Prajwal Devraj: ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಕುಟುಂಬದ ಸುಂದರ ಫೋಟೋಸ್!

0

ಸ್ನೇಹಿತರೆ, ಕನ್ನಡ ಸಿನಿಮಾ ರಂಗದ ಮುದ್ದಾದ ಜೋಡಿ ಹಕ್ಕಿಗಳೆಂದೇ ಕರೆಸಿಕೊಳ್ಳುವಂತಹ ರಾಗಿಣಿ ಮತ್ತು ಪ್ರಜ್ವಲ್ ದೇವರಾಜ್(Prajwal Devraj) ಅವರು ಸಿನಿ ಕೆಲಸಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಇದ್ದು ಆಗಾಗ ತಮ್ಮ ಹಾಗೂ ತಮ್ಮ ಕುಟುಂಬದ ಸುಂದರ ಫೋಟೋಗಳನ್ನು ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ನಂತಹ ಸೋಶಿಯಲ್ ಮೀಡಿಯಾ ಕಥೆಗಳಲ್ಲಿ ಪೋಸ್ಟ್ ಮಾಡುತ್ತಾ ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿರುತ್ತಾರೆ.

ಅದರಂತೆ ಕಳೆದ ಕೆಲ ದಿನಗಳ ಹಿಂದೆ ದೇಶದಾದ್ಯಂತ ಬಹಳ ಅದ್ದೂರಿಯಾಗಿ ಆಚರಿಸಲಾದಂತಹ ಕೃಷ್ಣ ಜನ್ಮಾಷ್ಟಮಿ(Krishna Janmastami) ಹಬ್ಬವನ್ನು ತಮ್ಮ ಮನೆಯಲ್ಲೇ ಸರಳವಾಗಿ ಮಾಡಿ ಮನೆಯವರೆಲ್ಲರೂ ಒಟ್ಟಿಗೆ ನಿಂತು ಗ್ರೂಪ್ ಫೋಟೋ ತೆಗೆಸಿಕೊಳ್ಳುವ ಮೂಲಕ ಅದರ ಕೆಲ ಫೋಟೋಸ್ಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದ ರಾಗಿಣಿ ಹಾಗೂ ಪ್ರಜ್ವಲ್ ದೇವರಾಜ್ ಅವರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು,

ಇವರ ಸುಂದರ ಕುಟುಂಬ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.‌ ಹೌದು ಗೆಳೆಯರೇ ಯಾವುದೇ ಹಬ್ಬ ಹರಿದಿನಗಳು ಬಂದರೂ ಮನೆಯವರೆಲ್ಲರೂ ಒಟ್ಟಿಗೆ ಸೇರಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಸಂಭ್ರಮಿಸುವಂತಹ ಫ್ಯಾಮಿಲಿ ಇವರದ್ದಾಗಿದ್ದು, ಕಳೆದ ಕೃಷ್ಣ ಜನ್ಮಾಷ್ಟಮಿ ಹಬ್ಬದ ದಿನದಂದು ಮನೆಯಲ್ಲಿ ದೇವರಿಗೆ ಪೂಜಾ ಕೈಂಕಾರಿಯಗಳನ್ನು ನೆರವೇರಿಸಿ, ಆನಂತರ ಮನೆಯ ಹೊರಾಂಗಣದಲ್ಲಿ ನಿಂತು ತಂದೆ ದೇವರಾಜ್ ಹಾಗು ತಾಯಿ ಚಂದ್ರಲೇಖ ಜೊತೆಗೆ

ತಮ್ಮ ಪತ್ನಿ ರಾಗಿಣಿ ಹಾಗೂ ತಮ್ಮ ಪ್ರಣಂ ಮತ್ತು ದಂಪತಿಗಳೊಟ್ಟಿಗೆ ಸೇರಿ ಗ್ರೂಪ್ ಫೋಟೋವನ್ನು ತೆಗೆಸಿಕೊಂಡು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇವರ ಸಕುಟುಂಬವನ್ನು ಒಂದೇ ಫ್ರೇಮಿನಲ್ಲಿ ಕಂಡಂತಹ ಅಭಿಮಾನಿಗಳು ಮೆಚ್ಚುಗೆಯ ಸಾಗರವನ್ನೇ ಹರಿಸುತ್ತಿದ್ದು, ಕ್ಯೂಟ್ ಫ್ಯಾಮಿಲಿ ಸದಾ ಕಾಲ ಹೀಗೆ ಇರಿ ಎಂದೆಲ್ಲ ಹರಸಿ ಹಾರೈಸುತ್ತಿದ್ದಾರೆ. ಸದ್ಯ ಪ್ರಜ್ವಲ್ ದೇವರಾಜ್(Prajwal Devraj) ಅವರು ಮೇಘನ ರಾಜ್(Meghana Raj) ಅವರೊಂದಿಗೆ ತತ್ಸಮ ತದ್ಭವ ಚಿತ್ರದಲ್ಲಿ ಅಭಿನಯಿಸಿದ್ದು, ಸಿನಿಮಾ ಇನ್ನೆರಡು ದಿನಗಳಲ್ಲಿ ತೆರೆ ಕಾಣುತ್ತಿರುವುದರಿಂದ ಪ್ರಮೋಷನ್ ಕೆಲಸಗಳಲ್ಲಿ ಪ್ರಜ್ವಲ್ ತೊಡಗಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!
Footer code: