ಶನಿವಾರ ಈ ಒಂದು ವಸ್ತು ಮರೆತೂ ತಿನ್ನಬೇಡಿ ಶನಿದೇವರ ಕೋ’ಪಕ್ಕೆ ಗುರಿಯಾಗುತ್ತೀರಿ

0

ಹಿಂದೂ ಧರ್ಮದ ಪ್ರಕಾರ ಶನಿವಾರ ಶನಿ ದೇವರಿಗೆ ಮೀಸಲಾದ ದಿನವಾಗಿದೆ, ಶನಿ ದೇವರನ್ನು ನ್ಯಾಯದ ದೇವರು ಎಂದು ಕೂಡ ಕರೆಯುತ್ತಾರೆ. ಶನಿದೇವನನ್ನು ನವಗ್ರಹಗಳಲ್ಲಿ ಅತ್ಯಂತ ಕ್ರೂರ ಗ್ರಹ ಎಂದು ಪರಿಗಣಿಸಲಾಗಿದೆ. ಶನಿಯ ಕೋಪಕ್ಕೆ ಗುರಿಯಾದ ವ್ಯಕ್ತಿಗೆ ಉಳಿಗಾಲವಿರುವುದಿಲ್ಲ ಹಾಗೆ ಶನಿಯ ಕೃಪೆಗೆ ಒಳಗಾದರೆ ಜೀವನದ ಎಲ್ಲಾ ಕಷ್ಟಗಳು ಸಾಡೆ ಸಾತಿ ಶನಿ ದೋಷ ನಿವಾರಣೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ ಹೀಗಾಗಿ ಶನಿವಾರದಂದು ಶನಿದೇವನಿಗೆ ಇಷ್ಟವಾಗದೆ ಇರುವ ಯಾವುದೆ ಕೆಲಸಗಳನ್ನು ಮಾಡಬಾರದು ಒಂದು ವೇಳೆ ಹಾಗೆ ಮಾಡಿದರೆ ಜೀವನದಲ್ಲಿ ಅನಿಷ್ಟ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಶನಿವಾರದಂದು ಯಾವ ಯಾವ ಕೆಲಸವನ್ನು ಮಾಡಬಾರದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಶನಿವಾರದಂದು ಶನಿದೇವನೊಂದಿಗೆ ಹನುಮ ದೇವನನ್ನು ಕೂಡ ಆರಾಧಿಸಲಾಗುತ್ತದೆ. ಶನಿವಾರದಂದು ಕೆಲವು ವಸ್ತುಗಳನ್ನು ಸೇವಿಸಿದರೆ ಶನಿದೇವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಶನಿದೇವನ ಆಶೀರ್ವಾದ ಸಿಕ್ಕ ವ್ಯಕ್ತಿ ರಾಜನಾಗಿರುತ್ತಾನೆ ಆದರೆ ಶನಿದೇವನ ಕೋಪಕ್ಕೆ ಗುರಿಯಾದರೆ ಕಷ್ಟಕಾರ್ಪಣ್ಯಗಳು ತಪ್ಪಿದ್ದಲ್ಲ. ಸಾಡೆ ಸಾತಿ ಹಾಗೂ ಶನಿದೋಷ ನಡೆಸುತ್ತಿರುವವರು ಶನಿವಾರದಂದು ಕೆಲವು ಕೆಲಸಗಳನ್ನು ಮಾಡಲೇಬಾರದು.

ಧರ್ಮ ಗ್ರಂಥಗಳ ಪ್ರಕಾರ ಮಸೂರ ಬೇಳೆಯು ಕೆಂಪು ಬಣ್ಣದಿಂದ ಕೂಡಿದ್ದು ಮಂಗಳಗ್ರಹಕ್ಕೆ ಸಂಬಂಧಿಸಿದ್ದಾಗಿದೆ ಮಂಗಳ ಹಾಗೂ ಶನಿ ಎರಡು ಗ್ರಹಗಳು ಕೋಪದ ಗ್ರಹಗಳಾಗಿವೆ ಹೀಗಾಗಿ ಮಸೂರ ಬೇಳೆಯನ್ನು ಶನಿವಾರದಂದು ಯಾರೂ ಸೇವಿಸಬಾರದು. ಶನಿ ದೇವನಿಗೆ ತಣ್ಣನೆಯ ಆಹಾರ ಪದಾರ್ಥಗಳು ಇಷ್ಟವಾಗುತ್ತವೆ. ಶನಿ ದೇವನಿಂದ ಮುಕ್ತಿ ಹೊಂದಬೇಕಾದರೆ ಶನಿವಾರದ ದಿನ ಕೆಂಪು ಮೆಣಸಿನ ಕಾಯಿಯನ್ನು ಸೇವಿಸಬಾರದು ಒಂದು ವೇಳೆ ಸೇವಿಸಿದರೆ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಲು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ ಶುಕ್ರ ಗ್ರಹವು ಲೈಂಗಿಕ ಬಳಕೆಗಳಿಗೆ ಸಂಬಂಧಿಸಿದಂತೆ ಶನಿ ಆಧ್ಯಾತ್ಮಿಕತೆಗೆ ಸಂಬಂಧಿಸಿದಂತೆ ಹೀಗಾಗಿ ಶನಿವಾರದ ದಿನ ಹಾಲನ್ನು ಕುಡಿಯಬಾರದು ಹಾಗೆ ಶನಿವಾರ ದಿನ ಯಾವುದೇ ಮಾದಕ ದ್ರವ್ಯಗಳನ್ನು ಸೇವಿಸುವುದರಿಂದಲೂ ಶನಿದೇವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಊಟದಲ್ಲಿ ಉಪ್ಪಿನಕಾಯಿ ಇಲ್ಲವೆಂದರೆ ಊಟ ಸಂಪೂರ್ಣವಾಗುವುದಿಲ್ಲ ಅದರಲ್ಲೂ ಮಾವಿನಕಾಯಿ ಉಪ್ಪಿನಕಾಯಿ ಎಂದರೆ ಎಲ್ಲರಿಗೂ ಬಹಳ ಇಷ್ಟ ಆದ್ರೆ ಶನಿವಾರದ ದಿನ ಮಾವಿನಕಾಯಿ ಉಪ್ಪಿನಕಾಯಿಯನ್ನು ಸೇವಿಸಬಾರದು ಇದರಿಂದ ಶನಿದೇವನು ಕೋಪಗೊಳ್ಳುತ್ತಾನೆ ಹಾಗೂ ಸಂಪತ್ತಿನ ನಷ್ಟ ಮಾಡುತ್ತಾನೆ. ಶನಿವಾರದಂದು ಹಾಲು ಸೇವನೆ ನಿಷಿದ್ಧ ಆದಂತೆ ಮೊಸರಿನ ಸೇವನೆಯೂ ಮಾಡಬಾರದು ಆದರೆ ಹಾಲು ಮತ್ತು ಮೊಸರಿಗೆ ಬೆಲ್ಲ ಸೇರಿಸಿ ಸೇವಿಸಬಹುದು.

ಕಪ್ಪು ಎಳ್ಳು ಶನಿದೇವನಿಗೆ ಬಹಳ ಪ್ರಿಯವಾಗಿದೆ ಹೀಗಾಗಿ ಕಪ್ಪು ಎಳ್ಳನ್ನು ಶನಿವಾರದಂದು ಶನಿದೇವನಿಗೆ ಅರ್ಪಿಸುವುದರಿಂದ ಬೇಗನೆ ಸಂತುಷ್ಟನಾಗುತ್ತಾನೆ ಆದ್ರೆ ಕಪ್ಪು ಎಳ್ಳನ್ನು ಶನಿವಾರದಂದು ಸೇವಿಸಬಾರದು ಒಂದು ವೇಳೆ ಸೇವಿಸಿದರೆ ಶನಿದೇವನಿಗೆ ಅವಮಾನ ಮಾಡಿದಂತೆ. ಶನಿದೇವನ ಪೂಜೆಯಲ್ಲಿ ಕಪ್ಪು ಎಳ್ಳಿನ ತೈಲವನ್ನು ದಾನ ಮಾಡುವುದು, ಅಶ್ವತ ವೃಕ್ಷದ ಕೆಳಗೆ ಎಳ್ಳಿನ ದೀಪವನ್ನು ಹಚ್ಚಲಾಗುತ್ತದೆ ಆದರೆ ಶನಿವಾರದ ದಿನ ಕಪ್ಪು ಎಳ್ಳನ್ನು ಯಾವುದೆ ಕಾರಣಕ್ಕೂ ಖರೀದಿ ಮಾಡಬಾರದು.

ಶನಿವಾರದಂದು ಸಾಸಿವೆ ಎಣ್ಣೆಯನ್ನು ದಾನ ಮಾಡಬಹುದು ಆದರೆ ಅಂದು ಸಾಸಿವೆ ಎಣ್ಣೆಯನ್ನು ಖರೀದಿ ಮಾಡುವುದು ಅಶುಭವಾಗಿದೆ ಹಾಗೂ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಶನಿವಾರದಂದು ಸಾಸಿವೆ ಎಣ್ಣೆಯಿಂದ ತಯಾರಿಸಿದ ಆಹಾರವನ್ನು ನಾಯಿಗೆ ಕೊಡುವುದರಿಂದ ಶನಿಯ ಕೆಟ್ಟ ದೃಷ್ಟಿ ನಿವಾರಣೆಯಾಗುತ್ತದೆ. ಕಬ್ಬಿಣದ ವಸ್ತುಗಳನ್ನು ಶನಿವಾರ ಖರೀದಿಸಬಾರದು ಆದರೆ ಕಬ್ಬಿಣದ ವಸ್ತುಗಳನ್ನು ದಾನ ಮಾಡಬಹುದು ಇದರಿಂದ ಶನಿದೇವನ ವಿಶೇಷ ಅನುಗ್ರಹವನ್ನು ಪಡೆಯಬಹುದು.

ಶನಿವಾರದಂದು ಉಪ್ಪನ್ನು ಖರೀದಿಸಿದರೆ ಶನಿದೇವನು ಕೋಪಗೊಳ್ಳುತ್ತಾನೆ. ಆ ವ್ಯಕ್ತಿಯ ಸಾಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ ಆದ್ದರಿಂದ ಶನಿವಾರದಂದು ಉಪ್ಪನ್ನು ಖರೀದಿಸಲೇಬಾರದು. ಶನಿವಾರದಂದು ಕತ್ತರಿಯನ್ನು ಯಾರೂ ಖರೀದಿಸಬಾರದು ಇದರಿಂದ ಶನಿ ದೇವನಿಗೆ ಅಸಮಾಧಾನವಾಗುತ್ತದೆ ಒಂದು ವೇಳೆ ಕತ್ತರಿಯನ್ನು ಖರೀದಿಸಿದರೆ ಕುಟುಂಬದ ಸದಸ್ಯರ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಮೂಡುತ್ತದೆ. ಶನಿವಾರದ ದಿನ ಯಾರಾದರೂ ಬಡವರನ್ನು ಹೀಯಾಳಿಸುವುದು ಅವಮಾನಿಸಿದರೆ ಅವರಿಗೆ ಶನೀಶ್ವರನ ಶಾಪ ಕಟ್ಟಿಟ್ಟ ಬುತ್ತಿ. ಶನಿವಾರ ಯಾರಿಂದಲೂ ಚಪ್ಪಲಿ ಅಥವಾ ಶೂವನ್ನು ಉಡುಗೊರೆಯಾಗಿ ಪಡೆಯಬಾರದು ಹಾಗೂ ನಾವು ಯಾರಿಗೂ ಉಡುಗೊರೆ ಕೊಡಬಾರದು.

ಶನಿವಾರದಂದು ಪೂರ್ವ ಹಾಗೂ ಉತ್ತರ ದಿಕ್ಕಿಗೆ ಪ್ರಯಾಣಿಸಬಾರದು ಒಂದು ವೇಳೆ ಪ್ರಯಾಣ ಅನಿವಾರ್ಯವಿದ್ದಲ್ಲಿ ಶುಂಠಿ ತಿಂದು ಮನೆಯಿಂದ ಹೊರಗೆ ಹೋಗಿ ಐದು ಹೆಜ್ಜೆ ಹಿಂದೆ ಬಂದು ನಂತರ ಪ್ರಯಾಣವನ್ನು ಪ್ರಾರಂಭಿಸಬೇಕು. ಮದುವೆಯಾದ ಮಗಳನ್ನು ಅತ್ತೆಯ ಮನೆಗೆ ಶನಿವಾರದಂದು ಕಳುಹಿಸಬಾರದು. ನಾವು ಯಾವತ್ತೂ ಸುಳ್ಳನ್ನು ಹೇಳಬಾರದು ಅದರಲ್ಲೂ ಶನಿವಾರದಂದು ಸುಳ್ಳು ಹೇಳಿದರೆ ಶನಿದೇವನ ಕೋಪ್ಪಕೆ ಗುರಿಯಾಗಬೇಕಾಗುತ್ತದೆ. ಶನಿವಾರದಂದು ತಲೆ ಸ್ನಾನ ಮಾಡಬಾರದು ತಲೆ ಸ್ನಾನ ಮಾಡಿದರೆ ಮನೆಯಲ್ಲಿ ಏಳಿಗೆ ಕಡಿಮೆಯಾಗಿ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಯಾವತ್ತು ಪ್ರಾಣಿಗಳಿಗೆ ತೊಂದರೆ ಕೊಡಬಾರದು ಅದರಲ್ಲೂ ಶನಿವಾರ ಪ್ರಾಣಿಗಳಿಗೆ ತೊಂದರೆ ಕೊಡಬಾರದು ಎಂದು ಧರ್ಮ ಗ್ರಂಥಗಳಲ್ಲಿ ಉಲ್ಲೇಖವಾಗಿದೆ, ಶನಿವಾರ ಮಾಂಸಹಾರ ತಿನ್ನಬಾರದು. ಶನಿವಾರದಂದು ಸಾಧ್ಯವಾದಷ್ಟು ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು.

ಶನಿವಾರದಂದು ಹನುಮನ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ದೀಪ ಹಚ್ಚಬೇಕು ಅರಳಿ ಮರಕ್ಕೆ ಶನಿವಾರದಂದು ನೀರು ಹಾಕಿ ಭಕ್ತಿಯಿಂದ ಪೂಜಿಸಬೇಕು. ಶನಿವಾರದಂದು ಕಪ್ಪು ನೀಲಿ ವಸ್ತ್ರ ಹಾಗೂ ಕಪ್ಪು ಎಳ್ಳನ್ನು ದಾನ ಮಾಡಬೇಕು. ಶನಿವಾರ ಉಪವಾಸವಿದ್ದು ಶನಿ ದೇವಾಲಯಕ್ಕೆ ಹೋಗಿ ಎಣ್ಣೆಯನ್ನು ಅರ್ಪಿಸಬೇಕು, ಈ ದಿನ ಬಡವರಿಗೆ ಆಹಾರ ದಾನ ಮಾಡಬೇಕು. ಹೀಗೆ ಶನಿವಾರದಂದು ಶನಿದೇವನ ಕೋಪಕ್ಕೆ ಗುರಿಯಾಗಬಾರದು ಆದ್ದರಿಂದ ಈ ಲೇಖನದಲ್ಲಿನ ಮಾಹಿತಿಯನ್ನು ನೆನಪಿನಲ್ಲಿಡಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: