Hasanambe temple in Hassan: ಈ ದೇವಾಲಯದ ಬಾಗಿಲನ್ನು ವರ್ಷಕ್ಕೆ 12 ದಿನಗಳು ಮಾತ್ರ ತೆರೆಯಲಾಗುತ್ತದೆ. ಹಾಸನದ ಶಕ್ತಿ ದೇವತೆ ಹಾಸನಾಂಬೆ ದೇವಾಲಯದ ಹಲವು ರಹಸ್ಯವನ್ನು ಈ ಲೇಖನದ ಮೂಲಕ ತಿಳಿಯೋಣ.
ವರ್ಷಕ್ಕೊಂದು ಸಾರಿ ಮಾತ್ರ ದೇವಿ ದರ್ಶನ ಮಾಡಬೇಕಾಗುತ್ತದೆ ಹಿಗಂದಕೂಡಲೆ ಹಾಸನದ ಹಾಸನಾಂಬೆ ದೇವಿಯ ನೆನಪಾಗುತ್ತದೆ. ಹೌದು ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲನ್ನು ಹಾಕುವ ಮೊದಲು ದೀಪವನ್ನು ಹಚ್ಚಿ ಹೂವು ಹಾಗೂ ನೈವೇದ್ಯ ಅರ್ಪಿಸಿ ಬಾಗಿಲನ್ನು ಮುಚ್ಚಲಾಗುತ್ತದೆ ಮುಂದಿನ ವರ್ಷ ಬಾಗಿಲು ತೆಗೆಯುವ ಸಮಯದಲ್ಲಿ ಹಚ್ಚಿದ ದೀಪ ಹಾಗೆಯೆ ಉರಿಯುತ್ತಿರುತ್ತದೆ ಹಾಗೂ ಹೂವುಗಳು ಹಾಗೆಯೆ ಬಾಡುವುದಿಲ್ಲ ನೈವೇದ್ಯಕ್ಕೆ ಇಟ್ಟ ಅನ್ನ ಹಳಸಿರುವುದಿಲ್ಲ ಇದು ಈ ದೇವಸ್ಥಾನದ ಪವಾಡವಾಗಿದೆ. ದೇವಸ್ಥಾನದ ಬಾಗಿಲನ್ನು ತೆರೆದ ನಂತರ ಈ ಪ್ರದೇಶದಲ್ಲಿ ಯಾರ ಮನೆಯಲ್ಲೂ ಅಡುಗೆಗೆ ಒಗ್ಗರಣೆ ಹಾಕುವಂತಿಲ್ಲ.
ಹಾಸನಾಂಬೆ ದೇವಿಯ ದರ್ಶನ ಒಮ್ಮೆ ಮಾತ್ರ ಹೀಗಾಗಿ ಈ ದೇಗುಲ ಪ್ರಸಿದ್ದಿಯಾಗಿದೆ. ತನ್ನ ನಂಬಿ ಬಂದವರನ್ನು ಕೈ ಬಿಡದ ಹಾಸನಾಂಬೆ ದೇವಿಗೆ ಕೋಟಿ ಕೋಟಿ ಭಕ್ತರಿದ್ದಾರೆ. ಸಪ್ರಮಾತ್ರಿಕೆ ಎಂಬ ಹೆಸರಿನಿಂದಲೂ ಹಾಸನಾಂಬೆ ದೇವಿಯನ್ನು ಕರೆಯಲಾಗುತ್ತದೆ. ದೇಗುಲದ ಬಾಗಿಲು ತೆಗೆದ ಸಮಯದಲ್ಲಿ ದೇಶ ವಿದೇಶದಿಂದ ಭಕ್ತರು ಆಗಮಿಸುತ್ತಾರೆ.
ಈ ದೇಗುಲವನ್ನು 12 ನೆ ಶತಮಾನದಲ್ಲಿ ನಿರ್ಮಿಸಲಾಗಿತ್ತು ಎಂದು ಇತಿಹಾಸದಲ್ಲಿ ತಿಳಿಸಿಲಾಗಿದೆ. ಪುರಾಣದ ಪ್ರಕಾರ ಹಿಂದೆ ಅಂಧಕಾಸುರ ಎಂಬ ರಾಕ್ಷಸನು ಕಠಿಣ ತಪಸ್ಸಿನ ನಂತರ ಅಜೇಯನಾಗಲು ಬ್ರಹ್ಮನಿಂದ ವರವನ್ನು ಪಡೆಯುತ್ತಾನೆ. ರಾಕ್ಷಸನು ತನ್ನ ಶಕ್ತಿಯಿಂದ ಎಲ್ಲೆಡೆ ಹಾನಿಯನ್ನುಂಟು ಮಾಡುತ್ತಾನೆ.
ಶಿವನು ರಾಕ್ಷಸನನ್ನು ಕೊಲ್ಲಲು ಮುಂದಾದಾಗ ರಾಕ್ಷಸನ ದೇಹದ ಪ್ರತಿಯೊಂದು ಹನಿ ನೆಲಕ್ಕೆ ಬೀಳುತ್ತಿದ್ದಂತೆ ಅದರಿಂದ ರಾಕ್ಷಸರು ಹುಟ್ಟಿದರು ಶಿವನು ತನ್ನ ಶಕ್ತಿಯಿಂದ ಸಪ್ತಮಾತೃಕೆಯರ ಜೊತೆಗೆ ಯೋಗೆಶ್ವರಿದೇವಿಯನ್ನು ಸೃಷ್ಟಿಸುತ್ತಾನೆ ಅವರ ಮೂಲಕ ರಾಕ್ಷಸನನ್ನು ಸಂಹರಿಸುತ್ತಾನೆ. ಹಾಸನಾಂಬೆ ಕುಂಭದ ರೂಪದಲ್ಲಿ ಇದ್ದು ಕುಂಭಕ್ಕೆ ಹೆಣ್ಣಿನ ಮುಖವನ್ನು ಮಾಡಲಾಗಿದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ, ಹಾಸನಕ್ಕೆ ಹೋದರೆ ತಪ್ಪದೆ ಬಾಗಿಲು ತೆಗೆದ ಸಮಯದಲ್ಲಿ ಹಾಸನಾಂಬೆ ದೇವಿಯ ದರ್ಶನ ಮಾಡಿ.
ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513