ನಟನಾಗಿ ನಿರ್ಮಾಪಕನಾಗಿ ನಿರ್ದೇಶನಕ್ಕಾಗಿ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿರುವಂತಹ ಬಿಸಿ ಪಾಟೀಲ್(BC Patil) 1979ರಲ್ಲಿ ವಿದ್ಯಾಭ್ಯಾಸ ಮುಗಿದ ನಂತರ ಪೊಲೀಸ್ ತರಬೇತಿಯನ್ನು ಪಡೆದು ಕರ್ನಾಟಕ ಪೊಲೀಸ್ ಇಲಾಖೆಗೆ ಸೇರಿದರು. ಹೀಗೆ ಕಡಕ್ ಪೊಲೀಸ್ ಆಫೀಸರ್(Police officer) ಆಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಂತಹ ಬಿಸಿ ಪಾಟೀಲ್ ಅವರಿಗೆ ವಿಷ್ಣುವರ್ಧನ್ ಅವರ ನಿಷ್ಕರ್ಷ (nishkarsha) ಸಿನಿಮಾದಲ್ಲಿ ನಟಿಸುವಂತಹ ಅವಕಾಶ ದೊರಕುತ್ತದೆ.
ಈ ಕಾರಣದಿಂದ 1993 ನಲ್ಲಿ ಸಿನಿ ರಂಗ ಪ್ರವೇಶಿಸಿದ ಬಿಸಿ ಪಾಟೀಲ್(BC Patil) ಅವರ ಅಭಿನಯಕ್ಕೆ ಕನ್ನಡಿಗರು ಮೆಚ್ಚಿ ಫುಲ್ ಮಾರ್ಕ್ಸ್ ನೀಡಿದರು. ಇಲ್ಲಿಂದ ಶುರುವಾದಂತ ಬಿಸಿ ಪಾಟೀಲ್ ಅವರ ಸಿನಿ ಪರ್ವ ಮಹಾಶಕ್ತಿ, ಪೂರ್ಣ ಸತ್ಯ, ಕರ್ಫ್ಯೂ, ನಿರ್ಬಂಧ, ಜೈ ಹಿಂದ್, ಗೌರವ, ಎಲ್ಲರಂತಲ್ಲ ನನ್ನ ಗಂಡ, ಚನ್ನಪ್ಪ ಚನ್ನೇಗೌಡ, ಹ್ಯಾಟ್ಸ್ ಆಫ್ ಇಂಡಿಯಾ, ಸೂರ್ಯ ಐಪಿಎಸ್, ಕೌರವ ಸೇರಿದಂತೆ 50ಕ್ಕು ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿ ಪೀಕ್ನಲ್ಲಿ ಇರುವಾಗಲೇ ಜಾತ್ಯತೀತ ಜನತಾದಳ ವತಿಯಿಂದ ರಾಜಕೀಯ (Politics) ರಂಗವನ್ನು ಪ್ರವೇಶ ಮಾಡಿದರು.
ಹೀಗೆ ರಾಜಕೀಯ ರಂಗದಲ್ಲಿಯೂ ಯಶಸ್ವಿ ಶಾಸಕರಾಗಿ ಮಾಜಿ ಸಚಿವರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಬಿಸಿ ಪಾಟೀಲ್ ಅವರು ವನಜ(Vanaja) ಎಂಬವರನ್ನು ಮದುವೆಯಾದರು. ಈ ದಂಪತಿಗಳಿಗೆ ಸೌಮ್ಯ(Sowmya) ಮತ್ತು ಸೃಷ್ಟಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರು ಕೂಡ ತಮ್ಮ ತಮ್ಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಇನ್ನು 2018 ರಲ್ಲಿ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಸಿ ಪಾಟೀಲ್(BC Patil) ಕಿರಿಯ ಮಗಳು ಸೃಷ್ಟಿ(srushti) ಯವರ ಸುಂದರ ಮದುವೆಯ ಸುಮಧುರ ಕ್ಷಣಗಳ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social media) ಬಾರಿ ವೈರಲಾಗುತ್ತಿದೆ. ನೀವು ಕೂಡ ಬಿಸಿ ಪಾಟೀಲ್ ಅವರ ಕುಟುಂಬ ಹೇಗಿದೆ ಎಂಬುದನ್ನು ಈ ಪುಟದ ಮುಖಾಂತರ ಕಣ್ತುಂಬಿಕೊಳ್ಳಬಹುದಾಗಿದೆ.