WhatsApp Group Join Now
Telegram Group Join Now

Rakshith Shetty: ಸ್ನೇಹಿತರೆ, ನೆನ್ನೆ ಅಣ್ಣ ತಂಗಿಯರ ವಿಶೇಷ ರಾಕಿ ಹಬ್ಬದ ಅಂಗವಾಗಿ ಸಾಕಷ್ಟು ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ತಮ್ಮ ಪ್ರೀತಿಯ ಅಣ್ಣಂದಿರಿಗೆ ರಾಖಿ ಕಟ್ಟಿ ಆರತಿ ಬೆಳಗಿ ಆಶೀರ್ವಾದ ಪಡೆದುಕೊಂಡಿರುವಂತಹ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ಪ್ರಗತಿ ಹಾಗೂ ರಿಷಬ್ ಶೆಟ್ಟಿ (Rishab Shetty)ಅವರ ಬಾಂಧವ್ಯ ನೆಟ್ಟಿಗರ ಗಮನ ಸೆಳೆದಿದೆ. ಹೌದು ಗೆಳೆಯರೇ ಪ್ರತಿ ಬಾರಿಯಂತೆ ಈ ಬಾರಿಯೂ ಮರೆಯದೆ ಪ್ರಗತಿ ಶೆಟ್ಟಿ (Pragathi Shetty) ರಿಷಬ್ ಶೆಟ್ಟಿ ಅವರೊಂದಿಗೆ ವಿಶೇಷವಾಗಿ ರಾಕಿ ಹಬ್ಬವನ್ನು ಆಚರಿಸಿದ್ದು,

ನಟ ರಕ್ಷಿತ್ ಶೆಟ್ಟಿ (Rakshith Shetty) ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ಪ್ರೀತಿಯಿಂದ ದೀಪಾ ಬೆಳಗಿ ಹಣೆಗೆ ತಿಲಕವನ್ನು ಇಟ್ಟು ಕೈಗೆ ರಾಕಿ ಕಟ್ಟಿ ಆಶೀರ್ವಾದ ಪಡೆದುಕೊಂಡಿದ್ದಾರೆ. ತಂಗಿಗೆ ಪ್ರೀತಿಯಿಂದ ಸಿಹಿ ತಿನ್ನಿಸಿ ಅಪ್ಪಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದು ಅದೆಲ್ಲವನ್ನು ಪ್ರಗತಿಶೆಟ್ಟಿ ಅವರು ತಮ್ಮ instagram ಹಾಗೂ facebook ಖಾತೆಯಲ್ಲಿ ಪೋಸ್ಟ್ ಮಾಡಿ ರಕ್ಷಾಬಂಧನದ ಸುಂದರ ಕ್ಷಣಗಳು,

ನನ್ನ ಪ್ರೀತಿಯ ಚಿಂಟು ಅಣ್ಣನ ಜೊತೆ ಎಂಬ ಕ್ಯಾಪ್ಶನ್ ಬರೆದು ರಕ್ಷಿತ್ ಶೆಟ್ಟಿ ಅವರ ಅಡ್ಡ ಹೆಸರನ್ನು ರಿವೀಲ್ ಮಾಡಿದ್ದಾರೆ. ಹೌದು ಗೆಳೆಯರೇ ರಿಷಬ್ ಶೆಟ್ಟಿ ಮತ್ತು ಪ್ರಗತಿಯವರು ಚಿಂಟು ಎಂದು ಪ್ರೀತಿಯಿಂದ ಕರೆಯುತ್ತಾರೆಂತೆ, ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ಇವರಿಬ್ಬರ ಭಾಂದವ್ಯ ಕಂಡಂತಹ ನೆಟ್ಟಗರು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೆ ಹರಿಸುವ ಮೂಲಕ ಫೋಟೋಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವಂತಹ ಪ್ರಗತಿ ತಮ್ಮ ಪತಿಯ ಕಾಂತರಾ ೨ (Kantara 2) ಚಿತ್ರಕ್ಕೆ ಈ ಬಾರಿಯೂ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಇತ್ತ ರಕ್ಷಿತ್ ಶೆಟ್ಟಿ(Rakshith Shetty) ಅವರು ಸೆಪ್ಟೆಂಬರ್ 1ನೇ ತಾರೀಕು ತೆರೆ ಕಾಣಲಿರುವ ಸಪ್ತಸಾಗರದಾಚೆಯಲ್ಲೂ(Sapta sagaradache Ello) ಸಿನಿಮಾದ ಪ್ರಮೋಶನ್ ಕೆಲಸಗಳಲ್ಲಿ ಬಿಜಿಯಾಗಿದ್ದು ಮನು ಆಗಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: