ಕೊರಗಜ್ಜನಿಗೆ ಮನೆಯಲ್ಲೇ ಹರಕೆ ಮಾಡಿಕೊಳ್ಳುವ ವಿಧಾನ

0

ಕೊರಗಜ್ಜ ದೇವರಿಗೆ ಮನೆಯಲ್ಲಿ ಹರಕೆ ಕಟ್ಟಿ ಮನಸ್ಸಿನ ಕೋರಿಕೆಗಳನ್ನು ನೆರವೇರಿಸುವುದು ಹೇಗೆ?. ಕೊರಗಜ್ಜ ಅವರ ಮೂಲ ದೇವಸ್ಥಾನ ಇರುವ ಸ್ಥಳ ಯಾವುದು?. ಎನ್ನುವುದನ್ನು ತಿಳಿಯೋಣ.

ದಕ್ಷಿಣ ಭಾರತದಿಂದ ಉತ್ತರ ಭಾರತದ ಜನರು ಕೊರಗಜ್ಜನಿಗೆ ವಿವಿಧ ಹೆಸರಿನಿಂದ ಕರೆಯುತ್ತಾರೆ. ಮಂಗಳೂರು ಸೇರಿದಂತೆ ಮಂಗಳೂರಿನ ಹಲವು ಭಾಗಗಳಲ್ಲಿ ಇವರನ್ನು ಕೊರಗಜ್ಜ ಎಂದೇ ಕರೆಯುವರು. ಹೆಚ್ಚು ಪೂಜಿಸಲ್ಪಡುವ ದೇವರು ಈ ಕೊರಗಜ್ಜ. ಒಂದು ಕಾಲಮಾನದಲ್ಲಿ ಮಾನವನ ರೂಪದಲ್ಲಿ ಬದುಕಿದ ಪವಾಡ ಪುರುಷ ಈ ಕೊರಗಜ್ಜ. ಕಳೆದುಹೋದ ಯಾವ ವಸ್ತು, ಮಾಡುವ ಕೆಲಸ ಸರಿಯಾದ ಸಮಯಕ್ಕೆ ಪೂರ್ಣವಾಗಬೇಕು, ಮತ್ತೆ ಇತರೆ ಸಮಸ್ಯೆಗಳು ಎದುರಾದರು ಅದನು ಪರಿಹಾರ ಮಾಡಿಕೊಳ್ಳಲು ಜನರು ಈ ದೈವವನ್ನು ನೆನೆಯುವರು.

ಕೊರಗ ತನಿಯ ಹೈತಿಹಾಸಿಕ ವ್ಯಕ್ತಿಯೇ ವಿನಃ ಬೇರೆ ರೀತಿಯ ಪೌರಾಣಿಕ ಸೃಷ್ಟಿ ಅಲ್ಲ. ಭಾರತಿಯ ದ್ರಾವಿಡರು ಅವರ ಪೂರ್ವಜರನ್ನು ಆರಾಧನೆ ಮಾಡುವರು. ಯಾವ ವ್ಯಕ್ತಿಗಳು ಸಮುದಾಯದ ಒಳಿತಿಗಾಗಿ ಅಸಾಮಾನ್ಯ ಕೆಲಸಗಳನ್ನು ಮಾಡಿರುವರೋ ಅವರ ವಂಶಸ್ಥರು ಅವರನ್ನು ಪೂಜೆ ಮಾಡುವರು. ಕೊರಗ ಎನ್ನುವುದು ಸಮುದಾಯದ ಹೆಸರು. ಅಜ್ಜ ಎನ್ನುವುದು ತುಳು ಭಾಷೆಯಲ್ಲಿ ವಯಸ್ಸಾದ ವ್ಯಕ್ತಿಗೆ ಕರೆಯುವುದು ಅದರಿಂದ ಕೊರಗಜ್ಜ ಎಂದು ಜನರು ಕರೆಯುವರು. ಇವರಿಗೆ ಮಧ್ಯ ವಯಸ್ಸಿಗೆ ದೈವತ್ವದ ಅನುಗ್ರಹ ಪ್ರಾಪ್ತಿ ಆಗಿತ್ತು. ಪ್ರೀತಿಯಿಂದ ಅವರನ್ನು ಜನರು ಅಜ್ಜ ಎಂದು ಕರೆಯಲು ಆರಂಭ ಮಾಡಿದರು ಎನ್ನುವ ನಂಬಿಕೆ ಇದೆ.

ಕೊರಗಜ್ಜ ಬೆಳೆದಿದ್ದು ಕಳ್ಳು ವ್ಯಾಪಾರ ಮಾಡುವ  ಕುಟುಂಬದಲ್ಲಿ ಕಳ್ಳನ್ನು ಸೇವಿಸುವುದು ಕುಟುಂಬದ ಕಾರ್ಯಕ್ರಮದ ಒಂದು ಭಾಗ. ಕೊರಗ ತನಿಯನಿಗೆ ಕುಡಿಯಲು ಕಳ್ಳನ್ನು ಕೊಡಲಾಗುತ್ತಿತ್ತು ಅದಕ್ಕೆ ಕೊರಗಜ್ಜನಿಗೆ ಮದ್ಯವನ್ನು ಅರ್ಪಣೆ ಮಾಡುವುದು. ಸಾಂಪ್ರದಾಯಿಕ ಮದ್ಯವನ್ನು ಕೊರಗಜ್ಜ ದೈವಕ್ಕೆ ನೈವೇದ್ಯವಾಗಿ ಸಮರ್ಪಣೆ ಮಾಡಲಾಗುತ್ತಿತ್ತು. ಈಗಿನ ಕಾಲದಲ್ಲಿ ಸಾಂಪ್ರದಾಯಿಕ ಮದ್ಯ ಸಿಗದ ಕಾರಣ ಪ್ಯಾಕ್ ಮಾಡಿದ ಮದ್ಯ, ಚಕ್ಕುಲಿ, ಎಲೆ ಅಡಿಕೆ ಹಾಗೂ ಬೀಡಿಯನ್ನು ಸಮರ್ಪಣೆ ಮಾಡುವರು.

ಆರಂಭಿಕ ದಿನಗಳಿಂದ ಕೊರಗಜ್ಜನಿಗೆ ಅರ್ಪಣೆ ಮಾಡುವ ಕೋಲಗಳಿಗೆ ಮತ್ತು ಮುಖ್ಯ ಪೂಜೆಗಳಿಗೆ ಭಾಗಿಯಾಗುವುದನ್ನು ಮಹಿಳೆಯರಿಗೆ ನಿಷೇಧ ಮಾಡಲಾಗಿದೆ ಏಕೆಂದರೆ ?.

ದಿವ್ಯ ಚೈತನ್ಯಕ್ಕೆ ಮಧ್ಯಮವಾಗಿರುವ ವಕ್ತಿಯು ಸೊಂಟಕ್ಕೆ ತಾಳೆ ಗರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಧರಿಸಿರುತ್ತಾರೆ ಮತ್ತು ವಾದ್ಯಗಳು ನುಡಿಸುವ ನಾದಕ್ಕೆ ನೃತ್ಯ ಮಾಡುವರು. ಮಂದ ಬೆಳಕಿನಲ್ಲಿ ಮದ್ಯ ಪ್ರಸಾದದ ಜೊತೆಗೆ ಕಾರ್ಯಕ್ರಮ ನಡೆಯುವ ಕಾರಣ ಮಹಿಳೆಯರು ಈ ಪೂಜೆಗೆ ಬರುವಂತೆ ಇಲ್ಲ. ಕೊರಗಜ್ಜನ ಬಳಿ ಹರಕೆ ಕಟ್ಟಿ ತಮ್ಮ ಬೇಡಿಕೆ ಈಡೇರಿಸುವಂತೆ ಬೇಡಿಕೊಳ್ಳಲು ಬೇರೆ ಬೇರೆ ಭಾಗದಿಂದ ಭಕ್ತಾದಿಗಳು ಬರುವರು. ಮಾನವರು ತಿನ್ನುವ ತಿನಿಸುಗಳನ್ನು ಕೊರಗಜ್ಜನಿಗೆ ಹರಕೆಯ ರೂಪದಲ್ಲಿ ಅರ್ಪಣೆ ಮಾಡುವರು.

ಕಳೆದು ಹೋದ ವಸ್ತುಗಳು ಮತ್ತೆ ಸಿಗಬೇಕು ಎಂದು ಕೊರಗಜ್ಜನಿಗೆ ಹರಕೆ ಕಟ್ಟುವುದರಿಂದ ಅದು ಪುನಃ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಮನೆಯಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂದರೆ ಮನೆಯಲ್ಲಿ ಇದ್ದು, ದೈವ ಕೊರಗಜ್ಜ ಸ್ವಾಮಿಗೆ ಹರಕೆ ಕಟ್ಟುವುದು ಇಲ್ಲ ನೆನೆದರು ಸ್ವಾಮಿ ಕೊರಗಜ್ಜ ಬರುವರು ಎನ್ನುವ ನಂಬಿಕೆ ಕೂಡ ಇದೆ.

ವೀಳ್ಯದೆಲೆ ಮೇಲೆ ಅಡಿಕೆ ಸುಣ್ಣ ತೆಗೆದುಕೊಂಡು ರಾತ್ರಿ ಸಮಯದಲ್ಲಿ ಎಲ್ಲಾ ದೀಪಗಳನ್ನು ಆರಿಸಿದ ಮೇಲೆ  ತುಳಸಿಕಟ್ಟೆಯ ಬಳಿ ಹೋಗಿ ತುಳಸಿ ಕಟ್ಟೆಯ ಬಲ ಭಾಗದಲ್ಲಿ ಈ ವೀಳ್ಯದೆಲೆ ಇಟ್ಟು ಸಮಸ್ಯೆಯನ್ನು ಬಗೆಹರಿಸಿ ಅಜ್ಜ ಎಂದು ಭಕ್ತಿಯಿಂದ ಬೇಡಿಕೊಳ್ಳಬೇಕು. ಸಮಸ್ಯೆ ತಿರಿಸಿದರೆ ನಿನ್ನ ಸ್ಥಳಕ್ಕೆ ಬಂದು ಹರಕೆ ಅರ್ಪಣೆ ಮಾಡುತ್ತೇವೆ ಎಂದು ಹೇಳಬೇಕು. ಕೊರಗಜ್ಜನ ಹೆಸರು ಕೂಗಿದರೆ ಸಾಕು ಎಲ್ಲಾ ಕಷ್ಟ ಮಾಯವಾಗುತ್ತದೆ ಮತ್ತು ಅವರೆ ಸ್ವತಃ ಬಂದು ಸಮಸ್ಯೆ ಪರಿಹಾರ ಮಾಡುವರು ಎನ್ನುವ ನಂಬಿಕೆ ಇದೆ.

ಕೊರಗಜ್ಜನ ಭಕ್ತರು ಆದಿ ಸ್ಥಳ ಕುತ್ತಾರ್ ಅಜ್ಜನ ಕಟ್ಟೆಯ ಬಳಿ ರಾತ್ರಿ ವಾಹನ ಚಲಾಯಿಸುವ ಸಮಯದಲ್ಲಿ ಕೂಡ ಹೇಡ್’ಲೈಟ್ ಹಾಕುವುದಿಲ್ಲ. ಕೋಲ ನಡೆಯುವ ಸಮಯದಲ್ಲಿ ಅಗರಬತ್ತಿಯ ಬೆಳಕು ಸಹ ಕಾಣಬಾರದು ಎನ್ನುವ ಮಾತು ಇದೆಯಂತೆ. ಅಜ್ಜನಿಗೆ ಮಾಡುವ ಅಗೇಲು ಮತ್ತು ಕೋಲದ ಸಂದರ್ಭದಲ್ಲಿ ದೀಪವನ್ನು ಹಚ್ಚಬಾರದು. ಅದಕ್ಕೆ ಆ ಪ್ರದೇಶದಲ್ಲಿ ಸಂಚಾರ ಮಾಡುವ ಜನರು ಲೈಟ್ ಡಿಂ ಮಾಡಿಕೊಳ್ಳುವರು ಇಲ್ಲ ಕತ್ತಲಿನಲ್ಲಿ ಸಂಚಾರ ಮಾಡುವರು. ಅಗೇಲು ಸೇವೆಯಲ್ಲಿ ಅಜ್ಜನಿಗೆ ಹುರುಳಿ ಹಾಗೂ ಬಸಳೆ, ಮೀನಿನ ಪದಾರ್ಥ, ಕೋಳಿ, ಉಪ್ಪಿನಕಾಯಿಯನ್ನು ಬಾಳೆಯ ಎಲೆ ಮೇಲೆ ಬಡಿಸುತ್ತಾರೆ. ಕೊರಗಜ್ಜನ ಕಟ್ಟೆಯ ಬಳಿ ರಾತ್ರಿ 7.00 ಗಂಟೆಯ ನಂತರ ಮಹಿಳೆಯರಿಗೆ ಆ ಸ್ಥಳ ನಿಷೇಧ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: