WhatsApp Group Join Now
Telegram Group Join Now

Actor Darshan ಸ್ನೇಹಿತರೆ, ಅಣ್ಣ ತಂಗಿಯರ ಮಧುರವಾದ ಬಾಂಧವ್ಯದ ಅರ್ಥವನ್ನು ಸಾರುವಂತಹ ರಕ್ಷಾ ಬಂಧನ(Raksha Bandhan) ಹಬ್ಬವನ್ನು ಇಂದು ದೇಶದ ಮೂಲೆ ಮೂಲೆಯಲ್ಲೂ ರಾಖಿ ಕಟ್ಟಿ ಆಚರಿಸಲಾಗುತ್ತಿದೆ. ಈ ಒಂದು ವಿಶೇಷ ಹಬ್ಬಕ್ಕೆ ಸ್ಯಾಂಡಲ್ ಸಾಕಷ್ಟು ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದು, ಅದರಲ್ಲೂ ಹೆಣ್ಣು ಮಕ್ಕಳಿನ ಅಣ್ಣ ಎಂದು ಕರೆಯಲ್ಪಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ತಮ್ಮ ವಿಶೇಷ ಮಹಿಳಾ ಅಭಿಮಾನಿಗಳು ಹಾಗೂ ಸ್ಟಾರ್ ನಟಿಯರೊಂದಿಗೆ ರಾಖಿ ಕಟ್ಟಿಸಿಕೊಂಡು ಹಬ್ಬ ಆಚರಿಸಿರುವುದು ವಿಶೇಷವಾಗಿ ಕಂಡುಬಂದಿದೆ.

ಹೌದು ಗೆಳೆಯರೇ ಇಂದು ರಕ್ಷಾಬಂಧನ ಎಂದು ತಿಳಿದೊಡನೆ ಅದೆಷ್ಟೋ ಡಿ ಬಾಸ್ ದರ್ಶನ್(Darshan) ಅವರ ಪ್ರೀತಿಯ ತಂಗಿಯರು ನೆನ್ನೆಯೇ ಎಲ್ಲವನ್ನು ಸಿದ್ಧಪಡಿಸಿಕೊಂಡು ದರ್ಶನ್ ಅವರ ಮನೆ ಮುಂದೆ ಅವರಿಗೆ ರಾಖಿ ಕಟ್ಟುವ ಸಲುವಾಗಿ ಕ್ಯೂ ನಿಂತಿದ್ದರು. ಹೀಗೆ ರಾಜ್ಯದ ಮೂಲೆ ಮೂಲೆಯಿಂದ ಬಂದಂತಹ ಅಭಿಮಾನಿಗಳಿಗೆ ಬೇಸರ ಮಾಡದೆ ದರ್ಶನವರು ತಮ್ಮ ಮನೆಗೆ ಕರೆಸಿ, ಪ್ರೀತಿಯಿಂದ ಅವರ ಕೈಯಾರ ರಾಖಿ ಕಟ್ಟಿಸಿಕೊಂಡು,

ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ, ಸದ್ಯ ಈ ಫೋಟೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ಲಾಗುತ್ತಿದ್ದು ದರ್ಶನವರ ಮೊಣಕೈವರೆಗೂ ಇರುವಂತಹ ರಾಖಿಗಳನ್ನು ನೋಡಿ ಸ್ಯಾಂಡಲ್ವುಡ್ನ ಅದೆಷ್ಟೋ ಮಂದಿ ದಂಗಾಗಿದ್ದಾರೆ. ಹೌದು ಗೆಳೆಯರೇ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಅತಿ ಹೆಚ್ಚಿನ ಅಭಿಮಾನಿ ಬಳಗವಿರುವಂತಹ ಏಕೈಕ ನಟ ಎಂದರೆ ಅದು ಡಿ ಬಾಸ್(DBoss).

ದರ್ಶನ್(Darshan) ಅವರಿಗೆ ಕೇವಲ ಪುರುಷ ವರ್ಗದಲ್ಲಿ ಮಾತ್ರ ಫ್ಯಾನ್ಸ್ ಗಳಿಲ್ಲ, ಅತಿ ಹೆಚ್ಚಿನ ಮಹಿಳಾ ಅಭಿಮಾನಿಗಳನ್ನು (Female fans) ಕೂಡ ದರ್ಶನ್ ಸಂಪಾದಿಸಿಕೊಂಡಿದ್ದು ಇದಕ್ಕೆ ಪ್ರತಿ ವರ್ಷವೂ ಮರೆಯದೆ ಅವರ ಮನೆ ಮುಂದೆ ಬಂದು ಹಬ್ಬ ಆಚರಿಸಿರುವಂತಹ ತಂಗಿಯರೇ(Sisters) ಸಾಕ್ಷಿ.

ಹೀಗೆ ನಾಡಿನ ಮೂಲೆ ಮೂಲೆಯಿಂದ ಬಂದು ತಮ್ಮೊಂದಿಗೆ ರಕ್ಷಾಬಂಧನ ಆಚರಿಸಿದಂತಹ ತಂಗಿಯರಿಗಾಗಿ ದರ್ಶನ್(Darshan) ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಪ್ರೀತಿಯಿಂದ ಬಂದು ಹರಸಿದ ಹಾಗೂ ಎಲ್ಲ ನನ್ನ ಅಕ್ಕತಂಗಿಯರಿಗೆ ರಕ್ಷಾ ಬಂಧನ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ ಮಕ್ಕಳೊಂದಿಗೆ ದುಬೈಗೆ ಹಾರಿರುವ ನಟ ಜೈ ಜಗದೀಶ್ ಅವರ ಕುಟುಂಬದ ವೈರಲ್ ಫೋಟೋ!

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: