WhatsApp Group Join Now
Telegram Group Join Now

Actress Amulya Jagadish: ಸ್ನೇಹಿತರೆ, ಯಾವುದೇ ಹಬ್ಬ ಹರಿದಿನಗಳಾದರೂ ಬಹಳ ಅರ್ಥಪೂರ್ಣವಾಗಿ ಆಚರಿಸುವಂತಹ ನಮ್ಮ ಸ್ಯಾಂಡಲ್ವುಡ್ ಸಿನಿ ತಾರೆಯರು ನೆನ್ನೆಯ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು(Krishna Janmashtami) ಅಷ್ಟೇ ಸುಂದರವಾಗಿ ಆಚರಿಸಿ ಅದರ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಂತಸಾಗಿತ್ತಪಡಿಸಿದರು.

ಅದರಂತೆ ಬಾಲ ನಟಿಯಿಂದ ನಾಯಕ ನಟಿಯವರೆಗೂ ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ಅಪ್ರತಿಮ ಕಲೆ ಅಭಿನಯ ಹಾಗೂ ಸೌಂದರ್ಯದ ಮೂಲಕ ಸಿನಿ ಪ್ರೇಕ್ಷಕರ ಮನೆಮಗಳಾಗಿದಂತಹ ನಟಿ ಅಮೂಲ್ಯ(Amulya) ತಮ್ಮ ಎರಡು ಮುದ್ದು ಮಕ್ಕಳೊಂದಿಗೆ ಹಬ್ಬ ಆಚರಿಸಿದ್ದಾರೆ. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಕೆಲವು ವರ್ಷಗಳ ಹಿಂದಷ್ಟೇ ನಟಿ ಅಮೂಲ್ಯ ಜಗದೀಶ್ ಆರ್ ಚಂದ್ರ(Jagadeesh R Chandra) ಎಂಬಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಿನಿ ಬದುಕಿನಿಂದ ದೂರಾದರು.

ಹಾಗೆಯೇ ತಮ್ಮ ಎರಡು ಮುದ್ದಾದ ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿರುವಂತಹ ಅಮೂಲ್ಯ ನೆನ್ನೆಯ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಮಕ್ಕಳೊಂದಿಗೆ ಬಹಳ ವಿಶೇಷವಾಗಿ ಆಚರಿಸುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಹೌದು ಗೆಳೆಯರೇ ತಮ್ಮ ಇಬ್ಬರೂ ಮಕ್ಕಳಾದ ಅಥರ್ವ ಮತ್ತು ಆದವ್ (Atharva- Adhav) ಕೃಷ್ಣನ ವೇಷ ಹಾಕಿಸಿ ತಾವು ಕೂಡ ಯಶೋದೆಯಂತೆ ಅಲಂಕೃತರಾಗಿ ಫೋಟೋಗೆ ಫೋಸ್ ನೀಡಿದ್ದಾರೆ. ನೀಲಿ ಬಣ್ಣದ ಸೀರೆಯಲ್ಲಿ ಅಮೂಲ್ಯ(Amulya) ಕಂಗೊಳಿಸಿದರೆ ಮಕ್ಕಳಿಗೆ ಕಚ್ಚೆ ಪಂಚೆ ಹಾಕಿಸಿ ಕೃಷ್ಣನ(Krishna) ರೀತಿ ಒಡವೆ ಆವರಣ ಗಳನ್ನೆಲ್ಲ ಹಾಕಿ ಬೃಂದಾವನದಂತೆ ಬ್ಯಾಗ್ರೌಂಡ್ ಹಾಕಿಸಿ ಹಸುಗಳ ಮಧ್ಯೆ ಕುಳಿತು ಅಮೂಲ್ಯ(Amulya)

ತಮ್ಮ ಎರಡು ಮಕ್ಕಳನ್ನು ಮಡಿಲ ಮೇಲೆ ಕೂರಿಸಿಕೊಂಡು ಮಕ್ಕಳಿಗೆ ಮುತ್ತಿಡುತ್ತಾ ಫೋಟೋದಲ್ಲಿ ಬಹಳ ಆಕರ್ಷಣೀಯವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು ಅಭಿಮಾನಿಗಳ ವತಿಯಿಂದ ಮೆಚ್ಚುಗೆಗಳ ಸಾಗರವೆ ಹರಿದು ಬಂದಿದೆ.

ಇದನ್ನೂ ಓದಿ: Kannada Actress Rajani: ಅಮೃತವರ್ಷಿಣಿ ಧಾರವಾಹಿಯ ನಾಯಕನಟಿ ರಜಿನಿ ಟ್ರೆಂಡಿಂಗ್ ಡ್ಯಾನ್ಸ್ ವಿಡಿಯೋ!

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: