WhatsApp Group Join Now
Telegram Group Join Now

Shashi Kumar Family : ಸುಪ್ರೀಂ ಹೀರೋ ಶಶಿಕುಮಾರ್ (Shashi Kumar) ಅದೊಂದು ಕಾಲದಲ್ಲಿ ತಮ್ಮ ಅದ್ಭುತ ಅಭಿನಯ ಹಾಗೂ ನೃತ್ಯದ ಮೂಲಕ ಕನ್ನಡ ಸಿನಿಮಾ ರಂಗವನ್ನು ಆಳಿದಂತಹ ನಟ. ಖಳ ನಟನಾಗಿ ಎಂಟ್ರಿ ನೀಡಿದರು, ಆನಂತರ ಶಶಿಕುಮಾರ್ ಅವರನ್ನು ಹರಸಿ ಬಂದಿದ್ದು ನಾಯಕ ನಟನ ಪಾತ್ರಗಳು. ಹೀಗೆ ಒಂದರ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ, ಅತಿ ಹೆಚ್ಚು ಮಹಿಳಾ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದ ಶಶಿಕುಮಾರ್ (Shashi Kumar) ಅವರ ಮೇಲೆ ಅದ್ಯಾರ ವಕ್ರದೃಷ್ಟಿ ಬಿತ್ತೋ ಗೊತ್ತಿಲ್ಲ, ರಸ್ತೆ ಅ-ಪಘಾತದಿಂದಾಗಿ ಶಶಿಕುಮಾರ್ ಸಾ-ವು ಬದುಕಿನ ಸಂದರ್ಭವನ್ನು ಎದುರಿಸಬೇಕಾಗಿತ್ತು.

ಅವರ ಮುಖವು ಸಂಪೂರ್ಣ ಜಜ್ಜಿ ಹೋಗಿತ್ತು. ಇಂತಹ ಸಂದರ್ಭದಲ್ಲಿ ಅವರ ಆಸರೆಯಾಗಿ ಗಂಡನ ಪ್ರತಿಯೊಂದು ಸುಖ ದುಃಖಗಳಲ್ಲಿ ಜೊತೆಯಾಗಿದ್ದದ್ದು, ಶಶಿಕುಮಾರ್ (Shashi Kumar) ಅವರ ಪತ್ನಿ. ಹಾಗಾದ್ರೆ ಅವರ ಪತ್ನಿ ಯಾರು? ಹೇಗಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Shashi Kumar Family Photos

‘ಚಿರಂಜೀವಿ ಸುಧಾಕರ್(Chiranjeevi Sudhakar) ಎಂಬ ಸಿನಿಮಾದ ಮೂಲಕ ಪ್ರಪ್ರಥಮ ಬಾರಿಗೆ ಖಳನಾಯಕನಾಗಿ ತೆರೆಯ ಮೇಲೆ ಬಂದಂತಹ ಶಶಿಕುಮಾರ್ ಮತ್ತೆಂದು ಹಿಂದಿರುಗಿ ನೋಡಿಯೇ ಇಲ್ಲ. ರವಿಚಂದ್ರನ್ ಅವರ ಯುದ್ಧ ಕಾಂಡ, ಎಸ್ ಪಿ ಸಾಂಗ್ಲಿಯಾನ, ರಾಣಿ ಮಹಾರಾಣಿ, ಬಾರೆ ನನ್ನ ಮುದ್ದಿನ ಹೆಂಡತಿ ಸೇರಿದಂತೆ ಮುಂತಾದ ಚಿತ್ರಗಳು ಆರಂಭಿಕ ದಿನಗಳಲ್ಲಿ ಶಶಿಕುಮಾರ್ (Shashi Kumar) ಅವರನ್ನು ಹರಸಿ ಬಂದವು.

ಹೀಗೆ ತಮ್ಮ ಚಾರ್ಮಿಂಗ್ ಮುಖಭಾವದಿಂದಲೇ ಅದೆಷ್ಟೋ ಮಹಿಳಾ ಅಭಿಮಾನಿಗಳ ಮನಸ್ಸನ್ನು ಗೆದ್ದಿದಂತಹ ಶಶಿಕುಮಾರ್ ಸಿನಿಮಾ ರಂಗದ ಉತ್ತುಂಗದ ಶಿಖರದಲ್ಲಿರುವಾಗ 1990ರ ಮಧ್ಯಭಾಗದಲ್ಲಿ ಬೆಂಗಳೂರಿನ ಟರ್ಪ್ ಕ್ಲಬ್ ಹತ್ತಿರದಲ್ಲೇ ಶಿವನಂದ ಸ್ಟೋರ್ಸ್(Shivananda Store) ಬಳಿ ಕಾರು ಚಲಾಯಿಸುತ್ತಾ ಬರುತ್ತಿದ್ದ ಶಶಿಕುಮಾರ್ (Shashi Kumar) ಅವರು ಭೀಕರವಾದ ಅಪಘಾತಕ್ಕೆ ಈಡಾಗುತ್ತಾರೆ.

ಹೌದು ಗೆಳೆಯರೇ ಕಾರು ನಿಯಂತ್ರಣ ತಪ್ಪಿ ರಸ್ತೆಗೆ ಹಾಕಲಾಗಿದ್ದ ವಿಭಾಜನಕ್ಕೆ ಗುದ್ಧಿ ಕಾರ್ ಜಕಂ ಆಗುತ್ತದೆ ಹಾಗೂ ಶಶಿಕುಮಾರ್ ಅವರ ದೇಹದ ಸಂಪೂರ್ಣ ಭಾಗವು ತೀ-ವ್ರವಾಗಿ ಗಾ-ಯಗೊಳಗಾಗಿತ್ತು. ಮುಖವು ಗುರುತು ಸಿಗದಷ್ಟು ಜ-ಜ್ಜಿಹೋಗಿತ್ತು ತಕ್ಷಣವೇ ಶಶಿಕುಮಾರ್ (Shashi Kumar) ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಉತ್ತಮ ಚಿಕಿತ್ಸೆ ಕೊಡಿಸಿದ ಬಳಿಕ ಕುಮಾರ್ ಚೇತರಿಸಿಕೊಳ್ಳುತ್ತಾರೆ ಹಾಗೂ ವಿದೇಶಕ್ಕೆ( foreign) ಹೋಗಿ ತಮ್ಮ ಮುಖದ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡು ಬಂದರು. ಅನಂತರ ಸಿನಿಮಾ ರಂಗದಲ್ಲಿ ಕಂಬ್ಯಾಕ್ (come back) ಮಾಡುವ ಪ್ರಯತ್ನದಲ್ಲಿದ್ದಾಗ ಅವಕಾಶಗಳು ಹರಸಿ ಬರಲಿಲ್ಲ.

ಹೀಗೆ ಕಷ್ಟದ ಬದುಕಿನಲ್ಲಿ ಯಾರು ಶಶಿಕುಮಾರ್ (Shashi Kumar) ಅವರಿಗೆ ಸಹಾಯ ಮಾಡಲಿಲ್ಲ, ಆಸರೆಯುವ ಆಗಲಿಲ್ಲ. ಅವರ ಪ್ರತಿಯೊಂದು ಏಳು ಬೀಳುಗಳಲ್ಲಿಯೂ ಜೊತೆಗಿದ್ದದ್ದು ಅವರ ಪತ್ನಿ ಸರಸ್ವತಿ (Saraswati) ಅವರು ಮಾತ್ರ. ಈ ಪುಟದ ಮುಖಾಂತರ ನೀವು ಕೂಡ ಶಶಿಕುಮಾರ್ ಹಾಗೂ ಸರಸ್ವತಿ ಅವರ ಅಪರೂಪದ ಫೋಟೋಗಳನ್ನು ನೋಡಬಹುದಾಗಿದೆ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: