Dboss Darshan : ಗೋಶಾಲೆಗೆ ಭೇಟಿ ನೀಡಿ ಗೋವುಗಳ ರಕ್ಷಣೆಗೆ ಸಾಥ್ ನೀಡಲು ಮುಂದಾದ ಡಿ ಬಾಸ್ ದರ್ಶನ್! ಗೋಶಾಲೆಗಳನ್ನು ದತ್ತು ಪಡೆದಿರುವ ದರ್ಶನ್ ಅವರು ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ!!

0

Dboss Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರಿಗೆ ಪ್ರಾಣಿ ಪಕ್ಷಿಗಳ ಮೇಲೆ ಅದೆಷ್ಟು ಪ್ರೀತಿ, ಒಲವು ಹಾಗೂ ಕಾಳಜಿ ಇದೆ ಎಂಬುದರ ಮಾಹಿತಿ ನಮ್ಮೆಲ್ಲರಿಗೂ ಗೊತ್ತೇ ಇದೆ. ತಮ್ಮ ಫಾರ್ಮ್ ಹೌಸ್ನಲ್ಲಿಯೇ(Farmhouse) ಸಾಕಷ್ಟು ಸಾಕು ಪ್ರಾಣಿಗಳನ್ನು ಸಾಕುತ್ತಾ ಬಿಡುವಿನ ಸಮಯದಲ್ಲೆಲ್ಲಾ ಅವುಗಳ ಪಾಲನೆ ಪೋಷಣೆಯಲ್ಲಿ ತೊಡಗಿಕೊಂಡಿರುತ್ತಾರೆ.

ಕನ್ನಡದ ಸ್ಟಾರ್ ನಟನಾದರೂ ಸಹ ಸ್ವತಹ ದರ್ಶನ್(Darshan) ಅವರೇ ಅವುಗಳ ಮೈಯುಜ್ಜಿ ಪ್ರೀತಿಯಿಂದ ಆರೈಕೆ ಮಾಡಿರುವಂತಹ ವಿಡಿಯೋಗಳೆಲ್ಲ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲಾಗುತ್ತದೆ. ಹೀಗೆ ಚಿಕ್ಕಂದಿನಿಂದಲೂ ಪ್ರಾಣಿ ಪಕ್ಷಿಗಳ ಮೇಲೆ ಅಗಾಧವಾದ ಒಲವನ್ನು ಬೆಳೆಸಿಕೊಂಡಿರುವ ದರ್ಶನ್(Darshan) ಅವರು ಯಾವುದೇ ಊರು ಅಥವಾ ಮೃಗಾಲಯಗಳಿಗೆ ಹೋದರು ಅಲ್ಲಿನ ಪ್ರಾಣಿಗಳ ಯೋಗಕ್ಷೇಮವನ್ನು ವಿಚಾರಿಸಿದೆ ಎಂದು ವಾಪಸ್ ಆಗುವುದಿಲ್ಲ.

Dboss Darshan Visited Penugonda Cowshed

ಶೂಟಿಂಗ್(shooting) ಕೆಲಸಗಳ ನಡುವೆಯೂ ತಮ್ಮ ಸ್ನೇಹಿತರೊಂದಿಗೆ ವಿರಾಜ್ ಪೇಟೆ(Virajpet) ಪ್ರವಾಸಕ್ಕೆ ಹೋಗಿದ್ದ ದರ್ಶನವರು ಅಲ್ಲಿಂದ ಅನಂತಪುರದ ಪೆನುಗೊಂಡ ಗೋಶಾಲೆಗೆ(Penugonda Cowshed) ತೆರಳಿ ಹಸುಗಳ ಯೋಗ ಕ್ಷೇಮವನ್ನು ವಿಚಾರಿಸಿದ್ದಾರೆ. ಈ ಕೆಲ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು, ಡಿ ಬಾಸ್(D boss) ಅವರ ಗೋ ಪ್ರೇಮಕ್ಕೆ ಅಭಿಮಾನಿಗಳು ಮನಸ್ಸೋತು ಹೋಗಿದ್ದಾರೆ.

ಹೌದು ಸ್ನೇಹಿತರೆ ಸದಾ ಕಾಲ ಸನ್ಮಾರ್ಗದಲ್ಲಿ ನಡೆಯುತ್ತಾ ಒಳ್ಳೊಳ್ಳೆ ಕೆಲಸಗಳನ್ನು ಮಾಡುತ್ತ ಇವುಗಳನ್ನು ಮುನ್ನಡೆಸಿಕೊಂಡು ಹೋಗುವಂತೆ ಅಭಿಮಾನಿಗಳಿಗೂ ಸಂದೇಶ ನೀಡುವ ಅವರು ನೆನ್ನೆ ಅಷ್ಟೇ ಅಮಿತ್ ಕಿಶನ್ ಮತ್ತು ಆಶ್ರಿತ್ ಕಿಶನ್ ಅವರು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಹೆಬ್ಬೇವು ಗೋಶಾಲೆಗೆ ಭೇಟಿ ನೀಡಿ ಅಲ್ಲಿನ ಹೈನುಗಾರಿಕೆ(Dairy Farming)ಯ ಕುರಿತು ಮಾಹಿತಿ ತಿಳಿದುಕೊಂಡರು.

ಹೌದು ಗೆಳೆಯರೇ ಈ ಗೋಶಾಲೆಯು ಕೇವಲ ಆರು ಹಸುಗಳಿಂದ ಶುರುವಾಗಿ ಇಂದು 700ಕ್ಕೂ ಅಧಿಕ ಹಸುಗಳಿವೆ. ಅಲ್ಲದೆ ವಿಶ್ವ ದರ್ಜೆಯ ಹೋರಿಗಳು ಈ ಫಾರ್ಮ್ನಲ್ಲಿ ಇದ್ದು, ಅವುಗಳನ್ನೆಲ್ಲ ನಟ ದರ್ಶನ್(Darshan) ವೀಕ್ಷಿಸಿ ಸ್ಪರ್ಶಿಸುತ್ತಾ ಅದರ ಜೊತೆಗೆ ಹಸುಗಳನ್ನು ಸ್ಪರ್ಶಿಸಿ ಅವುಗಳನ್ನು ಬಹಳ ಪ್ರೀತಿಯಿಂದ ಮುದ್ದಾಡೋದರ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ದರ್ಶನ್(Darshan) ಅವರು ಚಿಕ್ಕಂದಿನಲ್ಲೇ ಹಸುಗಳನ್ನು ಕಟ್ಟಿ, ಅವುಗಳ ಹಾಲು ಕರೆದು ಅದರ ಆರೈಕೆ ಮಾಡಿ ಬೆಳೆದಂತಹ ವ್ಯಕ್ತಿ, ಹೀಗಾಗಿ ಹಲವು ವರ್ಷಗಳಿಂದಲೂ ಹೈನುಗಾರಿಕೆಯ ಮೇಲೆ ದರ್ಶನವರಿಗೆ ವಿಶೇಷವಾದ ಆಸಕ್ತಿ ಇದೆ. ತಮ್ಮ ಫಾರ್ಮ್(Farm)ನಲ್ಲಿಯೂ ಸಾಕಷ್ಟು ಹಸುಗಳನ್ನು ದರ್ಶನ್ ಸಾಕಿದ್ದು.

ಸದ್ಯ ಅರಣ್ಯ ಇಲಾಖೆಯ ರಾಯಭಾರಿ (Ambassador)ಯಾಗಿಯು ಪರಿಸರ ಹಾಗೂ ಗೋವುಗಳ ಸಂರಕ್ಷಣೆಯ ಕುರಿತು ಜಾಗೃತಿಯನ್ನು ತಮ್ಮ ಅಭಿಮಾನಿಗಳಲ್ಲಿ ಸಾರ್ವಜನಿಕರಲ್ಲಿ ಮೂಡಿಸುತ್ತಾರೆ. ಸದ್ಯ ಈ ಫೋಟೋಗಳೆಲ್ಲವೂ ದರ್ಶನ್(Darshan) ಅವರ ಗೋ-ಕಾಳಜಿ(concern)ಗೆ ಸಾಕ್ಷಿಯಾಗಿದೆ.

Leave A Reply

Your email address will not be published.

error: Content is protected !!
Footer code: