Actor Malashri: ಸ್ನೇಹಿತರೆ, ನಮ್ಮ ಸಂಸ್ಕೃತಿಯಲ್ಲಿ ಮಹತ್ವಪೂರ್ಣ ಆಚರಣೆ ಎನಿಸಿಕೊಂಡಿರುವಂತಹ ರಾಕಿ ಅಥವಾ ರಕ್ಷಾ ಬಂಧನ ಹಬ್ಬವನ್ನು ಈ ಬಾರಿ ಎಲ್ಲರೂ ಅತಿ ಸಡಗರ ಸಂಭ್ರಮದಿಂದ ಆಚರಿಸಿ ತಮ್ಮ ತಮ್ಮ ಸಹೋದರರಿಗೆ ರಾಕಿ ಕಟ್ಟಿ ಆಶೀರ್ವಾದ ಪಡೆದುಕೊಂಡರು. ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಕಷ್ಟ ಸುಖದಲ್ಲಿ ನಾನು ನಿನ್ನನ್ನು ಜೊತೆಗಿದ್ದು, ನೋಡಿಕೊಳ್ಳುತ್ತೇನೆ ಎಂಬುದರ ಸಂಕೇತವಾಗಿರುವ ರಾಖಿಯನ್ನು ಸ್ಯಾಂಡಲ್ ಸ್ಟಾರ್ ಸೆಲೆಬ್ರಿಟಿಗಳು
ಪರಸ್ಪರ ಒಬ್ಬರಿಗೊಬ್ಬರು ಕಟ್ಟಿ ವಿಶೇಷವಾಗಿ ಹಬ್ಬವನ್ನು ಆಚರಿಸಿದ ಕೆಲ ಫೋಟೋಗಳು ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಲೇ ಇದೆ. ಅದರಂತೆ ಮಾಲಶ್ರೀ ಅವರ ಇಬ್ಬರು ಮುದ್ದಿನ ಮಕ್ಕಳು ಸಹ ರಾಕಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದು, ಅದರ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಹೌದು ಗೆಳೆಯರೇ ಕೋಟಿ ರಾಮ ಮತ್ತು ಕನಸಿನ ರಾಣಿ ಮಾಲಾಶ್ರೀ ದಂಪತಿಗಳಿಗೆ ಆರಾಧನಾ ರಾಮ್(Aradhana Ram) ಮತ್ತು ಆರ್ಯನ್ ರಾಮ್(Aryan Ram) ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದು, ಆರಾಧನಾ ಅದಾಗಲೇ ತಮ್ಮ ತಾಯಿಯಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಟೇರ ಸಿನಿಮಾದ ಮೂಲಕ ಬಣ್ಣದ ಲೋಕದ ಪಯಣವನ್ನು ಪ್ರಾರಂಭ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಹೇಳಿಕೊಳ್ಳುವಂತಹ ಅವಕಾಶ ದೊರಕಿದೊಡನೆ ಚಿತ್ರರಂಗಕ್ಕೆ ಕಾಲಿಡುವ ಸೂಚನೆಗಳಿವೆ. ಹೀಗೆ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಮಾಲಾಶ್ರೀ ಮತ್ತು ಮಗಳು ಆಗಾಗ ತಮ್ಮ ಮನೆಯಲ್ಲಿ ನಡೆಯುವಂತಹ ಸುಂದರ ಕಾರ್ಯಕ್ರಮದ ಫೋಟೋಗಳನ್ನು ಅಭಿಮಾನಿಗಳೊಡನೆ ಹಂಚಿಕೊಳ್ಳುತ್ತಾ ವೈರಲಾಗುತ್ತಿರುತ್ತಾರೆ.
ಅದರಂತೆ ರಾಖಿ ಹಬ್ಬದ ಅಂಗವಾಗಿ ಮಾಲಾಶ್ರೀ(Malashree) ತಮ್ಮ ಸಹೋದರನಿಗೆ ರಾಖಿ ಕಟ್ಟಿ ಹಣೆಗೆ ತಿಲಕ ಇಟ್ಟರೆ ಮಗಳು ಆರಾಧನಾ ರಾಮ್(Aradhana Ram) ಕೂಡ ನೀಲಿ ಬಣ್ಣದ ಅನಾರ್ಕಲಿ ಧರಿಸಿ ತಮ್ಮನಿಗೆ ಪ್ರೀತಿಯಿಂದ ಪೂಜೆ ಮಾಡಿ ರಾಖಿ ಕಟ್ಟಿದ್ದಾರೆ. ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಹ್ಯಾಪಿ ರಕ್ಷಾ ಬಂಧನ (Happy Raksha Bandana) ಎಂಬ ಕ್ಯಾಪ್ಷನ್ ಬರೆದಿದ್ದಾರೆ.