಿಂದ ನಷ್ಟ ಅನುಭವಿಸಬಹುದು ಆದ್ದರಿಂದ ತಾಳ್ಮೆಯಿಂದ ಯೋಚನೆ ಮಾಡಿ ನೀವು ಹೂಡಿಕೆ ಮಾಡಬೇಕು.

ಇನ್ನು ಕನ್ಯಾ ರಾಶಿ ಈ ರಾಶಿಯವರು ಈ ಸಮಯದಲ್ಲಿ ತುಂಬಾ ಕೋಪ ಮಾಡಿಕೊಳ್ಳುವುದು ಅಥವಾ ದುಡುಕುವ ನಿರ್ಧಾರಗಳನ್ನ ತೆಗೆದುಕೊಳ್ಳುವುದು ಇತ್ಯಾದಿ ವಿಚಾರದಲ್ಲಿ ಸ್ವಲ್ಪ ನಿಯಂತ್ರಣವನ್ನ ತೆಗೆದುಕೊಳ್ಳಬೇಕು ಕನ್ಯಾ ರಾಶಿಯವರಿಗೆ ಇದರಿಂದ ಆರ್ಥಿಕ ನಷ್ಟ ಉಂಟಾಗಬಹುದು ಅಷ್ಟೇ ಅಲ್ಲದೆ ನೀವು ಮಾಡುವ ಕೆಲಸ ಕಾರ್ಯದ ಮೇಲೆ ಪರಿಣಾಮವನ್ನು ಬೀರಬಹುದು ಕೆಲವೊಂದು ಸಮಯದಲ್ಲಿ ಉದ್ಯೋಗವನ್ನು ಕಳೆದುಕೊಳ್ಳುವ ಪರಿಸ್ಥಿತಿಯು ಒದಗುತ್ತದ ಇದರಿಂದ ಸ್ವಲ್ಪ ಎಚ್ಚರಿಕೆಯಿಂದ ಕಾರ್ಯಕ್ಷೇತ್ರದಲ್ಲಿ ತೊಡಗಿಕೊಳ್ಳುವುದು ಉತ್ತಮ.

ಇನ್ನು ರಾಹು ಈ ಸಮಯದಲ್ಲಿ ಮೀನ ರಾಶಿಗೆ ಪ್ರವೇಶ ಮಾಡುವುದರಿಂದ ಮೀನ ರಾಶಿಯ ಜನರಿಗೆ ಈ ಸಮಯವು ಅಸಮಾಧಾನವನ್ನು ನೀವು ನಿಮ್ಮ ಗುರಿಯನ್ನು ಸಾಧಿಸಲು ಬಯಸಿದ್ದಲ್ಲಿ ಯಥೇಚ್ಛವಾದ ಪ್ರಯತ್ನವನ್ನ ಪಡಬೇಕಾಗುತ್ತದೆ ವಿಶೇಷವಾಗಿ ಮೀನ ರಾಶಿಯ ವಿದ್ಯಾರ್ಥಿಗಳು ಈ ಸಮಯದಲ್ಲಿ ವಿಶೇಷ ಕಾಳಜಿ ವಹಿಸಬೇಕು ಆರ್ಥಿಕ ಪರಿಸ್ಥಿತಿ ಹಣಕಾಸಿನ ಪರಿಸ್ಥಿತಿ ಹಾಗೂ ಉದ್ಯೋಗ ವ್ಯಾಪಾರ ಇತ್ಯಾದಿಗಳಲ್ಲಿ ಉತ್ತಮ ರೀತಿಯ ಪರಿವರ್ತನೆ ಮಾಡಿಕೊಳ್ಳಲು ನೀವು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡು ಹೆಚ್ಚಾಗಿ ಶ್ರಮಿಸಬೇಕಾಗುತ್ತದೆ.

Leave A Reply

Your email address will not be published.

error: Content is protected !!
Footer code: