ಕನ್ಯಾ ರಾಶಿಯವರು ಸಕತ್ ಜಾಣರು ಇವರ 10 ಸೀಕ್ರೆಟ್ ಇಲ್ಲಿದೆ

0

12 ರಾಶಿಚಕ್ರದಲ್ಲಿ ಒಂದೊಂದು ರಶಿಯದ್ದು ಒಂದೊಂದು ರೀತಿಯ ವಿಶೇಷತೆ ಇರುತ್ತದೆ. ಕನ್ಯಾ ರಾಶಿ ರಾಶಿಚಕ್ರದ 6ನೇ ಸ್ಥಾನದಲ್ಲಿ ಇರುವುದು. ಇದನ್ನು ಬುಧ ಗ್ರಹ ಆಳುತ್ತದೆ. ನಾವು ಕನ್ಯಾ ರಾಶಿಯ ಬಗ್ಗೆ ತಿಳಿಯೋಣ.

ಕನ್ಯಾ ರಾಶಿಯ ಅಂಶ ಭೂಮಿ, ದಿನ ಬುಧವಾರ, ಬಣ್ಣ ಬೂದು ಬಣ್ಣ ಮತ್ತು ತಿಳಿ ಹಳದಿ. ಮಿತ್ರ ರಾಶಿಗಳು ಮೀನ ರಾಶಿ, ಕರ್ಕಾಟಕ ರಾಶಿ. ಶತ್ರು ರಾಶಿಗಳು ಮಿಥುನ ರಾಶಿ, ಧನಸ್ಸು ರಾಶಿ. ಅದೃಷ್ಟ ಸಂಖ್ಯೆ 5, 14, 15, 23, 32. ಕನ್ಯಾ ರಾಶಿ ಬ್ಯಾಬಿಲೋನಿಯನ್ನರಿಗೆ ಫಲವತ್ತತೆ ಹಾಗೂ ಸುಗ್ಗಿಯ ಮೇಲಿನ ಆಳುವಿಕೆಯನ್ನು ಪ್ರತಿಬಿಂಬಿಸುತ್ತದೆ. ಗ್ರೀಕ್ ಪುರಾಣದಲ್ಲಿ ಕನ್ಯಾ ರಾಶಿಯನ್ನು ಡಿಮೀಟರ್ ದೇವತೆ ಎನ್ನುವರು. ಈ ದೇವತೆ ಕೃಷಿ ಹಾಗೂ ಭೂಮಿಗೆ ಸಂಬಂಧಿಸಿದೆ.

ಕನ್ಯಾ ರಾಶಿಯವರು ಸುಂದರವಾಗಿ  ಇರುವರು ಮತ್ತು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವರು. ನಾಚಿಕೆ ಸ್ವಭಾವ ಹೆಚ್ಚಾಗಿ ಇರುತ್ತದೆ. ಇವರು ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣುವರು. ಇವರಲ್ಲಿ ಬುದ್ದಿವಂತಿಕೆ ಮುಗ್ಧತೆ ಹೆಚ್ಚಾಗಿ ಇರುತ್ತದೆ. ಈ ರಾಶಿಯವರು ಹೆಚ್ಚು ಅವರ ಆಹಾರ ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡಲು ಬಯಸುವರು. ಮಾಡುವ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸಲು ಇಷ್ಟಪಡುವರು. ಹೆಚ್ಚು ನಿಯಮಗಳನ್ನು ಅನುಸರಣೆ ಮಾಡುವರು.

ಸಣ್ಣ ಪುಟ್ಟ ವಿಚಾರಗಳನ್ನು ಆಳವಾಗಿ ಗಮನಿಸುತ್ತಾರೆ. ಬೇರೆಯವರ ಟೀಕೆ ಮಾತುಗಳಿಗೆ ಹೆಚ್ಚು ಗಮನ ಕೊಡುವುದಿಲ್ಲ. ಹೆಚ್ಚು ಪ್ರಾಮಾಣಿಕತೆ ಮತ್ತು ಚಟುವಟಿಕೆಯಿಂದ ಇರುವ ವ್ಯಕ್ತಿಗಳಾಗಿ ಇರುವರು. ಕನ್ಯಾ ರಾಶಿಯವರು ಹೆಚ್ಚು ಮಾತುಗಾರಿಕೆ ಮತ್ತು ವಿಶೇಷ ಗುಣಗಳನ್ನು ಹೊಂದಿರುತ್ತಾರೆ.

ಎಲ್ಲರ ಜೊತೆ ಬಹುಬೇಗ ಬೆರೆಯುವ ಇವರು ಎಲ್ಲಾಗಿಂತ ವಿಭಿನ್ನವಾಗಿ ಕಾಣುವರು. ಯಾವ ಸಂಬಂಧಗಳೇ ಇದ್ದರು ಅದನ್ನು ಗಟ್ಟಿಯಾಗಿ ಇರಿಸಿಕೊಳ್ಳುವರು. ಈ ರಾಶಿಯವರು ಆದಾಯ ಗಳಿಗೆ ಮಾಡುವುದರಲ್ಲಿ ಪ್ರಥಮ ಸ್ಥಾನದಲ್ಲಿ ಇರುವರು. ಭಾವ ಮತ್ತು ಸ್ನೇಹ ಜೀವಿಗಳು. ಜೀವನವನ್ನು ವಿಶ್ಲೇಷಣಾತ್ಮಕ ಮತ್ತು ತರ್ಕಬದ್ಧ ಕ್ರಮದಿಂದ ಸಮಿಪಿಸೋಕೆ ಇಚ್ಛೆ ಪಡುವರು.

ಈ ರಾಶಿಯವರಿಗೆ ಆರೋಗ್ಯ ಪ್ರಜ್ಞೆ ಹೆಚ್ಚಾಗಿ ಇರುತ್ತದೆ ಮತ್ತು ನೈಸರ್ಗಿಕ ಪರಿಸರಕ್ಕೆ ಹೆಚ್ಚು ಆದ್ಯತೆ ನೀಡುವರು. ಕನ್ಯಾ ರಾಶಿಯವರು ಹೆಚ್ಚು ವಿಶ್ವಾಸ ಅರ್ಹ ವ್ಯಕ್ತಿಗಳು ಅವರನ್ನು ನಂಬಿದ ಸ್ನೇಹಿತರನ್ನು ಮತ್ತು ಕುಟುಂಬದವರನ್ನು ಅವರು ಕೈ ಬಿಡುವುದಿಲ್ಲ. ಆಲೋಚನಾ ಶಕ್ತಿ ತುಂಬಾ ಇರುವ ಕಾರಣ ಇವರಿಗೆ ಯಾರೂ ಮೋಸ ಮಾಡಲು ಸಾಧ್ಯವಿಲ್ಲ. ಇವರ ಯೋಚನಾ ಲಹರಿ ವಿಭಿನ್ನವಾಗಿ ಇರುವ ಕಾರಣ ಇವರ  ಅಯ್ಕೆ ಕೂಡ ವಿಭಿನ್ನವಾಗಿ ಇರುತ್ತದೆ.

ಕನ್ಯಾ ರಾಶಿಯವರ ಪ್ರಮುಖ 5 ಮಿಥ್ಯಗಳು ಬಗ್ಗೆ ತಿಳಿಯೋಣ.

1.  ಕನ್ಯಾ ರಾಶಿಯವರು ಹೆಚ್ಚು ದುಃಖ ಜೀವಿಗಳು ಮತ್ತು ಜಿಪುಣರು ಎಂದು ಹೇಳುವರು ಆದರೆ ಅದು ಸುಳ್ಳು ಅವರು ಭವಿಷ್ಯದ ಬಗ್ಗೆ ಯೋಜನೆ ಮಾಡುವರು ಅದಕ್ಕೆ ಹಣವನ್ನು ಲೆಕ್ಕಾಚಾರದಲ್ಲಿ ಖರ್ಚು ಮಾಡುವರು. ಭಾವನೆಗಳಿಗೆ ಬೆಲೆ ಕೊಡುವ ಇವರು ಭಾವ ಜೀವಿಗಳು ಮತ್ತು  ಹೆಚ್ಚು ಯೋಚನೆ ಮಾಡುವ ಪ್ರವೃತ್ತಿ ಉಳ್ಳವರು, ಬೇರೆಯವರ ಕಷ್ಟಕ್ಕೆ ಬೇಗ ಸ್ಪಂದಿಸುವರು. ಅದಕ್ಕೆ, ಇವರನ್ನು ದುಃಖ ಜೀವಿಗಳು ಎಂದು ಬಿಂಬಿಸುವುದು ತಪ್ಪು.

2.  ಈ ರಾಶಿಯವರಿಗೆ ಕಾಯಕವೇ ಕೈಲಾಸ ಆದರೆ ಸ್ವಲ್ಪ ಮಟ್ಟಿಗೆ ಮಾತ್ರ ಅದು ನಿಜ. ಎಲ್ಲವನ್ನೂ ಮೊದಲೇ ನಿರ್ಧಾರ ಮಾಡಿ ಕೆಲಸ ಮಾಡುವರು ಮತ್ತು ಅವರಿಗಾಗಿ ಕೂಡ ಸ್ವಲ್ಪ ಸಮಯ ಕಾದಿರಿಸುವರು. ಇಷ್ಟವಾದ ವ್ಯಕ್ತಿಗಳು, ಕಾರ್ಯಕ್ರಮಗಳು, ಮುಖ್ಯ ವಿಷಯಗಳಿಗೆ ಸಮಯವನ್ನು ಮೀಸಲಿಡುವರು.

3.ಇನ್ನೊಂದು ಮಿಥ್ಯೆ ಎಂದರೆ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಅವರ ವೈಯಕ್ತಿಕ ಸಮಸ್ಯೆ ಆಗಿದ್ದರೆ ಅದನ್ನು ಕನ್ಯಾ ರಾಶಿಯವರೇ ಬಗೆಹರಿಸಿ ಕೊಳ್ಳುವರು. ಇವರಿಗೆ ಹೆಚ್ಚು ಬುದ್ದಿವಂತಿಕೆ ಇರುವ ಕಾರಣ ಸಮಸ್ಯೆಗಳಿಗೆ ಪರಿಹಾರ ನೀಡುವ ಜನರಲ್ಲಿ ಇವರೇ ಮುಂದು.

4.ಮತ್ತೊಂದು ಮಿಥ್ಯೆ ಬೇರೆಯವರ ಮೇಲೆ ಅಧಿಕಾರ ಚಲಾವಣೆ ಮಾಡುವರು. ಈ ರಾಶಿಯವರು ಸ್ನೇಹ ಜೀವಿಗಳು ಆಗಿರುವ ಕಾರಣ ಸಮಸ್ಯೆಗಳಿಗೆ ಪರಿಹಾರ ನೀಡುವ ಸಲುವಾಗಿ ಅವರ ಬಳಿ ಆತ್ಮೀಯವಾಗಿ ಇರುವ ಜನರ ಬಗ್ಗೆ ತಿಳಿಯಲು ಬಯಸುವರು ಅದು ಎಂದಿಗೂ ಅಧಿಕಾರ ಚಲಾವಣೆ ಅಲ್ಲ ಸ್ವಲ್ಪ ಪೊಸೆಸಿವ್’ನೆಸ್ ಅಷ್ಟೇ.

5.ಕಾಳಜಿ ವೈಯಸುವುದಿಲ್ಲ ಎನ್ನುವುದು ಕೂಡ ಮಿಥ್ಯೆ. ಅವರ ಸೂಕ್ಷ್ಮ ಮತಿಗೆ ಸುತ್ತಲೂ ನಡೆಯುವ ವಿಚಾರಗಳು ದಾಖಲಾಗಿ ಬಿಡುತ್ತದೆ. ಅವರ ಸಂಗಾತಿ ವಿಷಯದಲ್ಲಿ ಸ್ವಲ್ಪ ಬದಲಾವಣೆ ಆದರೂ ಬೇಗ ಗುರುತಿಸುವರು. ಅದಕ್ಕೆ, ಸೂಕ್ತ ಸಲಹೆ ಸೂಚನೆಗಳನ್ನು ನೀಡುವರು ಹಾಗೆ ಅವರಿಗಾಗಿ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಕೂಡ ಸಿದ್ದರಾಗಿ ಇರುವರು.ಒಬ್ಬರ ಸ್ವಭಾವ ಇನ್ನೊಬ್ಬರಿಗಿಂತ ವಿಭಿನ್ನವಾಗಿ ಇರುತ್ತದೆ. ಸಂದರ್ಭಕ್ಕೆ ಅನುಗುಣವಾಗಿ ಅವರ ಸ್ವಭಾವ ಕೂಡ ವ್ಯಕ್ತವಾಗುತ್ತದೆ.

Leave A Reply

Your email address will not be published.

error: Content is protected !!
Footer code: