ದೇಹದ ಅಂಗಗಳೇ ತಿಳಿಸುತ್ತೆ ಶುಭ – ಅಶುಭಗಳ ಬಗ್ಗೆ..

0

ದೇಹದ ಅಂಗಗಳು ಯಾವ ಯಾವ ರೀತಿ ಇದ್ದರೆ ಯಾವ ಯಾವ ಸಂಕೇತವನ್ನು ಸೂಚಿಸುತ್ತವೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ನಮ್ಮ ನಡಿಗೆಗಳು ಹಾವ ಭಾವಗಳು ನಾವು ನೋಡುವಂತಹ ನೋಟ ಆಗಿರಲಿ ನಾವು ಮಾತನಾಡುವ ಶೈಲಿ ಇವೆಲ್ಲವುಗಳ ಆಧಾರದ ಮೇಲೆ ಜ್ಯೋತಿಷ್ಯ ಶಾಸ್ತ್ರದರಲ್ಲಿ ಶುಭ ಮತ್ತು ಅಶುಭ ಸಂಕೇತಗಳನ್ನು ಹೇಳಲಾಗುತ್ತದೆ. ಹಾಗಾದರೆ ಅಂಗಗಳು ಯಾವ ಯಾವ ರೀತಿ ಇದ್ದರೆ ಯಾವ ಯಾವ ರೀತಿ ನಡೆದುಕೊಂಡರೆ ಶುಭ ಮತ್ತು ಅಶುಭವಾಗಿರುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಈ ಲೇಖನವನ್ನು ಪೂರ್ತಿಯಾಗಿ ಓದಿ.

ಬೆರಳಿನ ತುದಿಗಳಲ್ಲಿ ಅರ್ಧಚಂದ್ರಾಕೃತಿ ಇರುತ್ತದೆ. ಅಂದರೆ ಉಗುರಿನ ತುದಿಗಳಲ್ಲಿ ಅರ್ಧಚಂದ್ರ ಬರುತ್ತದೆ ಈ ರೀತಿ ಬಂದರೆ ಅವರು ತುಂಬಾ ಅದೃಷ್ಟವಂತರಾಗಿರುತ್ತಾರೆ ಹಾಗೆ ಕೆಲವರ ಕಣ್ಣುಗಳು ಸ್ವಲ್ಪ ದೊಡ್ಡದಾಗಿರುತ್ತವೆ ಈ ರೀತಿ ಇದ್ದರೂ ಕೂಡ ಅವರು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಕಣ್ಣುಗಳು ದೊಡ್ಡದಾಗಿದ್ದರೆ ಅವರು ವಿಶಾಲವಾದ ಮನೋಭಾವವನ್ನು ಉಳ್ಳವರಾಗಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಅಗಲವಾದ ಹಣೆಯುಳ್ಳ ವ್ಯಕ್ತಿಗಳು ತುಂಬಾ ಶುಭ ಸಂಕೇತ ಎಂದು ಹೇಳಲಾಗುತ್ತದೆ. ಇವರು ಮನೆಗೆ ತುಂಬಾ ಅದೃಷ್ಟವಲ್ಲ ತರುತ್ತಾರೆ. ಇವರಿಂದ ಮನೆಗೆ ಮನೆತನಕ್ಕೆ ತಂದೆ ತಾಯಿಗಳಿಗೆ ಗೌರವ ತರುತ್ತದೆ. ಹಾಗೂ ಇಂತಹ ವ್ಯಕ್ತಿಗಳು ತುಂಬಾ ಬುದ್ಧಿವಂತರಾಗಿರುತ್ತಾರೆ. ಕಲಿಯುವ ಆಸಕ್ತಿಯುಳ್ಳ ಇಂತಹ ಹಣೆಯನ್ನು ಪಡೆದವರು ನಿಜವಾಗಲೂ ಬುದ್ಧಿಜೀವಿಗಳು.

ಇನ್ನು ಉದ್ದವಾದ ಬೆರಳುಗಳನ್ನು ಯಾರು ಹೊಂದಿರುತ್ತಾರೋ ಅಂತಹವರು ತುಂಬಾ ಅದೃಷ್ಟವಂತರು ಅಂತ ಹೇಳಲಾಗುತ್ತದೆ ಅವರು ಹುಟ್ಟಿದ ಮನೆಗೆ ಮತ್ತು ಮೆಟ್ಟಿದ ಮನೆಗೆ ಅದೃಷ್ಟವನ್ನು ತರುತ್ತಾರೆ ಇವರನ್ನು ಅದೃಷ್ಟಲಕ್ಷ್ಮಿ ಅಂತಾನೆ ಹೇಳಬಹುದು. ಪುರುಷರಾಗಿರಬಹುದು ಅಥವಾ ಮಹಿಳೆಯರಾಗಿರಬಹುದು ಇಂತಹವರು ಜೀವನವನ್ನ ಹೆಚ್ಚು ಎಂಜಾಯ್ ಮಾಡುತ್ತಾರಂತೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave A Reply

Your email address will not be published.

error: Content is protected !!