Avinash Malavika ಕನ್ನಡ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದಿರುವ, ಅವಿನಾಶ್ ಮಾಳವಿಕಾ ಅವರ ಮುದ್ದು ಕುಟುಂಬ ಹೇಗಿದೆ ನೋಡಿ

0

Avinash & Malavika ಸ್ನೇಹಿತರೆ ಸ್ಯಾಂಡಲ್ವುಡ್ನ ಅಚ್ಚುಮೆಚ್ಚಿನ ಜೋಡಿ ಎನಿಸಿಕೊಂಡಿರುವಂತಹ ಅವಿನಾಶ್ ಹಾಗೂ ಮಾಳವಿಕಾ(Avinash & Malavika) ಅವರು 2001ನೇ ಇಸವಿಯಲ್ಲಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೀಗೆ ತೆರೆಯ ಮೇಲೆ ಹಾಗೂ ನಿಜ ಜೀವನದಲ್ಲಿಯೂ ಯಶಸ್ವಿ ಜೋಡಿ (Successful couples) ಎನಿಸಿಕೊಂಡಿರುವಂತಹ ಅವಿನಾಶ್ ಹಾಗೂ ಮಾಳವಿಕ ಅವರು ಒಬ್ಬರ ಸಿನಿಮಾ ಬದುಕಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಬಹಳನೇ ಅನ್ಯುನ್ಯವಾಗಿ ಜೀವನ ನಡೆಸುತ್ತಿದ್ದಾರೆ.

ಈ ದಂಪತಿಗಳಿಗೆ ಎಂಬ ಮುದ್ದು ಮಗನಿದ್ದು ಆತ ಹುಟ್ಟಿದಾಗಿನಿಂದಲೂ ವಿಕಲಚೇತನನಾಗಿದ್ದಾನೆ. ಹೌದು ಗೆಳೆಯರೇ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಬಗ್ಗೆ ನೂರಾರು ಕನಸನ್ನು ಕಂಡಿರುತ್ತಾರೆ. ಮಗು ಗರ್ಭದಲ್ಲಿರುವಾಗ ತಾಯಿಯಾದವಳು ಅದರ ಮುಖ ಪುಟ್ಟ ಪುಟ್ಟ ಕೈ-ಕಾಲುಗಳು ಹೇಗಿರುತ್ತವೆ ಎಂಬುದನ್ನು ನೋಡಲು ಬಹಳ ಉತ್ಸುಕಳಾಗಿರುತ್ತಾಳೆ. ಆದರೆ ಕೆಲವು ಬಾರಿ ಆ ನಿರೀಕ್ಷೆಗಳು ಸುಳ್ಳಾಗುವುದು ಸಹಜ.

ಇದನ್ನು ಹೆತ್ತವರು ಸ್ವೀಕರಿಸಿದರು ಸಮಾಜ ಅಂತಹ ಮಕ್ಕಳನ್ನು ನೋಡುವ ದೃಷ್ಟಿಗೆ ಬೇರೆ ಇರುತ್ತದೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳಬಾರದೆಂಬುದನ್ನು ಅವಿನಾಶ್ ಮತ್ತು ಮಾಳವಿಕಾ ದಂಪತಿಗಳು ತೋರಿಸಿಕೊಟ್ಟಿದ್ದಾರೆ. ಹೌದು ಗೆಳೆಯರೇ ಮಾಳವಿಕಾ ಮತ್ತು ಅವಿನಾಶ್ ಅವರ ಪುತ್ರ ಗಾಲವ್ ಜನಿಸಿದಾಗ ಆತ ಎಲ್ಲಾ ಮಗುವಿನಂತೆ ಸಾಮಾನ್ಯವಾಗಿರಲಿಲ್ಲ.

50 ದಿನಗಳ ಕಾಲ ಐಸಿಯುನಲ್ಲಿ ಇದ್ದು ಅನಂತರಾ ಮಗುವಿಗೆ ಬೇಕಾದ ಚಿಕಿತ್ಸೆ ಕೊಡಿಸಿದ ನಂತರವೂ ಆತ ಸರಿಹೋಗದೆ ಇರುವುದನ್ನು ಗಮನಿಸಿ ಜನಟಿಕ್ ಟೆಸ್ಟ್ ಮಾಡಿಸಿದಾಗ ಆತನಿಗೆ ಉಲ್ಫ್ ಏರಿಸ್ಕಾರ್ನ್ ಸಿಂಡ್ರೋಮ್ ಇರುವ ಮಾಹಿತಿ ಗೊತ್ತಾಗುತ್ತದೆ. ಇಂತಹ ಮಕ್ಕಳಿಗೆ ಬುದ್ಧಿಮಾನ್ಯತೆಯ ಜೊತೆಗೆ ಬೆಳವಣಿಗೆಯ ಕೊರತೆ ಹಾಗೂ ನಡೆಯಲು ಆಗದಂತಹ ಪರಿಸ್ಥಿತಿ ಇರುತ್ತದೆ.

ಅಲ್ಲದೆ ಇಂತಹವರ ಆಯಸ್ಸು ಸಹ ನಿಶ್ಚಯವಾಗಿರುವುದಿಲ್ಲ ಜಗತ್ತಿನಲ್ಲಿರುವ ಒಟ್ಟು ಮಕ್ಕಳಲ್ಲಿ ಕೇವಲ ಎರಡು ಸಾವಿರದ ಮಕ್ಕಳು ಮಾತ್ರ ಈ ರೀತಿಯಾದಂತಹ ಸಮಸ್ಯೆಗೆ ಒಳಗಾಗುತ್ತಾರೆ ಎಂದು ತಮ್ಮ ಮಗನಿಗೆ ಇರುವ ಸಮಸ್ಯೆಯ ಕುರಿತು ಹೇಳಿಕೊಂಡು ಭಾವುಕರಾದರು. ಆಗಾಗ ತಮ್ಮ ಮಗನೊಂದಿಗಿನ ಫೋಟೋಗಳನ್ನು(photos) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಈ ದಂಪತಿಗಳು ತಮ್ಮ ಮಗನನ್ನು (son) ಎಳೆ ಕಂದನಂತೆ ಅಷ್ಟೇ ಪ್ರೀತಿ ಹಾಗೂ ಮುದ್ದಿನಿಂದ ಕಣ್ಣಂಚಿನಲ್ಲಿ ಕಾಯುತ್ತಿದ್ದಾರೆ.

Leave A Reply

Your email address will not be published.

error: Content is protected !!