Krushi thapanda: ನಟಿ ಕೃಷಿ ತಾಪಂಡ ಅವರ ಹೊಸ ಮನೆ ಗೃಹಪ್ರವೇಶದ ಸಂಭ್ರಮ ಹೇಗಿದೆ ನೋಡಿ

0

Krushi thapanda ನಟ ಅನೀಶ್ ಅಭಿನಯದ ಅಕಿರಾ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ಕೂರ್ಗ್ ಬೆಡಗಿ ಕೃಷಿ ತಾಪಂಡ (Krushithapanda) ತಮ್ಮ ಮುದ್ದಾದ ನಗುವಿನ ಮೂಲಕ ಬಹುದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಎಚ್ಎಎಲ್ ಸಂಸ್ಥೆಯಲ್ಲಿ ವಿಜ್ಞಾನ ವಿಭಾಗದ ಡಿಪ್ಲೋಮೋ (Diploma) ಪೂರ್ಣಗೊಳಿಸಿದ ನಂತರ ಮೈಕ್ರೋಲೈಟ್ ಮೇಲೆ ಅಧ್ಯಯನ ಮಾಡಿ ಮಾಡ್ಲಿಂಗ್ನತ್ತ(modelling)

ಗಮನಹರಿಸಿದ ಕೃಷಿ ತಾಪಂಡ ಚಲನಚಿತ್ರ ರಂಗಕ್ಕೆ ಬರುವ ಮುನ್ನ ಯುನೈಟೆಡ್ ಸ್ಟೇಟ್ಸ್ ಮೂಲದ ಆಡಿಯೋ ಕಾನ್ಫರೆನ್ಸ್ ಮತ್ತು ಮೀಟಿಂಗ್ ಸರ್ವಿಸ್ ಪ್ರೊವೈಡರ್ ಇಂಟರ್ಕಾಲ್ ಎಂಬ ಸಂಸ್ಥೆಯಲ್ಲಿ ಸಹಾಯಕ ವ್ಯವಸ್ಥಾಪಕಿ ಕೆಲಸ ಮಾಡುತ್ತಿದ್ದರು. ಅನಂತನ ಕಹಿ ಎಂಬ ಸಿನಿಮಾದಲ್ಲಿ ಅಭಿನಯಿಸುವಂತಹ ಆಫರ್ ದೊರೆಕುತ್ತದೆ. ಸಿನಿಮಾ ಒಪ್ಪಿಕೊಂಡು ಚಿತ್ರೀಕರಣ ಕೆಲಸಗಳಲ್ಲಿ ಭಾಗಿಯಾಗಿರುವಾಗಲೇ ಅಕಿರ(Akira) ಸಿನಿಮಾದಲ್ಲಿ ಅಭಿನಯಿಸುವಂತಹ ಅವಕಾಶವನ್ನು ಪಡೆದುಕೊಂಡು ಎರಡನೇ ನಾಯಕ ನಟಿಯಾಗಿ ಮಿಂಚಿದರು.

ಹೀಗೆ ಎರಡು ಸಾವಿರದ ಹದಿನಾರರಿಂದ ಸಿನಿಮಾ ರಂಗದಲ್ಲಿ ತೊಡಗಿಕೊಂಡಿರುವ ನಟಿ ಕೃಷಿ ತಾಪಂಡ 2017ರಲ್ಲಿ ಬಿಡುಗಡೆಗೊಂಡ ಕನ್ನಡಕ್ಕಾಗಿ ಒಂದನ್ನು ಒತ್ತಿ ಎಂಬ ಸಿನಿಮಾದಲ್ಲಿ ಪ್ರಮೇಯ(prameya) ಎಂಬ ಪಾತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡು ಪೂರ್ಣ ಪ್ರಮಾಣದ ನಾಯಕಿಯಾಗಿ ಹೊರಹೊಮ್ಮಿದರು. ಅನಂತರ ಭರಾಟೆ, ಲಂಕೆ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇದರೊಂದಿಗೆ ಬಿಗ್ ಬಾಸ್ ಸೀಸನ್ 5 ಸ್ಪರ್ಧಿಯಾಗಿ ಪಾದರ್ಪಣೆ ಮಾಡಿ ತಮ್ಮ ಮುದ್ದಾದ ನಗುವಿನ ಮೂಲಕವೇ ಕರ್ನಾಟಕದ ಕ್ರಶ್ ಆದಂತಹ ಕೃಷಿ ಸದ್ಯ ಸೋಶಿಯಲ್ ಮೀಡಿಯಾ(social media)ದಲ್ಲಿ ಸಕ್ಕತ್ ಆಕ್ಟಿವ್ ಇದ್ದು, ಆಗಾಗ ತಮ್ಮ ಮುದ್ದಾದ ಫೋಟೋಗಳ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಬಾಣ ಬಿಡುತ್ತಿರುತ್ತಾರೆ. ಇನ್ನು ಕಳೆದ ಕೆಲದಿನಗಳ ಹಿಂದಷ್ಟೇ ಕೃಷಿ ಮೈಸೂರಿನಲ್ಲಿ ಸುಂದರವಾದ ಮನೆ ಒಂದನ್ನು ಕಟ್ಟಿಸಿದ್ದು, ಅದರ ಗೃಹ ಪ್ರವೇಶದ ಕೆಲ ಫೋಟೋಗಳು ಬಾರಿ ವೈರಲ್ ಆಗುತ್ತಿವೆ. ಇದನ್ನೂ ಓದಿ Tamanna Bhatia: ತಮನ್ನಾ ಭಾಟಿಯಾ ಲೇಟೆಸ್ಟ್ ಫೋಟೋಸ್ ನೋಡಿ ಫಿದಾ ಅಭಿಮಾನಿಗಳು

Leave A Reply

Your email address will not be published.

error: Content is protected !!