WhatsApp Group Join Now
Telegram Group Join Now

Rakshith Shetty ಸ್ನೇಹಿತರೆ 2010ರಲ್ಲಿ ನಮ್ ಏರಿಯಾದಲ್ಲಿ ಒಂದಿನ (Nam areadalli ondina) ಎಂಬ ಸಿನಿಮಾದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದಂತಹ ರಕ್ಷಿತ್ ಶೆಟ್ಟಿ (Rakshith Shetty), ಮೊದಲ ಸಿನಿಮಾದಲ್ಲಿಯೇ ಬಹುದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತಾರೆ. ಆನಂತರ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಕನ್ನಡದ ಬಹು ಬೇಡಿಕೆಯ ನಟನಾಗಿ ಹೊರಹೊಮ್ಮಿದ ರಕ್ಷಿತ್ ಶೆಟ್ಟಿ (Rakshith Shetty) ಇಂದು ಅಸಂಖ್ಯಾತ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡು ಸಿಂಪಲ್ ಸ್ಟಾರ್ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ.

ತಮ್ಮ ಮುಗ್ಧ ಮಾತುಗಾರಿಕೆ, ಇತರರನ್ನು ಬಹಳ ಪ್ರೀತಿಯಿಂದ ಕಾಣುವ ನಡುವಳಿಕೆ ಎಲ್ಲದರಿಂದ ನಟ ರಕ್ಷಿತ್ ಶೆಟ್ಟಿ ಪ್ರತಿಬಾರಿಯೂ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಲಿರುತ್ತಾರೆ. ಆರನೇ ತಾರೀಕು ಜೂನ್ 1983 ರಂದು ಉಡುಪಿ ಜಿಲ್ಲೆಯಲ್ಲಿ ಶ್ರೀಧರ್ ಶೆಟ್ಟಿ ಮತ್ತು ರಂಜಿನಿ ಶೆಟ್ಟಿ ಎಂಬ ದಂಪತಿಗಳಿಗೆ ಜನಿಸಿದ ರಕ್ಷಿತ್ ಶೆಟ್ಟಿ ಅವರಿಗೆ ರಂಜಿತ್ ಶೆಟ್ಟಿ ಮತ್ತು ರಶ್ಮಿ ಶೆಟ್ಟಿ ಎಂಬ ಅಣ್ಣ ಮತ್ತು ಅಕ್ಕನಿದ್ದು,

ಆಗಾಗ ತಮ್ಮ ಕುಟುಂಬದ ಫೋಟೋಗಳನ್ನು ರಕ್ಷಿತ್ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವ ಮೂಲಕ ವೈರಲಾಗುತ್ತಿರುತ್ತಾರೆ. ಅದರಂತೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿ ಅವರ ಕುಟುಂಬದ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ರಕ್ಷಿತ್ ಶೆಟ್ಟಿ ಅವರ ಬರ್ತಡೆ ಸಂಭ್ರಮದಲ್ಲಿ ತೆಗೆಯಲಾದ ಈ ಫೋಟೋಗಳು ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.

ಇನ್ನು ಕಳೆದ ವರ್ಷ ಅಂದರೆ 2022 ರಂದು ಚಾರ್ಲಿ ತ್ರಿಬ್ಬಲ್ ಸೆವೆನ್ ಸಿನಿಮಾದ ಮೂಲಕ ದೇಶದಾದ್ಯಂತ ಬಹು ದೊಡ್ಡ ಮಟ್ಟದ ಸಂಚಲನ ಸೃಷ್ಟಿ ಮಾಡಿದ್ದಂತಹ ರಕ್ಷಿತ್ ಶೆಟ್ಟಿ (Rakshith Shetty) ಅವರ ಮುಂದಿನ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ? ಎಂಬುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಹೌದು ಗೆಳೆಯರೇ ರಕ್ಷಿತ್ ಶೆಟ್ಟಿ ಅವರು ಸದ್ಯ ಸಪ್ತಸಾಗರದ ಆಚೆ ಎಲ್ಲೂ, ರಿಚರ್ಡ್ ಆಂಟೋನಿ ಮತ್ತು ಪುಣ್ಯಕೋಟಿ ಎಂಬ ಮೂರು ಮೂರು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದು,

ಮೂರರಲ್ಲಿ ಒಂದನಾದರೂ ಬೇಗ ತೆರೆಗೆ ತನ್ನಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಸಪ್ತಸಾಗರ ದಾಚೆಯಲ್ಲೂ (Saptasagaradache Ello)ಸಿನಿಮಾದ ಎರಡನೇ ಹಂತದ ಶೂಟಿಂಗ್ ಕೆಲಸಗಳು ಬಹುತೇಕ ಮುಗಿದಿದ್ದು, ಸಾಧ್ಯವಾದರೆ ಈ ವರ್ಷದಲ್ಲೇ ಸಿಂಪಲ್ ಸ್ಟಾರ್ (Simple star) ಅನ್ನು ತೆರೆಯ ಮೇಲೆ ಕಾಣಲು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ ವಿಜಯ ರಾಘವೇಂದ್ರ ಪತ್ನಿ ಜೊತೆ ರಾಗಿಣಿ ಪ್ರಜ್ವಲ್ ದೇವರಾಜ್ ಅವರ ಸಿಹಿ ನೆನಪು!

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: