ಕಟಕ ರಾಶಿಯಲ್ಲಿ ಶುಕ್ರ ಸಂಚಾರ ಈ ರಾಶಿಯವರಿಗೆ ಶುಕ್ರದೆಸೆ ಪ್ರಾರಂಭ, ಇನ್ನು ಇವರನ್ನ ತಡೆಯೋರು ಯಾರು

0

Astrology for Shukradese: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸಂಪತ್ತಿನ ಅಧಿಪತಿ ಎಂದು ಹೇಳುತ್ತಾರೆ. ಶುಕ್ರನ ಸ್ಥಾನ ಬದಲಾವಣೆಯಿಂದ 12 ರಾಶಿಗಳು ಲಾಭ ಪಡೆಯುತ್ತಾರೆ. ಶುಕ್ರನ ನೇರ ಚಲನೆಯನ್ನು ಜ್ಯೋತಿಷ್ಯದಲ್ಲಿ ಶುಭ ಎಂದು ಕರೆಯಲಾಗುತ್ತದೆ. ಶುಕ್ರನ ಈ ಬದಲಾವಣೆಯಿಂದ ಎಲ್ಲ ರಾಶಿಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹದಿಂದ ಜೀವನ ಮಟ್ಟ ಸುಧಾರಣೆ ಆಗುತ್ತದೆ ಮನೆಯಲ್ಲಿ ಸಂತೋಷ ಹೆಚ್ಚಾಗುತ್ತದೆ. ಹಾಗಾದರೆ 12 ರಾಶಿಯವರ ಮೇಲೆ ಶುಕ್ರನ ಸಂಚಾರ ಯಾವೆಲ್ಲಾ ಪರಿಣಾಮವನ್ನು ಬೀರಿದೆ ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ನೋಡೋಣ

ಮೊದಲ ರಾಶಿ ಮೇಷ ರಾಶಿಯವರ ಮೇಲೆ ಶುಕ್ರನ ಸ್ಥಾನ ಬದಲಾವಣೆಯಿಂದ ಅವರು ತಮ್ಮ ಕುಟುಂಬದೊಂದಿಗೆ ಹೊಂದಿರುವ ಸಂಬಂಧ ಮೊದಲಿಗಿಂತ ಉತ್ತಮವಾಗಿರುತ್ತದೆ. ಮೇಷ ರಾಶಿಯವರು ಕುಟುಂಬದವರಿಗಾಗಿ ಹಣವನ್ನು ಖರ್ಚು ಮಾಡುತ್ತಾರೆ ವ್ಯವಹಾರದ ಸಲುವಾಗಿ ದೂರ ಪ್ರಯಾಣ ಮಾಡಬೇಕಾಗಬಹುದು. ಆಸ್ತಿಯಲ್ಲಿ ಹಣ ಹೂಡಿಕೆ ಮಾಡುವವರಿದ್ದರೆ ಶುಕ್ರನ ಸ್ಥಾನ ಬದಲಾವಣೆಯಿಂದ ಲಾಭ ಗಳಿಸಬಹುದು. ಮೇಷ ರಾಶಿಯವರು ಕಠಿಣ ಪರಿಶ್ರಮ ಪಟ್ಟರೆ ಯಶಸ್ಸು ಸಿಗುತ್ತದೆ.

ಎರಡನೆ ರಾಶಿ ವೃಷಭ ರಾಶಿ ಶುಕ್ರನ ಸ್ಥಾನ ಬದಲಾವಣೆಯಿಂದ ವೃಷಭ ರಾಶಿಯಲ್ಲಿ ಜನಿಸಿದವರು ಕೆಲಸ ಮಾಡುವ ಸ್ಥಳದಲ್ಲಿ ಶುಭ ಫಲವನ್ನು ಪಡೆಯುತ್ತಾರೆ, ಉದ್ಯೋಗದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಹೊಸ ಹೊಸ ಅವಕಾಶಗಳು ಲಭ್ಯವಾಗುತ್ತವೆ. ಈ ರಾಶಿಯವರು ಕುಟುಂಬದವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ, ಇವರಿಗೆ ಕುಟುಂಬದವರು ಬೆಂಬಲವನ್ನು ನೀಡುತ್ತಾರೆ, ಇವರು ಕೆಲಸ ಮಾಡುವ ಸ್ಥಳದಲ್ಲಿ ಪ್ರಶಂಸೆಗೆ ಒಳಗಾಗುತ್ತಾರೆ.

ಮೂರನೆ ರಾಶಿ ಮಿಥುನ ರಾಶಿ ಇವರ ಜೀವನದಲ್ಲಿ ಶುಕ್ರನ ಸಂಚಾರದಿಂದ ಲಾಭದ ಅವಕಾಶಗಳು ಹೆಚ್ಚಿವೆ, ಪಿತ್ರಾರ್ಜಿತ ಆಸ್ತಿಯ ವಿಷಯದಲ್ಲಿ ಮಿಥುನ ರಾಶಿಯವರಿಗೆ ಲಾಭವಾಗಲಿದೆ. ಶುಕ್ರನ ಸಂಚಾರದಿಂದ ಮಿಥುನ ರಾಶಿಯವರು ಅಂದುಕೊಂಡಿರುವುದನ್ನು ಸಾಧಿಸುತ್ತಾರೆ, ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಈ ವಿದೇಶದಲ್ಲಿ ಕೆಲಸ ಪಡೆಯುವ ಪ್ರಯತ್ನದಲ್ಲಿರುವ ಮಿಥುನ ರಾಶಿಯವರಿಗೆ ಶುಭ ಸುದ್ದಿ ಸಿಗಲಿದೆ.

ನಾಲ್ಕನೆಯ ರಾಶಿ ಕರ್ಕಾಟಕ ರಾಶಿ ಇವರು ಶುಕ್ರನ ಸಂಚಾರದಿಂದ ಮೊದಲಿಗಿಂತ ತಮಗೆ ಹೆಚ್ಚು ಗಮನ ಕೊಡಲು ಪ್ರಾರಂಭಿಸುತ್ತಾರೆ. ಇವರು ಯಾವ ಕೆಲಸದಲ್ಲಿ ಹಣ ಹೂಡಿಕೆ ಮಾಡಿದರೂ ಲಾಭ ಪಡೆಯುತ್ತಾರೆ ಹಾಗೆ ಖರ್ಚುಗಳು ಹೆಚ್ಚಾಗುತ್ತದೆ. ಕರ್ಕಾಟಕ ರಾಶಿಯವರ ಪೋಷಕರ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ. ತಾಳ್ಮೆ ಮತ್ತು ಸಂಯಮದಿಂದ ಕೆಲವು ಕೆಲಸಗಳನ್ನು ಮಾಡಿದರೆ ಕರ್ಕಾಟಕ ರಾಶಿಯವರು ಯಶಸ್ಸು ಪಡೆಯುತ್ತಾರೆ.

ಐದನೆ ರಾಶಿ ಸಿಂಹ ರಾಶಿ ಶುಕ್ರನ ಸಂಚಾರದಿಂದ ಸಿಂಹ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಈ ರಾಶಿಯವರು ಹಣವನ್ನು ಮನೆಯ ಪ್ರಮುಖ ಕೆಲಸಗಳಿಗೆ ಖರ್ಚು ಮಾಡುತ್ತಾರೆ ಹಾಗೂ ಅದರಿಂದ ಸಂತೋಷವನ್ನು ಪಡೆಯುತ್ತಾರೆ. ಶುಕ್ರನ ಸಂಚಾರದಿಂದ ಸಿಂಹ ರಾಶಿಯವರು ಮೊದಲಿಗಿಂತ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದುತ್ತಾರೆ. ಈ ರಾಶಿಯವರು ಸ್ನೇಹಿತರ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಈ ರಾಶಿಯವರಿಗೆ ಸುಧಾರಿಸಲು ಹಲವು ಅವಕಾಶಗಳಿವೆ ಚಿಂತನಾಶೀಲರಾಗಿ ಆಯ್ಕೆ ಮಾಡಿಕೊಳ್ಳಬೇಕು. ಸಿಂಹ ರಾಶಿಯವರು ಬೇರೆಯವರ ಮಾತನ್ನು ಕೇಳುವ ಮೊದಲು ಬುದ್ಧಿಯನ್ನು ಉಪಯೋಗಿಸಬೇಕು.

ಶುಕ್ರನ ಸಂಚಾರದಿಂದ ಕನ್ಯಾ ರಾಶಿಯವರು ಹಣದ ಲಾಭವನ್ನು ಪಡೆಯಲಿದ್ದಾರೆ, ಕೊಟ್ಟ ಹಣ ವಾಪಸ್ ಬರುತ್ತದೆ, ವ್ಯವಹಾರದಲ್ಲಿ ಲಾಭ ಗಳಿಸುತ್ತಾರೆ, ಈ ರಾಶಿಯವರ ಕೆಲಸವನ್ನು ಪ್ರಶಂಶಿಸಲಾಗುತ್ತದೆ. ಕನ್ಯಾ ರಾಶಿಯವರು ಪಾರ್ಟ್ನರ್ ಶಿಪ್ ಬಿಸಿನೆಸ್ ಮಾಡುತ್ತಿದ್ದರೆ ಲಾಭ ಗಳಿಸಲಿದ್ದಾರೆ. ಹಣ ಸಂಪಾದಿಸಲು ಇವರಿಗೆ ಹೊಸ ಅವಕಾಶಗಳು ದೊರೆಯುತ್ತವೆ. ಶುಕ್ರನ ಸಂಚಾರದಿಂದ ತುಲಾ ರಾಶಿಯವರಿಗೆ ಸಂಪತ್ತು ತಂದುಕೊಡುತ್ತದೆ. ಸಂಪತ್ತು ಹೆಚ್ಚಾಗುವುದರಿಂದ ತುಲಾ ರಾಶಿಯವರು ಕುಟುಂಬದ ಅಗತ್ಯಗಳನ್ನು ಯಶಸ್ವಿಯಾಗಿ ಪೂರೈಸುತ್ತಾರೆ. ಹೊರಗುತ್ತಿಗೆಯ ಕೆಲಸಗಳಲ್ಲಿ ತುಲಾ ರಾಶಿಯವರು ಲಾಭ ಪಡೆಯುತ್ತಾರೆ.

ವಿದೇಶಿ ಮೂಲಗಳಿಂದ ಹಣವನ್ನು ಗಳಿಸುವ ಅವಕಾಶ ತುಲಾ ರಾಶಿಯವರಿಗೆ ದೊರೆಯುತ್ತದೆ. ಶುಕ್ರನ ಸಂಚಾರದಿಂದ ವೃಶ್ಚಿಕ ರಾಶಿಯವರ ಕೆಲಸದ ಸ್ಥಳದಲ್ಲಿ ಬದಲಾವಣೆ ಆಗುತ್ತದೆ. ವೃಶ್ಚಿಕ ರಾಶಿಯವರು ಅಧಿಕಾರಿಗಳಿಂದ ಅಭಿನಂದನೆಯನ್ನು ಪಡೆಯುತ್ತಾರೆ. ಶುಕ್ರನ ಸಂಚಾರದಿಂದ ವೃಶ್ಚಿಕ ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ವೃಶ್ಚಿಕ ರಾಶಿಯವರು ಮೊದಲಿಗಿಂತ ಹಣವನ್ನು ಉಳಿಸುತ್ತಾರೆ.

ಶುಕ್ರನ ಸಂಚಾರದಿಂದ ಧನು ರಾಶಿಯವರ ವೃತ್ತಿಗೆ ಸಂಬಂಧಿಸಿದ ಅಡೆತಡೆಗಳು ನಿವಾರಣೆಯಾಗುತ್ತದೆ, ಅವಕಾಶಗಳು ಸಿಗುತ್ತದೆ ಪ್ರಗತಿ ಹೊಂದುತ್ತಾರೆ. ಇದ್ದಕ್ಕಿದ್ದಂತೆ ಹಣ ಪಡೆಯುವ ಯೋಗ ಧನು ರಾಶಿಯವರಿಗೆ ಇದೆ. ಈ ರಾಶಿಯವರು ಪಿತ್ರಾರ್ಜಿತ ಆಸ್ತಿಯಿಂದ ಹಣವನ್ನು ಗಳಿಸಬಹುದು. ಈ ರಾಶಿಯವರು ಖರ್ಚುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಇಲ್ಲವೆಂದರೆ ಮುಂದಿನ ದಿನಗಳಲ್ಲಿ ಕಷ್ಟವಾಗುತ್ತದೆ. ಮಕರ ರಾಶಿಯವರಿಗೆ ಶುಕ್ರ ಅದೃಷ್ಟದ ಗ್ರಹವಾಗಿದ್ದಾನೆ ಅದರಿಂದ ಈ ರಾಶಿಯವರು ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಮಕರ ರಾಶಿಯವರು ಏಳಿಗೆ ಕಾಣುತ್ತಾರೆ ಅವರ ಪ್ರತಿಷ್ಠೆ ಹೆಚ್ಚಾಗುತ್ತದೆ.

ಈ ರಾಶಿಯವರು ಬಿಸಿನೆಸ್ ಮಾಡುತ್ತಿದ್ದರೆ ಅದರಲ್ಲಿ ಲಾಭಗಳಿಸುತ್ತಾರೆ. ಕುಂಭ ರಾಶಿಯವರು ಶುಕ್ರನ ಸಂಚಾರದಿಂದ ವೃತ್ತಿ ಜೀವನದಲ್ಲಿ ಲಾಭಗಳಿಸುತ್ತಾರೆ, ಇವರು ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡಬೇಕಾಗುತ್ತದೆ. ಶುಕ್ರನ ಸಂಚಾರದಿಂದ ಕುಂಭ ರಾಶಿಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕುಂಭ ರಾಶಿಯವರ ಸಂಗಾತಿಯೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಾರೆ. ಶುಕ್ರನ ಸಂಚಾರದಿಂದ ಕೊನೆಯ ರಾಶಿ ಮೀನ ರಾಶಿಯವರು ಕೆಲಸದಲ್ಲಿ ಯಶಸ್ಸನ್ನು ಕಾಣುತ್ತಾರೆ, ಹಣ ಹೂಡಿಕೆಯಿಂದ ಉತ್ತಮ ಲಾಭವನ್ನು ಗಳಿಸುತ್ತಾರೆ. ಮೀನ ರಾಶಿಯವರು ತಜ್ಞರ ಸಲಹೆಯೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಒಟ್ಟಾರೆಯಾಗಿ 12 ರಾಶಿಯವರ ಮೇಲೆ ಶುಕ್ರನ ಸಂಚಾರ ಕೆಟ್ಟ ಪರಿಣಾಮ ಬೀರದೆ ಸಾಧಾರಣ ಅಥವಾ ಒಳ್ಳೆಯ ಪರಿಣಾಮವೆ ಬೀರಿದೆ ಇವುಗಳಲ್ಲಿ ನಿಮ್ಮ ರಾಶಿ ಯಾವುದು ಎಂದು ನಮಗೆ ತಿಳಿಸಿ.

Leave A Reply

Your email address will not be published.

error: Content is protected !!
Footer code: