ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ 50ನೇ ವರ್ಷದ ಹುಟ್ಟುಹಬ್ಬ ಸಂಭ್ರಮದ ಫೋಟೋಸ್!

0

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಬಾದ್ ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ತಮ್ಮ 50ನೇ ವರ್ಷದ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಕುಟುಂಬಸ್ಥರು ಹಾಗೂ ಸ್ನೇಹಿತರ ವತಿಯಿಂದ ಕಿಚ್ಚ ಸುದೀಪ್(Kiccha Sudeep) ಅವರಿಗೆ ಶುಭಾಶಯಗಳು ಮಹಾಪೂರವೇ ಹರಿದು ಬಂದಿದೆ. ಅಲ್ಲದೆ ಹಲವು ವರ್ಷಗಳ ನಂತರ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಂತಹ ಕಿಚ್ಚ ಸುದೀಪ್(Kiccha Sudeep)

ನೆನ್ನೆ ರಾತ್ರಿಯಿಂದ ನಂದಿ ಲಿಂಕ್ ರೋಡ್ನಲ್ಲಿ(Nandhi Links) ಅಭಿಮಾನಿಗಳ ಜೊತೆಗೆ ಹುಟ್ಟು ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡರು. ಸರ್ಪ್ರೈಸ್ಗಳ ಮೇಲೆ ಸರ್ಪ್ರೈಸ್ ಗಳನ್ನು ಅನುಭವಿಸಿದಂತಹ ಕಿಚ್ಚ ಸುದೀಪ್ ಅವರ ಮುಖ ಚಿತ್ರವನ್ನು ಡ್ರೋನ್ಗಳ ಮೂಲಕ ಆಕಾಶದಲ್ಲಿ ಬಿಡಿಸಲಾಯಿತು. ಹಾಗೆ ಪ್ರತಿದಿನ ಆಕಾಶದಲ್ಲಿ ಹೊಳೆಯುವಂತಹ ನಕ್ಷತ್ರ ಹೊಂದಕ್ಕೆ ಕಿಚ್ಚ ಸುದೀಪ್(Kiccha Sudeep) ಅವರ ಹೆಸರನ್ನು ಇಟ್ಟು ಗೌರವಿಸಿದರು.

ಸುದೀಪ್ ಅಭಿನಯದ ಸಾಲು ಸಾಲು ಸಿನಿಮಾಗಳು ಅನೌನ್ಸ್ ಆಯಿತು ಹಾಗೂ ಬರೋಬ್ಬರಿ 10 ವರ್ಷಗಳ ನಂತರ ಕಿಚ್ಚ ಸುದೀಪ್ ನಿರ್ದೇಶಕನಾಗಿ ಕಾಣಿಸಿಕೊಳ್ಳುತ್ತಿರುವುದರ ಮಾಹಿತಿಯನ್ನು ಹಂಚಿಕೊಂಡರು. ಇದೆಲ್ಲದರ ಜೊತೆಗೆ ಹೆಂಡತಿ ಪ್ರಿಯಾ ಸುದೀಪ್(Priya Sudeep) ಹಾಗೂ ಮಗಳು ಸಾನ್ವಿ(Sanvi) ಜೊತೆಗೆ ನಂದಿ ಲಿಂಗ್ಸ್ ರೋಡ್ ನಲ್ಲಿ ಬೃಹತಾದ ಕೇಕ್ ಒಂದನ್ನು ಪತ್ನಿಯ ಕೈಹಿಡಿದು ಕತ್ತರಿಸಿ 50ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮಿಸಿದ

ಕಿಚ್ಚ ಸುದೀಪ್ ಅವರ ಫೋಟೋಗಳು ಸವಿಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿತ್ತು, ಇದನ್ನು ಕಂಡಂತಹ ಅಭಿಮಾನಿಗಳು ಕಾಮೆಂಟ್ ಮೂಲಕ ತನ್ನ ನೆಚ್ಚಿನ ಬಾದ್‌ ಷಾ ಕಿಚ್ಚ ಸುದೀಪ್ ಅವರಿಗೆ ತುಂಬು ಹೃದಯದಿಂದ ಹುಟ್ಟು ಹಬ್ಬದ ಶುಭಾಶಯಗಳ ಸಾಗರವನ್ನೇ ಹರಿಸುತ್ತಿದ್ದಾರೆ. ಹೀಗೆ ಮಾಧ್ಯಮದವರೊಂದಿಗೆ ಸಂದರ್ಶನಕ್ಕೂ ಕುಳಿತು ಅವರು ಕೇಳುವಂತಹ ಪ್ರಶ್ನೆಗಳಿಗೆಲ್ಲ ಬಹಳ ಸಮಾಧಾನಯುತವಾಗಿ ಉತ್ತರಿಸುತ್ತಾ,

ತಮ್ಮ ಮನೆ ಮುಂದೆ ಬಂದಂತಹ ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಿ ಕೊಂಡರು. ಆದರೆ ನೂಕು ನುಗ್ಗಲು ಹೆಚ್ಚಾದ ಕಾರಣ ಕಿಚ್ಚ ಸುದೀಪ್(Kiccha Sudeep) ಮನೆಯೊಳಗೆ ಹೋಗಿ ವಿಡಿಯೋ ಒಂದನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಕ್ಷಮೆಯಾಚಿಸಿದ್ದಾರೆ.

Leave A Reply

Your email address will not be published.

error: Content is protected !!
Footer code: