ಈ ದೇವಸ್ಥಾನದಲ್ಲಿ ಗಣಪನಿಗೆ ಹೂವಿನಿಂದಲ್ಲ ಎರಡು ಕೋಟಿಗೂ ಅಧಿಕ ಅಸಲಿ ನೋಟಿನಿಂದ ಅಲಂಕಾರ!

0

ಸ್ನೇಹಿತರೆ, ಗಣೇಶ ಹಬ್ಬ (Ganesha Festival) ಬಂತೆಂದರೆ ಸಾಕು ಪ್ರತಿ ಗಲ್ಲಿ ಗಲ್ಲಿಯಲ್ಲೂ ಮನೆಯಲ್ಲಿಯೂ ಸಡಗರ ಸಂಭ್ರಮಕ್ಕೆ ಮಿತಿಯೇ ಇರೋದಿಲ್ಲ, ಅಷ್ಟರ ಮಟ್ಟಿಗೆ ಎಲ್ಲರೂ ಬಹಳ ಅದ್ದೂರಿಯಿಂದ ಆಚರಿಸುವಂತಹ ಈ ಹಬ್ಬವನ್ನು ಇಂದು ನಾಡಿನ ಸಮಸ್ತ ಜನರು ಆಚರಿಸುತ್ತಿದ್ದಾರೆ. ಹೀಗೆ ತಮ್ಮ ತಮ್ಮ ಮನೆ ಹಾಗೂ ಏರಿಯಾದಲ್ಲಿ ಕೂರಿಸಿರುವಂತಹ ಗಣೇಶನ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುವ ಸಂದರ್ಭದಲ್ಲಿ ವಿಡಿಯೋ ಒಂದು ನೆಟ್ಟಿಗರನ್ನು ಆಕರ್ಷಿಸುತ್ತಿದ್ದು,

ಹೂ ಹಣ್ಣು ಹಂಪಲುಗಳಿಂದ ಗಣೇಶನನ್ನು ಅಲಂಕಾರ ಮಾಡುವ ಬದಲು ಈ ದೇವಸ್ಥಾನದವರು ಗರಿಗರಿ ನೋಟಿನಿಂದ ಗಣೇಶನಿಗೆ ಮಾಲೆಯನ್ನೇ ಮಾಡಿ ಹಾಕಿದ್ದಾರೆ. ಹೌದು ಸ್ನೇಹಿತರೆ ಬೆಂಗಳೂರಿನ ಪುಟ್ಟಿನೇಹಳ್ಳಿಯಲ್ಲಿ (Puttenahalli) ಇರುವಂತಹ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ (Sathya Sai Ganapathi temple)ಈ ರೀತಿಯಾಗಿ ಆಭರಣ ನಾಣ್ಯ ಹಾಗೂ ನೋಟಿನಿಂದ ಗಣಪತಿ ಬಪ್ಪನಿಗೆ ಅಲಂಕಾರವನ್ನು ಮಾಡಿದ್ದು ನೋಡುಗರನ್ನು ಆಕರ್ಷಿಸುತ್ತಿದೆ.

ಸಾಮಾನ್ಯವಾಗಿ ದುಡ್ಡಿನಿಂದ ದೇವರಿಗೆ ಅಲಂಕಾರ ಮಾಡಬೇಕೆಂದರೆ ಅವುಗಳ ಮಾಲೆ ಮಾಡಿ ಹಾಕಿ ಅಥವಾ ದೇವರ ಮುಂದೆ ನೋಟುಗಳನ್ನು ಜೋಡಿಸುವುದನ್ನು ನಾವು ಕಂಡಿದ್ದೇವೆ. ಆದರೆ ಈ ದೇವಸ್ಥಾನದವರು ಒಂದು ಹೆಜ್ಜೆ ಮುಂದೆ ಹೋಗಿ ಇಡೀ ದೇಗುಲವನ್ನೇ ನೋಟು ಹಾಗೂ ನಾಣ್ಯಗಳಿಂದ ಡೆಕೋರೇಷನ್ ಮಾಡಿದ್ದಾರೆ 5, 10, 20ರ ನಾಣ್ಯಗಳನ್ನು ಬಳಸಲಾಗಿದೆ ಅದರಂತೆ 10 20 50 100 200 500 ಹಾಗೂ 2,000 ನೋಟುಗಳಿಂದ ಹೂವಿನ ಸೆರೆಮಾಲೆಯಂತೆ ವಿಶೇಷವಾಗಿ ಗಣಪತಿ ಬಪ್ಪನನ್ನು ಅಲಂಕರಿಸಿದ್ದಾರೆ.

ಮಾಹಿತಿಯ ಪ್ರಕಾರ ಎರಡು ಕೋಟಿಗೂ ಹೆಚ್ಚು ನೋಟುಗಳು ಹಾಗೂ 50 ಲಕ್ಷಕ್ಕೂ ಹೆಚ್ಚು ನಾಣ್ಯಗಳನ್ನು ಬಳಸಿ ಈ ರೀತಿ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್ ವತಿಯಿಂದ ಅಲಂಕಾರವನ್ನು ಮಾಡಲಾಗಿದ್ದು, ಇಡೀ ದೇಗುಲವನ್ನೇ ನೋಟಿನ ಮನೆಯಂತೆ ಮಾಡಿಬಿಟ್ಟಿದ್ದಾರೆ. ಹೀಗೆ ದೇವಸ್ಥಾನದಲ್ಲಿ ನೋಟುಗಳ ಮಧ್ಯೆ ವೈಭವೋಪೂರಿತವಾಗಿ ಕುಳಿತಿರುವ ಗಣಪತಿ ಬಪ್ಪನನ್ನು ನೋಡುವುದೇ ಚೆಂದ.

Leave A Reply

Your email address will not be published.

error: Content is protected !!