ಸ್ನೇಹಿತರೆ, ಕನ್ನಡ ಕಿರುತೆರೆಯು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಅದ್ದೂರಿಯಾಗಿ ಐಷಾರಾಮಿ ಬಂಗಲೆಗಳಲ್ಲಿ ಪ್ರತಿನಿತ್ಯ ಹಲವು ಧಾರವಾಹಿಗಳ ಶೂಟಿಂಗ್ ನಡೆಸುತ್ತಿರುತ್ತಾರೆ. ಹೌದು ಗೆಳೆಯರೇ ಮೊದಲಿಗೆಲ್ಲಾ ಕೇವಲ ಹಿಂದಿ ಸೀರಿಯಲ್ ಗಳು ಮಾತ್ರ ಇಷ್ಟೊಂದು ಅದ್ದೂರಿತನದಿಂದ ಕೂಡಿರುತ್ತಿದ್ದವು. ಆದರೆ ಈಗ ನಮ್ಮ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ, ಹಿಟ್ಲರ್ ಕಲ್ಯಾಣ, ಶ್ರೀರಸ್ತು ಶುಭಮಸ್ತು, ಪುಟ್ಟಕ್ಕನ ಮಕ್ಕಳು ದಂತಹ ಧಾರವಾಹಿಗಳು ಕೂಡ ತನ್ನ ವೈಡೂರ್ಯತೆಗೆ ಹೆಸರುವಾಸಿಯಾಗಿದೆ.
ಹೀಗೆ ಪ್ರತಿದಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಜನರ ಮನಸ್ಸಿಗೆ ಹತ್ತಿರವಾಗಿರುವಂತಹ ಧಾರವಾಹಿಗಳಲ್ಲಿ ಹಿಟ್ಲರ್ ಕಲ್ಯಾಣ(Hitler kalyana) ಕೂಡ ಒಂದು. ಹೌದು ಗೆಳೆಯರೇ ನಟ ದಿಲೀಪ್ ರಾಜ್ ಅವರು ಎಜೆ ಪಾತ್ರದಲ್ಲಿ ಅಭಿನಯಿಸುತ್ತಾ ಧಾರಾವಾಹಿಗೆ ಗತ್ತು ಗಾಂಭೀರ್ಯವನ್ನು ತಂದಿದ್ದು, ಇವರ ಅಭಿನಯಕ್ಕೆ ಅದೆಷ್ಟೋ ಮಹಿಳಾ ಅಭಿಮಾನಿಗಳು ಮನಸೋತು ಹೋಗಿದ್ದಾರೆ. ಹಲವು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವಂತಹ ದಿಲೀಪ್ ರಾಜ್(Dilip Raj) ಅವರು 2005ರಲ್ಲಿ ಬಾಯ್ಫ್ರೆಂಡ್(Boyfriend) ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.
ಆದರೆ 2007ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ಹಾಗೂ ಪಾರ್ವತಿ ಮೆನನ್ ಅಭಿನಯದ ಮಿಲನ(Milana) ಸಿನಿಮಾ ಇವರಿಗೆ ಹೇಳಿಕೊಳ್ಳುವಂತಹ ಹೆಸರನ್ನು ತಂದು ಕೊಡುತ್ತದೆ. ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದರು ಇಂದಿಗೂ ಜನ ಗುರುತಿಸುವಂತಹ ಕ್ಯಾರೆಕ್ಟರ್ ಅವರದಾಗಿತ್ತು. ಆನಂತರ ಪೊಲೀಸ್ ಕ್ವಾಟ್ರಸ್, ಮತ್ತೆ ಬನ್ನಿ ಪ್ರೀತ್ಸೋಣ, ಸವಾಲು, ಬರ್ಫಿ, ಟೋನಿ, ಕ್ರೇಜಿ ಸ್ಟಾರ್, ಕಿಸ್ಮತ್, ಅಂಬಿ ನಿಂಗ್ ವಯಸ್ಸಾಯ್ತುದಂತಹ ಸಿನಿಮಾಗಳ ಮೂಲಕ ಹಿರಿತೆರೆ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಇದೀಗ 2021 ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರವಾಹಿಯ ಮೂಲಕ ಕಿರುತೆರೆಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಾ ಹೆಸರುವಾಸಿಯಾಗಿರುವಂತಹ ದಿಲೀಪ್ ರಾಜ್(Dilip Raj) ಅವರು ಶ್ರೀವಿದ್ಯಾ(Srividya) ಎಂಬುವವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫ್ಯಾಮಿಲಿ ಫೋಟೋಗಳನ್ನು ಹಂಚಿಕೊಳ್ಳುತ್ತ ಸಂತಸ ವ್ಯಕ್ತಪಡಿಸುತ್ತಿರುತ್ತಾರೆ.
ಇನ್ನು ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ ಕನಸಿನ ಹೊಸ ಮನೆಯೊಂದನ್ನು ಕಟ್ಟಿಸಿ ಅದಕ್ಕೆ ತಮ್ಮ ಹಾಗೂ ತಮ್ಮ ಹೆಂಡತಿಯ ಹೆಸರಾದ ರಾಜ್ ಶ್ರೀ(RAJSRI) ಎಂಬುದನ್ನು ಇಟ್ಟು ಅದ್ದೂರಿಯಾಗಿ ಗೃಹಪ್ರವೇಶ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಕೆಲ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಾ ನೆಟ್ಟಿಗರನ್ನು ಆಕರ್ಷಿಸುತ್ತಿದೆ.