2024 ಹೊಸ ವರ್ಷ ಮೇಷ ರಾಶಿಯವರಿಗೆ ಅದೃಷ್ಟ ತರುತ್ತಾ..

0

ಹೊಸ ವರ್ಷ ಬಂತೆಂದರೆ ಸಾಕು ಎಲ್ಲರಿಗೂ ಹೊಸ ವರ್ಷದ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ವರ್ಷಗಳು ಬದಲಾದಂತೆ ರಾಶಿ ಭವಿಷ್ಯದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಹಿಂದಿನ ವರ್ಷ ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ರಾಶಿ ಚಕ್ರಗಳ ಬದಲಾವಣೆಯಿಂದ ವರ್ಷದಿಂದ ವರ್ಷಕ್ಕೆ ಪ್ರತಿಯೊಂದು ರಾಶಿಯ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಕೆಲವು ರಾಶಿಗಳು ಯೋಗ ರಾಜಯೋಗ ಹೀಗೆ ಹೆಚ್ಚಿನ ಶುಭಫಲಗಳು ಪಡೆದುಕೊಂಡರೆ ಕೆಲವು ರಾಶಿಯವರಿಗೆ ಅಶುಭ ಫಲಗಳು ಸಹ ಲಭಿಸುತ್ತದೆ

2024 ಮೇಷ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ. ಹಾಗೆಯೇ ಮೇಷ ರಾಶಿಯವರು ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ ಹಾಗೆಯೇ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ವರ್ಷದ ಆರಂಭದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆಯಿಂದ ಇರಬೇಕು ನಾವು ಈ ಲೇಖನದ ಮೂಲಕ 2024 ಮೇಷ ರಾಶಿಯವರಿಗೆ ಗುರು ಹಾಗೂ ರಾಹು ಕೇತು ಹಾಗೂ ಶನಿಯ ಪ್ರಭಾವದ ಬಗ್ಗೆ ತಿಳಿದುಕೊಳ್ಳೋಣ.

ಅಶ್ವಿನಿ ನಕ್ಷತ್ರದ 4 ಚರಣ ಹಾಗೂ ಭರಣಿ ನಕ್ಷತ್ರದ 4 ಚರಣ ಮತ್ತು ಕೃತಿಕಾ ನಕ್ಷತ್ರದ ಮೊದಲನೇ ಚರಣದಲ್ಲಿರುವವರು ಮೇಷ ರಾಶಿಯವರರಾಗಿದ್ದಾರೆ ಮೇಕೆಯ ಲಾಂಛನವನ್ನು ಹೊಂದಿರುತ್ತದೆ ಕಾಲ ಪುರುಷನ ಅಂಗ ತಲೆ ಆಗಿರುತ್ತದೆ ಅಗ್ನಿ ತತ್ವದ ರಾಶಿಯಾಗಿ ಇರುತ್ತದೆ ಹಾಗೆಯೇ ಮೇಷ ರಾಶಿಯ ಅಧಿಪತಿ ಕುಜ ಆಗಿರುತ್ತಾನೆ ಈ ರಾಶಿಯ ರತ್ನ ಹವಳ ಆಗಿರುತ್ತದೆ ಅದೃಷ್ಟ ಬಣ್ಣ ಬಿಳಿ ಮತ್ತು ಕೆಂಪು ಹಾಗೂ ಭಾನುವಾರ ಮತ್ತು ಮಂಗಳವಾರ ಅದೃಷ್ಟದ ವಾರಗಳಾಗಿದೆ ಶಿವ ಹಾಗೂ ಆಂಜನೇಯ ಸ್ವಾಮಿ ಅದೃಷ್ಟದ ದೇವರುಗಳಾಗಿರುತ್ತಾರೆ

ಅದೃಷ್ಟ ತರುವ ಸಂಖ್ಯೆ 6 ಮತ್ತು 9 ಆಗಿರುತ್ತದೆ ಹಾಗೆಯೇ ಅದೃಷ್ಟ ತರುವ ದಿನಾಂಕ ಎಂದರೆ 9 8ಮತ್ತು 21 ಆಗಿರುತ್ತದೆ ಸಿಂಹ ತುಲಾ ಧನಸ್ಸು ಮಿತ್ರ ರಾಶಿಗಳಾಗಿದೆ ಹಾಗೆಯೇ ಮಿಥುನ ಮತ್ತು ಕನ್ಯಾ ರಾಶಿಯು ಶತ್ರು ರಾಶಿಯಾಗಿದೆ. ಮೇಷ ರಾಶಿಯವರಿಗೆ ಧೈರ್ಯ ಶೌರ್ಯಗಳಿಗೆ ಸರಿಸಾಟಿಯೆ ಇರುವುದು ಇಲ್ಲ ಹಾಗೆಯೇ ಬಹಳಷ್ಟು ಹಠಮಾರಿ ಸ್ವಭಾವ ಹಾಗೂ ಕೋಪಿಷ್ಠರು ಆಗಿರುತ್ತಾರೆ ಮಹತ್ವಾಕಾಂಕ್ಷೆಗಳುಳ್ಳ ವ್ಯಕ್ತಿಗಳು ಆಗಿರುತ್ತಾರೆ ಕೆಲಸದಲ್ಲಿ ಯಾವುದೇ ತರದ ಕಠಿಣತೆ ಕಂಡು ಬಂದರೂ ಸಹ ಅದನ್ನೂ ಎದುರಿಸುತ್ತಾರೆ.

ಕೋಪ ಬರುವುದು ಕಡಿಮೆ ಆದರೂ ಸಹ ಬಂದರೆ ತಾಳಲಾರದಷ್ಟು ಕೋಪ ಬರುತ್ತದೆ ಕೋಪ ನಿಯಂತ್ರಣ ಮಾಡುವುದು ಕಷ್ಟ ಆಗುತ್ತದೆ ಕಣ್ಣು ಸ್ವಲ್ಪ ಕೆಂಪಾಗಿ ಇರುತ್ತದೆ ಮಾತು ಸ್ವಲ್ಪ ಗಟಸು ಆಗಿ ಇರುತ್ತದೆ ಗುರು ಮೇಷ ರಾಶಿಯಲ್ಲಿಯೆ ಸಂಚಾರ ಮಾಡುತ್ತಾನೆ ಗುರುವಿನ ಪ್ರಭಾವ ಅಷ್ಟೊಂದು ಇರುವುದಿಲ್ಲ ಹಾಗೆಯೇ ಹಣಕಾಸಿನ ತೊಂದರೆ ಹಾಗೂ ಹಾಗೂ ಯಾವುದೇ ಕೆಲಸ ಕಾರ್ಯಗಳಲ್ಲಿ ವಿಳಂಬ ಕಂಡು ಬರುವ ಸಾಧ್ಯತೆ ಇರುತ್ತದೆ ಆಸೆಗಳು ದೊಡ್ಡದಾಗಿ ಇರುತ್ತದೆ ಹಾಕಿರುವ ಯೋಜನೆಗಳು ಪೂರ್ಣಗೊಳ್ಳುತ್ತದೆಯೆ ಅಥವಾ ಇಲ್ಲವೆಂದು ಮನಸ್ಸಿನಲ್ಲಿ ಚಿಂತೆ ಕಂಡು ಬರುತ್ತದೆ

ಮಕ್ಕಳ ವಿಚಾರದಲ್ಲಿ ಚಿಂತೆ ಕಂಡು ಬರುತ್ತದೆ ಒಂದು ರೀತಿಯ ಜವಾಬ್ದಾರಿಗಳು ಹೆಚ್ಚಾಗಿ ಕಂಡು ಬರುತ್ತದೆ . ಹಣಕಾಸಿನಲ್ಲಿ ಸಮಸ್ಯೆಗಳು ಕಂಡು ಬಂದಾಗ ಸಾಲ ಬಾಧೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಹಾಸಿಗೆ ಇದ್ದಷ್ಟು ಕಾಲನ್ನು ಚಾಚಬೇಕು ಮಾನಸಿಕವಾಗಿ ಚಿಂತೆ ಕಂಡು ಬರುತ್ತದೆ ಮಕ್ಕಳು ಹಾಗೂ ಕೆಲಸದ ಬಗ್ಗೆ ಚಿಂತೆಗಳು ಕಂಡು ಬರುತ್ತದೆ ಗುರು ವೃಷಭ ರಾಶಿಯಲ್ಲಿ ಇರುವಾಗ ಮೇಷ ರಾಶಿಯವರಿಗೆ ಒಳ್ಳೆಯ ಫಲ ಸಿಗುತ್ತದೆ ಗುರುವಿನ ಅನುಗ್ರಹ ಸಂಪೂರ್ಣವಾಗಿ ಲಭಿಸುತ್ತದೆ ಆರೋಗ್ಯದಲ್ಲಿ ವೃದ್ಧಿ ಕಂಡು ಬರುತ್ತದೆ ಹಾಗೂ ಹಣಕಾಸಿನಲ್ಲಿ ಅಭಿವೃದ್ದಿ ಕಂಡು ಬರುತ್ತದೆ.

ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ನಿಂತಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತದೆ ಕುಟುಂಬದಲ್ಲಿ ಶುಭ ಕಾರ್ಯಗಳು ಉಂಟಾಗುತ್ತದೆ ಆರ್ಥಿಕವಾಗಿ ಚೇತರಿಕೆ ಕಂಡು ಬರುತ್ತದೆ 2024ರ ವರ್ಷದಲ್ಲಿ ರಾಹು ಕೇತು ಹಾಗೂ ಶನಿ ಮಹಾತ್ಮನ ಪ್ರಭಾವ ತುಂಬಾ ಪ್ರಮುಖವಾಗಿದೆ ಶನಿಯು ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಾನೆ 11ನೆಯ ಮನೆಯಲ್ಲಿ ಇರುತ್ತಾನೆ ಶನಿಯು ಮೇಷ ರಾಶಿಯವರಿಗೆ ಕೀರ್ತಿ ಅದೃಷ್ಟವನ್ನು ಒದಗಿಸುತ್ತಾನೆ

ಹಾಗೆಯೇ ಕೆಲಸ ಹುಡುಕಿಕೊಂಡು ಬರುತ್ತದೆ. ಕೆಲಸದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಕೆಲಸ ಕಾರ್ಯಗಳಲ್ಲಿ ಗೌರವ ಲಭಿಸುತ್ತದೆ ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡುವ ಯೋಗ ಕಂಡು ಬರುತ್ತದೆ ಹಾಗೆಯೇ ಆಸ್ತಿಯನ್ನು ಖರೀದಿ ಮಾಡುವ ಅದೃಷ್ಟ ಒದಗಿ ಬರುತ್ತದೆ ಹಾಗೆಯೇ ಪ್ರಯಾಣದಿಂದ ಅನೇಕರಿಗೆ ಲಾಭ ಕಂಡು ಬರುತ್ತದೆ ರಾಜಕೀಯ ರಂಗದಲ್ಲಿ ಇರುವರಿಗೆ ಅಧಿಕಾರ ಪ್ರಾಪ್ತಿ ಆಗುತ್ತದೆ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ದಿ ಕಂಡು ಬರುತ್ತದೆ.

ರಾಹು ಕೇತು ವೃಷಭ ಹಾಗೂ ವೃಶ್ಚಿಕ ರಾಶಿಯಲ್ಲಿ ಸಂಚಾರ ಮಾಡುತ್ತಾರೆ ಹಾಗಾಗಿ 12 ಹಾಗೂ 6ನೆಯ ಸ್ಥಾನದಲ್ಲಿ ಇರುತ್ತಾರೆ ಕೇತು ಮೇಷ ರಾಶಿಯವರಿಗೆ ಅನೇಕ ಶುಭ ಫಲಗಳನ್ನು ಕೊಡುತ್ತಾರೆ ಮಾನಸಿಕ ಧೈರ್ಯ ಹಾಗೂ ಆತ್ಮ ವಿಶ್ವಾಸ ಕಂಡು ಬರುತ್ತದೆ ಶತ್ರುಗಳ ಕಾಟ ನಿಯಂತ್ರಣ ಹೊಂದುತ್ತದೆ ಕೇತುವಿನ ಪ್ರಭಾವದಿಂದ ಒಳ್ಳೆಯ ಫಲಗಳು ಲಭಿಸುತ್ತದೆ ರಾಹುವಿನಿಂದ ಹೆಚ್ಚು ಖರ್ಚು ಜಾಸ್ತಿ ಆಗುತ್ತದೆ ಕೆಲವರಿಗೆ ಉದ್ಯೋಗದಲ್ಲಿ ಸವಾಲನ್ನು ಎದುರಿಸಬೇಕಾಗಿ ಬರುತ್ತದೆ ಅಂದುಕೊಂಡ ರೀತಿಯಲ್ಲಿ ಕೆಲಸ ಕಾರ್ಯಗಳು ಕಂಡು ಬರುವುದು ಇಲ್ಲ ಹಾಗಾಗಿ ಧೈರ್ಯದಿಂದ ಮುನ್ನುಗ್ಗಬೇಕು

ಮಕ್ಕಳ ಆರೋಗ್ಯದಲ್ಲಿ ಚಿಂತೆ ಕಂಡು ಬರುವ ಸಾಧ್ಯತೆ ಇರುತ್ತದೆ ದುಷ್ಟ ಕೆಲಸಗಳ ಬಗ್ಗೆ ಮನಸ್ಸು ವಾಲುವ ಸಾಧ್ಯತೆ ಇರುತ್ತದೆ ಇವೆಲ್ಲವೂ ರಾಹುವಿನ ಪ್ರಭಾವದಿಂದ ಆಗುತ್ತದೆ ಹಾಗಾಗಿ ರಾಹು ಕೇತುಗಳ ಶಾಂತಿಯನ್ನು ಮಾಡಬೇಕು. ತಾಳ್ಮೆಯಿಂದ ಇರಬೇಕು ಕೆಲವೊಂದು ಸವಾಲುಗಳ ಮಧ್ಯದಲ್ಲಿ ಸಹ ಯಶಸ್ಸನ್ನು ಹೊಂದಬೇಕು ಹೀಗೆ ಮೇಷ ರಾಶಿಯವರು ಅನೇಕ ಸಂಕಷ್ಟಗಳನ್ನು ಎದುರಿಸಿದರು ಸಹ ಯಶಸ್ಸನ್ನು ಸಾಧಿಸುತ್ತಾರೆ 2024 ರಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ ಅಷ್ಟೇ ಅಲ್ಲದೆ ಮೇಷ ರಾಶಿಯವರಿಗೆ ಗುರು ಬಲ ಅಷ್ಟೊಂದು ಇಲ್ಲದೆ ಇದ್ದರೂ ಸಹ ಶನಿಯಿಂದ ಒಳ್ಳೆಯ ಶುಭಫಲ ಲಭಿಸುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!