ಭಾರಿ ವೈರಲ್ ಆಗುತ್ತಿದೆ ಅಭಿ ಅವಿವ ಮದುವೆ ಆಲ್ಬಮ್, ಮಂಡ್ಯ ಸ್ಟೈಲ್ ಮದುವೆಗೆ ಯಾವೆಲ್ಲ ಸ್ಟಾರ್ ಸೆಲೆಬ್ರಿಟಿಗಳು ಆಗಮಿಸಿದರೂ ನೋಡಿ!

0

ಸ್ನೇಹಿತರೆ ಕನ್ನಡದ ಮತ್ತೊಂದು ಮುದ್ದಾದ ಜೋಡಿಗಳು ದಾಂಪತ್ಯ ಜೀವನದ ಕೊಂಡಿ ಬೆಸೆದುಕೊಂಡಿದ್ದಾರೆ ರೆಬಲ್ ಸ್ಟಾರ್ ಅಂಬರೀಶ್(Ambareesh) ಅವರ ಪುತ್ರ ಅಭಿಷೇಕ್ ಅಂಬರೀಶ್( Abhishek Ambareesh) ಮತ್ತು ಖ್ಯಾತ ಉದ್ಯಮಿ ಹಾಗೂ ಫ್ಯಾಷನ್ ಡಿಸೈನರ್ ಪ್ರಶಾಂತ್ ಬಿಡಪ್ಪ( Prashant bidappa) ಅವರ ಪುತ್ರಿ ಅವಿವ ಬಿಡಪ್ಪ (Aviva bidapa) ಕಳೆದ ಜೂನ್ 5ನೇ ತಾರೀಕಿನಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮಂಡ್ಯ ಸ್ಟೈಲ್ ನಲ್ಲಿ ಅಭಿಮಾನಿಗಳಿಗೋಸ್ಕರ ಬೀಗರೂಟದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, ಅಭಿಮಾನಿಗಳಿಂದ ಸ್ಟಾರ್ ಸೆಲೆಬ್ರಿಟಿಗಳವರೆಗೂ ಹಾಜರಿದ್ದ ಇವರಿಬ್ಬರ ಮದುವೆಯ ಮಧುರ ಫೋಟೋಗಳು ಹೇಗಿದೆ? ಯಾವೆಲ್ಲ ಸೆಲೆಬ್ರಿಟಿಗಳು (celebrities) ಬಂದು ನವ ವಧು ವರರನ್ನು ಆಶೀರ್ವದಿಸಿದರು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಮದುವೆಯಲ್ಲಿ ಅಭಿಷೇಕ್ ಅಂಬರೀಶ್ ಅವರು ಮುತ್ತು(Beads)ಗಳಿಂದ ತಯಾರಿಸಲಾದ ಮೈಸೂರು ಪೇಟವನ್ನು ಧರಿಸಿ ಸಾಂಪ್ರದಾಯಿಕ ಉಡುಗೆ (traditional outfit) ಯಲ್ಲಿ ಮಿಂಚಿದರು. ಇತ್ತ ಅವಿವಾ ಬಿಡಪ್ಪ ಅವರು ಕೂಡ ಖ್ಯಾತ ಫ್ಯಾಶನ್ ಡಿಸೈನರ್(Fashion Designer) ಗಳಿಂದ ಮಾಡಲಾದ ಸೀರೆಯಲ್ಲಿ ಕಂಗಳಿಸಿದರು.

ಅರಿಶಿನ ಶಾಸ್ತ್ರದಿಂದ ಹಿಡಿದು ಕೈ ಬಳೆ ಮೆಹಂದಿ ಹೀಗೆ ಮುಂತಾದ ನಾನಾ ರೀತಿಯ ಶಾಸ್ತ್ರಗಳ ಎಲ್ಲಾ ಫೋಟೋಗಳನ್ನು ವಿವಾಹವು ಅಭಿಷೇಕ್ ಅವಿವಾ (Abhishek Aviva) ಇಬ್ಬರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದರು. ನಾಲ್ಕೈದು ವರ್ಷಗಳಿಂದ ಪ್ರೀತಿಸಿ ಆನಂತರ ಅಧಿಕೃತವಾಗಿ ಮಾಹಿತಿ ಹಂಚಿಕೊಂಡು.

ಅದ್ದೂರಿಯಾಗಿ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವಿವಾ – ಅಭಿ( Avivaa-Abhi) ಅವರ ಮದುವೆಗೆ ಕನ್ನಡ ಚಿತ್ರರಂಗದ ಖ್ಯಾತ ಸೆಲೆಬ್ರಿಟಿಗಳಾದ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಪ್ರಜ್ವಲ್ ದೇವರಾಜ್, ಮೇಘನ ರಾಜ್ ಆಗಮಿಸಿ ನವ ವಧು ವರರನ್ನು ಅರಸಿ ಆಶೀರ್ವದಿಸಿದರು.

ರಾಜಕೀಯ ಪ್ರಭಾವಿಗಳು ಕೂಡ ಅಭಿ ಹಾಗೂ ಅವಿವಾ ಅವರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಫೋಟೋಗೆ ಫೋಸ್ ನೀಡಿದರು. ಸದ್ಯ ಅಭಿ ಹಾಗೂ ಅವಿವಾ ಇಬ್ಬರು, ಹನಿಮೂನ್ಗೆ (honeymoon) ಹಾರಿದು ಈ ಎಲ್ಲಾ ಕಾರ್ಯಕ್ರಮಗಳು ಮುಗಿದ ಬಳಿಕ ಅಭಿಷೇಕ್ ಅವರು ಮತ್ತೆ ತಮ್ಮ ಬ್ಯಾಡ್ ಮ್ಯಾನರ್ಸ್(Bad manners) ಸಿನಿಮಾ ಸೆಟ್ ಸೇರಲಿದ್ದಾರೆ ಎಂಬ ಅಧಿಕೃತ ಮಾಹಿತಿಯು ಹೊರ ಬಿದ್ದಿದೆ.

Leave A Reply

Your email address will not be published.

error: Content is protected !!
Footer code: