WhatsApp Group Join Now
Telegram Group Join Now

ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಎಂಬ ಆಲದ ಮರ ನಮ್ಮೆಲ್ಲರಿಂದ ಅಗಲಿ ಹಲವು ದಿನಗಳು ಕಳೆದಿವೆ. ಆದರೂ ಕೂಡ ಅಪ್ಪು ನಮ್ಮೊಂದಿಗಿಲ್ಲ ಎಂಬ ಸತ್ಯವನ್ನು ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಭೂಮಿಯ ಮೇಲೆ ಇದ್ದಂತಹ ಸಾಕಷ್ಟು ಹೂಗಳನ್ನು ಬಿಟ್ಟು ಬೆಟ್ಟದ ಹೂವನ್ನೇ ತನ್ನ ಮುಡಿಗೇರಿಸಿಕೊಂಡ ಭಗವಂತನಿಗೆ ಅಭಿಮಾನಿಗಳು ಪ್ರತಿನಿತ್ಯ ಶಾಪ ಹಾಕುತ್ತಲೇ ಇದ್ದಾರೆ. ಸದ್ಯ ಅಪ್ಪು ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿದ್ದರೂ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ

ಸಾಗುತ್ತಾ ತಮ್ಮ ಜೀವನವನ್ನು ಬೆಳಕಾಗಿಸಿಕೊಳ್ಳುತ್ತಿರುವ ಸಾಕಷ್ಟು ಅಭಿಮಾನಿಗಳು ಪುನೀತ್ ರಾಜಕುಮಾರ್ (Puneeth Rajkumar) ಅವರ ಹೆಸರಿನ ಅಚ್ಚೆಯನ್ನು ಅವರ ಹುಟ್ಟು ಹಬ್ಬದ ಸಂಭ್ರಮದ ದಿನ ಹಾಕಿಸಿ ಅಭಿಮಾನ ಮೆರೆದರೆ, ನಟ ಹಾಗೂ ಪುನೀತ್ ರಾಜಕುಮಾರ್ ಅವರ ಸಹೋದರ ರಾಘವೇಂದ್ರ ರಾಜಕುಮಾರ್ (Raghavendra Rajkumar) ಕೂಡ ಪುನೀತ್ ರಾಜಕುಮಾರ್ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳ ಹೆಸರನ್ನು ತಮ್ಮ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.

ಹೌದು ಗೆಳೆಯರೇ ಅನುಶ್ರೀ ಅವರೊಡನೆ ವೇದಿಕೆಯ ಮೇಲೆ ಮಾತನಾಡುತ್ತಿದ್ದಂತಹ ಸಂದರ್ಭದಲ್ಲಿ ರಾಘಣ್ಣ ತಮ್ಮ ಶರ್ಟ್ ಗುಂಡಿಯನ್ನು ತೆರೆದು ಅಪ್ಪು ಹಾಗೂ ಅವರಿಬ್ಬರೂ ಮಕ್ಕಳ ಹೆಸರನ್ನು ತಮ್ಮ ಎದೆಯ ಮೇಲೆ ಟ್ಯಾಟು ಹಾಕಿಸಿಕೊಂಡು ಎದೆಯೊಳಗಿದ್ದ ಪ್ರೀತಿಯನ್ನು ಹೊರ ತಂದಿರುವುದಾಗಿ ತಿಳಿಸಿದರು. ತಮ್ಮನ ಅಗಲಿಕೆಯ ನೋವಿನಿಂದ ಇಂದಿಗೂ ಹೊರ ಬಂದಿರದ ರಾಘಣ್ಣ ಹಾಗೂ ಶಿವರಾಜ್ ಕುಮಾರ್ ಯಾವುದೇ ವೇದಿಕೆಗೆ ಹೋದರು ಅಲ್ಲಿ ಪುನೀತ್ ರಾಜಕುಮಾರ್ ಅವರ ಕುರಿತು ನಾಲ್ಕು ಮಾತುಗಳನ್ನಾಡದೆ ತಮ್ಮ ಕಾರ್ಯಕ್ರಮವನ್ನು ಮುಗಿಸುವುದಿಲ್ಲ.

ಹೀಗೆ ತಮ್ಮನ ಮೇಲೆ ಅಘಾತವಾದ ಪ್ರೀತಿ ಗೌರವ ಹಾಗೂ ಅಭಿಮಾನವನ್ನು ಇಟ್ಟುಕೊಂಡಿದ್ದ ರಾಘಣ್ಣ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ಸುದ್ದಿ ಕೇಳಿದೊಡನೆ ಕುಸಿದು ಬಿದ್ದರು. ಅಂದಿನಿಂದ ಇಂದಿನವರೆಗೂ ಅವರ ಆರೋಗ್ಯದಲ್ಲಿಯೂ ಅನೇಕ ವ್ಯತ್ಯಾಸಗಳು ಆಗುತ್ತಲ್ಲಿರುವ ಮಾಹಿತಿಯನ್ನು ದೊಡ್ಮನೆ ತಿಳಿಸುತ್ತಾ ಬಂದಿದೆ. ಇದೆಲ್ಲದರ ನಡುವೆಯೂ ರಾಘಣ್ಣ ತಮ್ಮ ಅನಾರೋಗ್ಯದ ಪರಿಸ್ಥಿತಿಯನ್ನು ಗಮನಿಸಿದೆ ಕರ್ನಾಟಕದ ಪುನೀತ, ದೊಡ್ಮನೆ ಅಪ್ಪು(Appu) ಹಾಗೂ ಪುನೀತ್ ರಾಜಕುಮಾರ್ ಅವರ ಮಕ್ಕಳಾದ ದೃತಿ ಮತ್ತು ವಂದಿತ

ಅವರ ಟೋಟೊ ಮತ್ತು ಕುಕ್ಕಿ(Toto & Kukki) ಎಂಬ ಅಡ್ಡ ಹೆಸರನ್ನು ತಮ್ಮ ಎದೆಯ ಮೇಲೆ ಅಚ್ಚೆ ಹಾಕಿಸಿಕೊಂಡಿದ್ದಾರೆ. ಈ ಫೋಟೋ ಸದಸ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಅಪ್ಪು ಹಾಗು ಅವರ ಕುಟುಂಬದ ಮೇಲೆ ರಾಘಣ್ಣ ಇಟ್ಟಿರುವಂತಹ ಪ್ರೀತಿ ಅಭಿಮಾನ ಕಂಡು ಪುನೀತ್ ರಾಜಕುಮಾರ್ (Puneeth Rajkumar) ಅಭಿಮಾನಿಗಳು ಕರಗಿದ್ದಾರೆ. ಇದನ್ನೂ ಓದಿ ನಟಿ ಕೃಷಿ ತಾಪಂಡ ಅವರ ಹೊಸ ಮನೆ ಗೃಹಪ್ರವೇಶದ ಸಂಭ್ರಮ ಹೇಗಿದೆ ನೋಡಿ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: