Sangeeta Bhat : ಎರಡನೇ ಸಲ ಸಿನಿಮಾದ ನಟಿ ಸಂಗೀತ ಭಟ್ ಅವರ ಮದುವೆ ಸುಂದರ ಕ್ಷಣಗಳು ಹೇಗಿತ್ತು ಗೊತ್ತಾ? ಅಮೂಲ್ಯವಾದ ಕ್ಷಣಗಳು ನೋಡಿ!!

0

Sangeeta Bhat : ನಟಿ ಸಂಗೀತ ಭಟ್ (Sangeeta bhatt) ಅವರ ಹೆಸರು ಕೇಳುತ್ತಿದ್ದ ಹಾಗೆ ವಸಿಷ್ಠ ಸಿಂಹ ಅವರೊಂದಿಗಿನ ಮರತೆ ಹೋದೆನು ಹೊರಟ ಕಾರಣ.. ಎಂಬ ಹಾಡು ನೆನಪಿಗೆ ಬಂದುಬಿಡುತ್ತದೆ. ಹಾಲಿನಂತಹ ಮೈಬಣ್ಣ ಅದ್ಭುತ ಸೌಂದರ್ಯ ಹಾಗೂ ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ ಅಲ್ಪಾವಧಿಯಲ್ಲಿಯೇ ಸ್ಟಾರ್ ಪಟ್ಟಕ್ಕೇರಿದ ಕಲಾವಿದರಲ್ಲೊಬ್ಬರು. ಕಾಲ ಕಳೆದಂತೆ ಸಿನಿಮಾಗಳ ಅವಕಾಶಗಳು ಕಡಿಮೆಯಾಗುತ್ತಾ ಹೋದ ಹಾಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ನಟಿ ಮದುವೆಯಾದದ್ದು ಯಾರನ್ನು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಹೌದು ಸ್ನೇಹಿತರೆ ನಟಿ ಸಂಗೀತ ಭಟ್ ಅವರು ಕಸ್ತೂರಿ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಪಂಜರದ ಗಿಳಿ(Panjarada gili) ಎಂಬ ಸೀರಿಯಲ್ ಮೂಲಕ ಪ್ರಪ್ರಥಮ ಬಾರಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆನಂತರ ಸುವರ್ಣ ಚಾನೆಲ್ ನಲ್ಲಿ ಬರುತ್ತಿದ್ದ ಭಾಗ್ಯವಂತರು(bhagyavantharu), ನೀಲಿ(neeli), ಚಂದ್ರ ಚಕೋರಿ(Chandra Chakori) ಮತ್ತು ಚಂದ್ರಮುಖಿ(Chandramukhi) ಯಂತಹ ಸೀರಿಯಲ್ಗಳಲ್ಲಿ ಅಭಿನಯಿಸುತ್ತ ಜನಪ್ರಿಯತೆ ಪಡೆದುಕೊಳ್ಳುತ್ತಾರೆ.

ಲೈಫ್ ಸೂಪರ್ ಗುರು(life super Guru ) ಎಂಬ ಟಿವಿ ಶೋ ಮೂಲಕ ಜನರ ಮನಸಿಗೆ ಇನ್ನಷ್ಟು ಹತ್ತಿರವಾದ ಸಂಗೀತ ಭಟ್ ಅವರು 2014ರಲ್ಲಿ ಪ್ರೀತಿ ಗೀತಿ ಇತ್ಯಾದಿ ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಹೀಗೆ ಮೊದಲ ಸಿನಿಮಾದಲ್ಲಿಯೇ ಪವನ್ ಒಡೆಯರ್ (Pawan Wadeyar) ಅವರೊಂದಿಗೆ ಕೆಲಸ ಮಾಡಿದ ಸಂಗೀತ ಕನ್ನಡ ಮಾತ್ರ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಭಾಷೆಗಳಲ್ಲಿ ನಟಿಸುವ ಮೂಲಕ ತಮ್ಮ ನಟನೆಯ ಛಾಪನ್ನು ಇತರ ಭಾಷೆಗೂ ಹೊರಡಿಸಿದ್ದಾರೆ.

ಇನ್ನು 2017ರಲ್ಲಿ ತೆರೆಕಂಡ ಡಾಲಿ ಧನಂಜಯ್ ಅವರ ಎರಡನೇ ಸಲ( Eradane sala) ಹಾಗೂ ವಶಿಷ್ಠ ಸಿಂಹ ಅವರ ದಯವಿಟ್ಟು ಗಮನಿಸಿ (Dayavittu gamanisi) ಎಂಬ ಸಿನಿಮಾಗಳು ಸಂಗೀತ ಭಟ್ (Sangeeta bhatt) ಅವರ ವೃತ್ತಿ ಬದುಕಿಗೆ ಮಹತ್ತರವಾದ ಮೈಲುಗಳನ್ನು ಹಾಕಿತು ಎಂದರೆ ತಪ್ಪಾಗಲಾರದು ಸಮ ಸಾಧಾರಣ ದಿಟ್ಟ ಅಭಿನಯದ ಮೂಲಕ ವಿಶಿಷ್ಟ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿರುವ ಸಂಗೀತ ಅವರು.

2018ರಲ್ಲಿ ಮೀಟು( Me too) ಚಳುವಳಿಯೊಂದಿಗೆ ಸೇರ್ಪಡೆಗೊಂಡು ಚಿತ್ರ ಬದುಕಿನಲ್ಲಿ ತಾವು ಎದುರಿಸಿದಂತಹ ಕರಾಳತೆಯ ಕುರಿತು ಮುಕ್ತವಾಗಿ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ವಿವಾದಕ್ಕೂ ಗುರಿಯಾದರು. ಈ ಕಾರಣದಿಂದ ಅವಕಾಶಗಳು ನಟಿ ಸಂಗೀತ ಭಟ್ (Sangeeta bhatt) ಅವರ ಕೈತಪ್ಪಿ ಹೋಯಿತು ಎಂದರೆ ತಪ್ಪಾಗಲಾರದು‌.

ಇನ್ನು ತಮ್ಮ ಬಹುಕಾಲದ ಗೆಳೆಯ ಸುದರ್ಶನ್ ರಂಗಪ್ರಸಾದ್(Sudarshan Rangaprasad) ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಗೀತ ಭಟ್ (Sangeeta bhatt) ಅವರ ಮದುವೆಯ ಅಪರೂಪದ ಫೋಟೋಗಳನ್ನು ಈ ಪುಟದ ಮುಖಾಂತರ ನೋಡಬಹುದಾಗಿದೆ.

Leave A Reply

Your email address will not be published.

error: Content is protected !!
Footer code: