ಸ್ನೇಹಿತರೆ, ಕಳೆದ ಮೂರು ನಾಲ್ಕು ದಿನಗಳಿಂದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ತಮ್ಮ ಅಣ್ಣ ಚಿರು ಸರ್ಜಾ(Chiru Sarja) ಅವರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ತಮ್ಮ ಅಣ್ಣನ ಪುಣ್ಯ ಭೂಮಿಯ ಪಕ್ಕದಲ್ಲಿ ಸಾಮಾನ್ಯ ದಾರಿ ಹೋಕರಂತೆ ಮಲಗಿ ಗಾಢವಾದ ನಿದ್ರೆಗೆ ಜಾರಿದ್ದಂತಹ ವಿಡಿಯೋ ಒಂದು ಬಾರಿ ವೈರಲ್ ಆಗಿತ್ತು. ಅಣ್ಣನನ್ನು ಅತೀವವಾಗಿ ಮಿಸ್ ಮಾಡಿಕೊಳ್ಳುತ್ತಿರುವಂತಹ ಧ್ರುವ ಸರ್ಜಾ(Dhruva Sarja) ತಮ್ಮ ಫಾರ್ಮ್ ಹೌಸ್ ನಲ್ಲಿ ಇರುವಂತಹ ಅಣ್ಣನ ಪುಣ್ಯಭೂಮಿಯಲ್ಲಿ ಹೆಚ್ಚಿನ ಕಾಲ ಕಳೆಯುತ್ತಿದ್ದರು.
ಆದರೆ ಜನಿಸುವಂತಹ ಮಗು ಅಣ್ಣನ ತದ್ರೂಪೆ ಇರಲಿ ಮಗುವಿಗೆ ಅಣ್ಣನ ಆಶೀರ್ವಾದ ದೊರಕಲಿ ಎಂಬ ಉದ್ದೇಶದಿಂದ ತಮ್ಮ ಅಣ್ಣನ ಪುಣ್ಯ ಭೂಮಿಯಲ್ಲಿ ಹೆಂಡತಿ ಪ್ರೇರಣಾರ ಅದ್ದೂರಿ ಸೀಮಂತ ಶಾಸ್ತ್ರ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಇದಾದ ಬಳಿಕ ತಮ್ಮ ಮಗಳೊಂದಿಗೆ ಸಮಾಧಿಯ ಮೇಲೆ ಮಲಗಿ ಕಾಲ ಕಳೆದ ದ್ರುವ ಸರ್ಜಾ(Dhruva Sarja) ವಿಡಿಯೋ ಒಂದನ್ನು ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹೌದು ಗೆಳೆಯರೇ ಮತ್ತೆ ಮತ್ತೆ ನೆನಪುಗಳು ತಿರುಗಿ ಬರುವುದೇ ಹಳೆದನ್ನ ಮರಿಬೇಡ ಅಂತ ಹೇಳೋಕೆ ಎಂಬ ಹಾಡನ್ನು ತಮ್ಮ ವಿಡಿಯೋಗೆ ಹಾಕಿಸಿ ಲವ್ ಯು ಬ್ರೋ (Love you bro) ಎಂಬ ಕ್ಯಾಪ್ಶನ್ ಬರೆದಿದ್ದಾರೆ.