WhatsApp Group Join Now
Telegram Group Join Now

ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಕೆಲವು ನಿಯಮಗಳನ್ನು ಅನುಸರಿಸಬೇಕು. ಜೀವನದಲ್ಲಿ ಅನುಸರಿಸಬೇಕಾದ ಸರಳವಾದ ಸೂತ್ರಗಳನ್ನು ಈ ಲೇಖನದಲ್ಲಿ ನೋಡೋಣ ಯಾರೆ ಆಗಲಿ ತಮಗೆ ಆಗುವಷ್ಟು ಕೆಲಸ ಮಾಡಬೇಕು, ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳಬಾರದು. ವಯಸ್ಸಿಗೆ ತಕ್ಕಂತೆ ವ್ಯಾಯಾಮ ಮಾಡಬೇಕು. ರಾತ್ರಿ ವೇಳೆಯಲ್ಲಿ ಕರಿದ ಖಾರದ ಮತ್ತು ಕೊಬ್ಬು ಇರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು.

ಮನೆಯಲ್ಲಿ ಮಲಗುವ ಕೋಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಾಳಿ, ಬೆಳಕು ಬರುತ್ತಿರಬೇಕು. ತಂಪು ಪಾನೀಯಗಳ ಸೇವನೆಯಿಂದ ಶರೀರಕ್ಕೆ ಕ್ಯಾಲೋರಿ ದೊರೆಯುವುದಿಲ್ಲ ಆದರೆ ದೇಹದ ತೂಕ ಹೆಚ್ಚುತ್ತದೆ ಆದ್ದರಿಂದ ತಂಪು ಪಾನೀಯ ಆರೋಗ್ಯಕ್ಕೆ ಒಳ್ಳೆಯದಲ್ಲ ಅಲ್ಲದೆ ಆಹಾರ ಸೇವಿಸುವಾಗ ನಿರಾಳವಾಗಿರಬೇಕು.

ಆ-ಲ್ಕೊಹಾಲ್ ಕುಡಿಯುವುದನ್ನು ನಿಲ್ಲಿಸಬೇಕು ಇದು ನಮ್ಮ ಜೀರ್ಣಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಹುಳಿ ಪದಾರ್ಥಗಳನ್ನು ಹೆಚ್ಚು ಸೇವಿಸಬಾರದು. ಆಹಾರದಲ್ಲಿ ಹಸಿ ತರಕಾರಿ, ಹಣ್ಣಿನ ಸೇವನೆ ಅಗತ್ಯವಾಗಿದೆ, ಯಾವುದೆ ಆಹಾರವನ್ನು ಅತಿಯಾಗಿ ಸೇವಿಸಬಾರದು. ನಿದ್ರೆ ಬರುವ ಮಾತ್ರೆಗಳನ್ನು ಸೇವಿಸಬಾರದು ಅದು ಒಳ್ಳೆಯದಲ್ಲ ಇದರಿಂದ ಲಕ್ವಾ ಹೊಡೆಯುವ ಸಾಧ್ಯತೆ ಇದೆ, ಕೋಪ ಮಾಡಿಕೊಳ್ಳುವುದು ಒಳ್ಳೆಯದಲ್ಲ. ದಿನನಿತ್ಯ ಹಲ್ಲು, ನಾಲಿಗೆಯನ್ನು ಶುಭ್ರವಾಗಿಟ್ಟುಕೊಳ್ಳಬೇಕು.

ನೇರವಾಗಿ ಕುಳಿತುಕೊಳ್ಳಬೇಕು ನೇರವಾಗಿ ನಿಲ್ಲಬೇಕು ಬಾಗಿ ನಿಲ್ಲುವುದು, ಕುಳಿತುಕೊಳ್ಳುವುದು ಮಾಡಬಾರದು. ಪ್ರತಿದಿನ ಮಲವಿಸರ್ಜನೆ ಆಗುವಂತೆ ನೋಡಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಇರುವಂತೆ ನೋಡಿಕೊಳ್ಳಬೇಕು. ದಿನಕ್ಕೆ ಒಂದು ಬಾರಿ ಹೊರಗಡೆ ಗಾಳಿಯಲ್ಲಿ ಓಡಾಡಬೇಕು. ಗಂಧಕ, ಕರ್ಪೂರ, ತುಳಸಿ ಗಿಡ, ಧೂಪ, ಶ್ರೀ ಗಂಧ, ಬೇವಿನ ಕಡ್ಡಿಯಿಂದ ಮನೆಯಲ್ಲಿ ಹೊಗೆ ಹಾಕಿ ಗಾಳಿ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ಮನೆಯ ಸುತ್ತ ಗೋವಿನ ಸಗಣಿ ಹಾಕಿ ಸಾರಿಸಬೇಕು.

ವೈದ್ಯರ ಸಲಹೆ ಇಲ್ಲದೆ ಔಷಧಿಯನ್ನು ಸೇವಿಸಬಾರದು, ವಾರಕ್ಕೆ ಒಂದು ಬಾರಿ ಉಪವಾಸ ಮಾಡಬೇಕು. ದಿನಕ್ಕೆ ಹೆಚ್ಚು ಬಾರಿ ಚಹಾ ಕುಡಿಯಬಾರದು. ದಿನಕ್ಕೆ ಎರಡು ಬಾರಿ ಆಹಾರ ಸೇವನೆ ಮಾಡುವವನು, ಎರಡು ಸಾರಿ ಮಲವಿಸರ್ಜನೆ ಮಾಡುವವನು, ಅಲ್ಪ ಪ್ರಮಾಣದಲ್ಲಿ ಸ್ತ್ರೀ ಸಂಭೋಗ ಮಾಡುವವನು, ಆರು ಬಾರಿ ಮೂತ್ರ ವಿಸರ್ಜನೆ ಮಾಡುವವನು, ಸದಾ ಎಡಗಡೆ ಮಲಗುವವನು ಚಿಂತೆಯನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದವನು ದೀರ್ಘಾಯುಷಿ ಆಗಿರುತ್ತಾನೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಹಾಗೆಯೆ ನೀವು ಅನುಸರಿಸಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: