WhatsApp Group Join Now
Telegram Group Join Now

ತುಂಬಾ ಜನರು ಜೀವನ ಪೂರ್ತಿ ಕಷ್ಟಗಳೆ ಇರುತ್ತದೆ ಎಂದು ಕೊಂಡಿರುತ್ತಾರೆ ಜೀವನದಲ್ಲಿ ತುಂಬಾ ನೊಂದುಕೊಂಡು ಜೀವನ ಸಾಗಿಸುತ್ತಾರೆ ಆದರೆ ಅದೃಷ್ಟ ಎನ್ನುವುದು ಯಾವಾಗ ಎಲ್ಲಿ ಹೇಗೆ ಬರುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ ಅದೃಷ್ಟ ಒಮ್ಮೆ ಖುಲಾಯಿಸಿದರೂ ಜೀವನದ ಸಕಲ ಕಷ್ಟಗಳು ದೂರ ಆಗುತ್ತದೆ ಹಿಂದಿನ ಕಷ್ಟದ ದಿನಗಳು ದೂರವಾಗಿ ಜೀವನದಲ್ಲಿ ಬದಲಾವಣೆ ಎನ್ನುವುದು ಕಂಡು ಬರುತ್ತದೆ ದುಡ್ಡಿನ ಅಧಿದೇವತೆಯಾದ ತಾಯಿ ಲಕ್ಷ್ಮೀ ದೇವಿಯ ಅನುಗ್ರಹ ಇದ್ದಾಗ ಮಾತ್ರ ಜೀವನದಲ್ಲಿ ಸಕಲ ಐಶ್ವರ್ಯ ಸುಖ ಶಾಂತಿ ನೆಲೆಸಲು ಸಾಧ್ಯ ಆಗುತ್ತದೆ ಅದೃಷ್ಟ ಒಮ್ಮೆ ಕಂಡು ಬಂದರೆ ಭಿಕ್ಷುಕರು ಸಹ ಶ್ರೀಮಂತನಾಗುತ್ತಾನೆ.

ಅದೃಷ್ಟ ಹಾಗೂ ದುರಾದೃಷ್ಟ ಎನ್ನುವುದು ಮೊದಲೇ ನಿಶ್ಚಿಯವಾಗಿ ಇರುತ್ತದೆ ಹಾಗೆಯೇ ನಮ್ಮ ಪೂರ್ವಜರ ಆಚರಣೆಗಳನ್ನು ಪಾಲನೆ ಮಾಡಬೇಕು ಇದರಿಂದ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬಹುದು ಹಾಗೆಯೇ ಒಮ್ಮೆ ಜೀವನದಲ್ಲಿ ದುರದೃಷ್ಟಕ್ಕೆ ಒಳಪಟ್ಟರೆ ಶ್ರೀಮಂತನು ಸಹ ಭಿಕ್ಷುಕನಾಗುವ ರೀತಿಯಲ್ಲಿ ಅನೇಕ ತರಹದ ಕಷ್ಟಗಳು ಕಂಡು ಬರುತ್ತದೆ ಹೀಗಾಗಿ ಅದೃಷ್ಟ ಹಾಗೂ ದುರಾದೃಷ್ಟ ಯಾವಾಗ ಬರುತ್ತದೆ ಎಂದು ಹೇಳುವುದಕ್ಕೆ ಸಾಧ್ಯ ಇಲ್ಲ ನಾವು ಈ ಲೇಖನದ ಮೂಲಕ ಅದೃಷ್ಟ ಬರುವ ಮುನ್ನ ಕಂಡು ಬರುವ ಕೆಲವು ಸೂಚನೆಗಳ ಬಗ್ಗೆ ತಿಳಿದುಕೊಳ್ಳೋಣ.

ಅದೃಷ್ಟ ಎನ್ನುವುದು ಹೇಗೆ ಯಾವಾಗ ಬರುತ್ತದೆ ಎನ್ನುವುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ ಕೆಲವೊಮ್ಮೆ ಅದೃಷ್ಟ ನಮ್ಮ ಸುಟ್ಟಮುತ್ತ ಇದ್ದರೂ ಸಹ ತಿಳಿಯುವುದು ಇಲ್ಲ ಅದೃಷ್ಟ ಒದಗಿ ಬಂದರೆ ಕಡು ಬಡವನು ಸಹ ಶ್ರೀಮಂತನಾಗುತ್ತಾನೆ ಒಬ್ಬ ಮನುಷ್ಯ ಬಡವನಾಗಲು ಹಾಗೂ ಶ್ರೀಮಂತನಾಗಲು ಸಮಯ ಬೇಕಾಗುತ್ತದೆ ಅದೃಷ್ಟ ಹಾಗೂ ದುರಾದೃಷ್ಟ ಎನ್ನುವುದು ಹಣೆಬರಹದಲ್ಲಿ ಬರೆದು ಇರುತ್ತದೆ ಅದೃಷ್ಟ ಇದ್ದರೆ ಭಿಕ್ಷುಕ ರಾತ್ರಿ ಕಳೆದು ಬೆಳಗು ಆಗುವರೆಗೆ ಶ್ರೀಮಂತನಾಗಿ ಇರುತ್ತಾನೆ ದುರಾದೃಷ್ಟ ಬೆನ್ನು ಹತ್ತಿದರೆ ಶ್ರೀಮಂತ ಸಹ ಬಡವನಾಗುತ್ತಾನೆ

ಕೆಲವೊಂದು ಸೂಚನೆಗಳು ಮುಂದಿನ ದಿನದಲ್ಲಿ ಅದೃಷ್ಟ ತರುತ್ತದೆ ಎನ್ನುವುದನ್ನು ತಿಳಿಸುತ್ತದೆ . ಬೆಳಿಗ್ಗೆ ಎದ್ದ ತಕ್ಷಣ ಗೋವಿನ ದರ್ಶನ ಹಾಗೂ ಮುತೈದೆಯ ದರ್ಶನ ಆದರೆ ಆ ದಿನವೂ ಅದೃಷ್ಟವಾಗಿ ಇರುತ್ತದೆ ಹಾಗೆಯೇ ಕೆಲಸ ನಿಮಿತ್ತ ಆಚೆಗೆ ಹೋಗುವಾಗ ಪಾತ್ರೆಯಲ್ಲಿ ತುಂಬಿದ ನೀರನ್ನು ಕಂಡರೆ ಹಾಗೂ ಸಂಪೂರ್ಣವಾಗಿ ತುಂಬಿದ ಹಾಲನ್ನು ಕಂಡರೆ ಇದು ಸಹ ಅದೃಷ್ಟವನ್ನು ತರುತ್ತದೆ ಇಂತಹ ಕೆಲವೊಂದು ಲಕ್ಷಣಗಳು ಕಂಡು ಬಂದರೆ ಮುಂದಿನ ದಿನಗಳಲ್ಲಿ ಉತ್ತಮವಾದ ಸಮಯ ಬರುತ್ತದೆ ಎಂದು ತಿಳಿಯಬಹುದು ಹಾಗೆಯೇ ಮನೆಯ ಮುಂದೆ ಆಕಸ್ಮಾತ ಆಗಿ ಬೆಕ್ಕು ಮರಿ ಹಾಕಿದರೆ ಅದೃಷ್ಟ ತರುತ್ತದೆ ಹಾಗೆಯೇ ಬೆಳಿಗ್ಗೆ ಎದ್ದು ಕೂಡಲೇ ಕೆಲವೊಂದು ಪಕ್ಷಿಗಳು ಕಣ್ಣಿಗೆ ಕಾಣಿಸಿಕೊಂಡರು ಸಹ ಅದೃಷ್ಟ ತರುತ್ತದೆ.

ನಮ್ಮಲ್ಲಿಯೇ ಏನಾದರೂ ಬದಲಾವಣೆ ಕಂಡು ಬಂದರೆ ಅಂದರೆ ಬೆಳಿಗ್ಗೆ ಎದ್ದ ತಕ್ಷಣ ಖುಷಿಯಾದ ಅನುಭವ ಕಂಡು ಬಂದರೆ ಮುಂದಿನ ದಿನಗಳಲ್ಲಿ ಅದೃಷ್ಟ ಒದಗಿ ಬರುತ್ತದೆ ಎನ್ನುವುದರ ಸಂಕೇತವಾಗಿದೆ ಹಾಗೆಯೇ ಕೆಲವರಿಗೆ ಎಳುತ್ತಿರುವಾಗ ಧನ ಪ್ರಾಪ್ತಿ ಆಗುವ ಅಥವಾ ಆಕಸ್ಮಿಕ ಧನ ಲಾಭ ಆಗುತ್ತದೆ ಇದು ಸಹ ತುಂಬಾ ಒಳ್ಳೆಯದು ಹೀಗೆ ಕೆಲವರಿಗೆ ಅದೃಷ್ಟ ಬರುವ ಮುನ್ನ ಈ ರೀತಿಯ ಸೂಚನೆಗಳು ಕಂಡು ಬರುತ್ತದೆ ಶಿವನಿಗೆ ಅರ್ಪಿಸಿದ ಶಿವನ ಪ್ರಸಾದವನ್ನು ಹಂಚುತ್ತಾರೆ ಇದನ್ನು ತಪ್ಪದೆ ಸ್ವೀಕರಿಸಬೇಕು ಹಾಗೂ ಯಾವಾಗಲೂ ಸಹ ನಿರಾಕರಿಸಬಾರದು ಹಾಗೆಯೇ ರಸ್ತೆಯಲ್ಲಿ ಹೋಗುವಾಗ ಆಕಸ್ಮಿಕವಾಗಿ ನಾಣ್ಯ ಸಿಕ್ಕರೆ ಅದು ಮಹಾಲಕ್ಷ್ಮಿ ದೇವಿಯ ಅನುಗ್ರಹ ಜೀವನದಲ್ಲಿ ಇರುತ್ತದೆ ಎನ್ನುವ ಸಂಕೇತವಾಗಿದೆ

ದಾರಿಯಲ್ಲಿ ದುಡ್ಡು ಸಿಕ್ಕರೆ ಅದೊಂದು ದೊಡ್ಡ ಅದೃಷ್ಟವಾಗಿದೆ ಆ ನಾಣ್ಯವನ್ನು ದೇವರ ಹುಂಡಿಗೆ ಹಾಕಬಾರದು ಮಹಾಲಕ್ಷ್ಮಿಯ ಬೇರೆ ಬೇರೆ ರೂಪದಲ್ಲಿ ಒಲಿಯುತ್ತಾಳೆ ರಸ್ತೆಯಲ್ಲಿ ನಾಣ್ಯ ಸಿಕ್ಕರೆ ಬದುಕಿನಲ್ಲಿ ಲಕ್ಷ್ಮೀ ದೇವಿ ಸಿಕ್ಕಳು ಎನ್ನುವ ಶುಭ ಸೂಚನೆಯಾಗಿದೆ ಹಾಗೆಯೇ ಹಿಂದೂಗಳಿಗೆ ಗೋಮಾತೆ ಎಂದರೆ ದೇವರ ಸಮಾನ ಹಾಗಾಗಿ ಗೋಮಾತೆಯ ಮನೆಯ ಬಾಗಿಲ ಬಳಿ ಬಂದರೆ ತುಂಬಾ ಅದೃಷ್ಟ ಒದಗುತ್ತದೆ.

ಎಂದಿಗೂ ಸಹ ಮನೆಗೆ ಬಂದ ಗೋವನ್ನು ವಾಪಸ್ಸು ಕಳುಹಿಸಬಾರದು ಅದಕ್ಕೆ ಇಷ್ಟವಾದ ಪದಾರ್ಥವನ್ನು ನೀಡಬೇಕು ಧಾನ್ಯವನ್ನು ಮತ್ತು ಬೆಲ್ಲವನ್ನು ನೀಡಬೇಕು ಇದರಿಂದ ಕೋಟಿ ದೇವರನ್ನು ತೃಪ್ತಿಗೊಳಿಸುವ ಪುಣ್ಯ ಲಭಿಸುತ್ತದೆ ಭೋಜನದ ಸಮಯದಲ್ಲಿ ಯಾರಾದರೂ ಕಷ್ಟ ಎಂದು ಬಂದರೆ ಅವರನ್ನು ನಿಂದನೆ ಮಾಡಬಾರದು ಹಾಗೆಯೇ ಬರಿ ಗೈಯಲ್ಲಿ ಕಳುಹಿಸುವ ಕಾರ್ಯವನ್ನು ಎಂದಿಗೂ ಮಾಡಬಾರದು ಕಷ್ಟದಲ್ಲಿ ಇರುವರಿಗೆ ಕೈಲಾದಷ್ಟು ಸಹಾಯವನ್ನು ಮಾಡಬೇಕು ಮನೆಗೆ ಭಿಕ್ಷುಕರು ಬಂದರೆ ಬರಿ ಗೈಯಲ್ಲಿ ಎಂದಿಗೂ ಕಳುಹಿಸಬಾರದು ಊಟ ಮಾಡುವ ಸಮಯದಲ್ಲಿ ಭಗವಂತನೇ ಸನ್ಯಾಸಿ ಭಿಕ್ಷುಕನ ರೂಪದಲ್ಲಿ ಸಹ ಬರುತ್ತಾನೆ ಎನ್ನುವ ನಂಬಿಕೆ ಇದೆ

ಈ ರೀತಿ ಮಾಡುವುದರಿಂದ ದೇವರು ಕಷ್ಟ ಕಾಲದಲ್ಲಿ ಜೊತೆಯಲ್ಲಿ ನಿಲ್ಲುತ್ತಾನೆ .ವಯಸ್ಸಾದವರನ್ನು ಹಾಗೂ ಹಿರಿಯರನ್ನು ನೋಡಿದಾಗ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡುವುದು ಪ್ರಾಚೀನ ಸಂಪ್ರದಾಯವಾಗಿದೆ ಇದು ಹಿರಿಯರಿಗೆ ನಾವು ನೀಡುವ ಗೌರವವಾಗಿದೆ ಪ್ರತಿದಿನ ತಂದೆ ತಾಯಿಯ ಆಶೀರ್ವಾದವನ್ನು ತಪ್ಪದೆ ತೆಗೆದುಕೊಳ್ಳಬೇಕು ಹೀಗೆ ನಮಗೆ ಯಾವಾಗ ಹೇಗೆ ಅದೃಷ್ಟ ಬಂದು ಒದಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯ ಆಗುವುದಿಲ್ಲ ಆದರೆ ಕೆಲವೊಂದು ಸೂಚನೆಗಳು ಅದೃಷ್ಟ ಬರುವ ಮುನ್ನ ತಿಳಿಸುತ್ತದೆ ಲಕ್ಷ್ಮೀ ದೇವಿಯ ಕೃಪೆ ಇದ್ದಾಗ ಎಂತಹ ಕಡು ಬಡವನು ಸಹ ಶ್ರೀಮಂತನಾಗುತ್ತಾನೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: