ಕನಕಪುರದ ಬಂಡೆ, DK ಶಿವಕುಮಾರ್ ಪುತ್ರಿ ಐಶ್ವರ್ಯ ಅವರ ಮನೆಯಲ್ಲಿ, ವರ ಮಹಾಲಕ್ಷ್ಮಿ ಹಬ್ಬದ ಸಂಭ್ರಮ ಹೇಗಿತ್ತು ನೋಡಿ

0

ಸ್ನೇಹಿತರೆ ತಮ್ಮ ಪ್ರಭಾವಿ ಆಡಳಿತಗಾರಿಕೆಯ ಮೂಲಕ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿರುವಂತಹ ಡಿಕೆ ಶಿವಕುಮಾರ್ (DK Shiva Kumar) ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತಗಳಿಂದ ಜಯಭೇರಿ ಸಾಧಿಸಿ ಇಂದು ಕರ್ನಾಟಕದ ಉಪಮುಖ್ಯಮಂತ್ರಿ(Deputy Chief Minister) ಸ್ಥಾನವನ್ನು ಗಿಟ್ಟಿಸಿಕೊಂಡು ರಾಜ್ಯದ ಆಗುಹೋಗುಗಳನ್ನೆಲ್ಲ ನೋಡಿಕೊಳ್ಳುತ್ತಿದ್ದಾರೆ.

ಕೇವಲ ರಾಜಕೀಯವಾಗಿ ಮಾತ್ರವಲ್ಲದೆ ವೈಯಕ್ತಿಕವಾಗಿಯೂ ಇತರರಿಗೆ ಆದರ್ಶ ವಾಗುವಂತೆ ಬದುಕುತ್ತಿರುವ ಡಿಕೆ ಶಿವಕುಮಾರ್ 1993 ರಂದು ಉಷಾ (Usha) ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೀಗೆ ಮದುವೆಯಾದ ನಂತರ ಇವರ ಬಾಳೆ ಬೆಳಕಾಯಿತು ಎಂದರೆ ತಪ್ಪಾಗಲಾರದು. ತಮ್ಮ ಪತ್ನಿಯ ಕಾಲ್ಗುಣದಿಂದ ರಾಜಕೀಯ ರಂಗದಲ್ಲಿ ಯಶಸ್ಸು ಕಂಡು ತಮ್ಮ ಪ್ರಭಾವಿ ಆಡಳಿತದ ಮೂಲಕ ಜನಮನ್ನಣೆ ಪಡೆದ ಡಿಕೆ ಶಿವಕುಮಾರ್ ಅವರಿಗೆ ಐಶ್ವರ್ಯ, ಆಭರಣ ಎಂಬ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಆಕಾಶ್(Akash)

ಎಂಬ ಗಂಡು ಮಗನಿದ್ದು, ಐಶ್ವರ್ಯ ಡಿಕೆ ಶಿವಕುಮಾರ್ ಅವರನ್ನು ಕಳೆದ ಕೆಲವು ದಿನಗಳ ಹಿಂದೆ ಕಾಫಿ ಡೇ ಮಾಲೀಕ ಸಿದ್ಧಾರ್ಥ (Sidddartg) ಅವರ ಮಗ ಅಮರ್ತ್ಯ ಅವರಿಗೆ ನೀಡಿ ಬಹಳ ಅದ್ದೂರಿಯಾಗಿ ಎಲ್ಲರೂ ತಮ್ಮತ್ತ ತಿರುಗಿ ನೋಡುವಂತೆ ಮದುವೆ ಮಾಡಿಕೊಟ್ಟರು. ಐಶ್ವರ್ಯ (Aishwarya) ಕೂಡ ತಮ್ಮ ತಂದೆ ಹಾಕಿಕೊಟ್ಟ ದಾರಿಯಲ್ಲೇ ಸಾಗುತ್ತಾ ಇತರರಿಗೆ ಆದರ್ಶ ವಾಗುವಂತೆ ಡಿಕೆ ಶಿವಕುಮಾರ್ ಅವರ ಹೆಸರಿನಲ್ಲಿರುವ ಸಾಕಷ್ಟು ಶಿಕ್ಷಣ

ಸಂಸ್ಥೆಗಳ ಜವಾಬ್ದಾರಿಯನ್ನು ಹೊತ್ತು ಅತಿ ಚಿಕ್ಕ ವಯಸ್ಸಿಗೆ ಪ್ರಬುದ್ಧವಾದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮೊಳಗಿರುವಂತಹ ಆತ್ಮವಿಶ್ವಾಸವನ್ನು ಯುವಕರಲ್ಲಿಯೂ ತುಂಬಿಸಿ ಅವರನ್ನು ಏಳಿಗೆಯತ್ತ ಉರಿದುಂಬಿಸಬೇಕೆಂಬ ಕಾರಣಕ್ಕೆ ಪ್ರೇರಣಾ ಬೋಧಕಾರಾಗಿಯೂ(Motivation speaker) ಕೆಲಸ ನಿರ್ವಹಿಸುತ್ತಿರುವ ಐಶ್ವರ್ಯ ಡಿಕೆ ಶಿವಕುಮಾರ್ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾಗಳ ಮೂಲಕ ಆಗಾಗ ಫ್ಯಾನ್ಸ್ಗಳ ಜೊತೆಗೆ ಒಡನಾಟದಲ್ಲಿ ಇರುತ್ತಾರೆ.

ಇನ್ನು ಕಳೆದ ಶುಕ್ರವಾರದ ಶುಭದಿನದಂದು ಮನೆಯಲ್ಲಿ ತಮ್ಮ ತಾಯಿ ಉಷಾ (Usha) ಅವರೊಟ್ಟಿಗೆ ಸೇರಿ ಅದ್ದೂರಿಯಾಗಿ ವರಮಹಾಲಕ್ಷ್ಮಿ ಪೂಜೆಯನ್ನು ಮಾಡಿರುವ ಡಿಕೆ ಪುತ್ರಿ ಐಶ್ವರ್ಯ ಕಿತ್ತಳೆ ಬಣ್ಣದ ಸೀರೆಯುಟ್ಟು, ಫ್ರೀ ಹೇರ್ ಬಿಟ್ಟು ಕೈಗಳಿಗೆ ಬಳೆ ಕಿವಿಗಳಿಗೆ ಓಲೆ ಹಾಗೂ ಕುತ್ತಿಗೆಗೆ ಸರ ಎಲ್ಲವನ್ನು ಧರಿಸಿ ಬಹಳ ಸಾಂಪ್ರದಾಯಕವಾಗಿ ಫೋಟೋಗೆ ಫೋಸ್ ನೀಡಿದ್ದಾರೆ.

ಇದನ್ನೂ ಓದಿ Actor Darshan: ವಿಶೇಷ ಮಹಿಳಾ ಅಭಿಮಾನಿಗಳೊಡನೆ ರಕ್ಷಾಬಂಧನ ಆಚರಿಸಿದ ದಾಸ ದರ್ಶನ್

Leave A Reply

Your email address will not be published.

error: Content is protected !!
Footer code: