WhatsApp Group Join Now
Telegram Group Join Now

sumalatha ambarish birth day celebration ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಆತ್ಮೀಯ ಗೆಳೆಯರು ಎಂದರೆ ನಮ್ಮೆಲ್ಲರಿಗೂ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರ ಸ್ನೇಹ ಬಾಂಧವ್ಯ ನೆನಪಿಗೆ ಬಂದುಬಿಡುತ್ತದೆ. ಹೌದು ಗೆಳೆಯರೇ ನಾಗರಹಾವು (Nagarahavu) ಸಿನಿಮಾದ ಮೂಲಕ ಒಟ್ಟಿಗೆ ತಮ್ಮ ಸಿನಿ ಪಯಣವನ್ನು ಪ್ರಾರಂಭ ಮಾಡಿದಂತಹ ಅಂಬಿ(Ambi) ಹಾಗೂ ವಿಷ್ಣು ದಾದಾ(Vishnu Dada) ತಮ್ಮ ನಡುವೆ ಸೃಷ್ಟಿಯಾಗಿದ್ದಂತಹ ಅದ್ಭುತವಾದ ಸ್ನೇಹ ಬಾಂಧವ್ಯ, ಕುಚಿಕು ಗೆಳೆತನವನ್ನು ಕೊನೆಯ ದಿನಗಳವರೆಗೂ ಕಾಪಾಡಿಕೊಂಡು ಬಂದವರು.

ಸ್ನೇಹ ಎಂದರೆ ಅದು ಅಂಬಿ ಹಾಗೂ ವಿಷ್ಣು ರೀತಿ ಇರಬೇಕು ಎನ್ನುತ್ತಿದ್ದಂತಹ ಕಾಲದಲ್ಲಿ ದರ್ಶನ್ ಹಾಗೂ ಕಿಚ್ಚ ಸುದೀಪ್ ಕೂಡ ಒಬ್ಬರ ಸಿನಿಮಾಗಳಿಗೆ ಮತ್ತೊಬ್ಬರು ಸಪೋರ್ಟ್ ಮಾಡಿಕೊಂಡು ಕನ್ನಡದ ಮತ್ತೋರ್ವ ಕುಚುಕು ಗೆಳೆಯರ ಪಟ್ಟಿಗೆ ಸೇರ್ಪಡೆಯಾಗುತ್ತಾರೆ. ಹೀಗೆ ಒಬ್ಬರ ಸಿನಿಮಾವನ್ನು ಮತ್ತೊಬ್ಬರು ಪ್ರೋತ್ಸಾಹಿಸುತ್ತ ಒಬ್ಬರ ಚಿತ್ರಕ್ಕೆ ಮತ್ತೊಬ್ಬ ನಟ ಕಂಠ ದಾನ ಮಾಡುತ್ತಾ ಒಟ್ಟಿಗೆ ಎಲ್ಲಾ ವೇದಿಕೆಯ ಮೇಲೂ ಬಹಳ ಅನ್ಯೋನ್ಯವಾಗಿದ್ದಂತಹ ಇವರು ಕಳೆದ ಆರು ವರ್ಷಗಳ ಹಿಂದೆ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರು ಕಿತ್ತಾಡಿಕೊಂಡು ಮಾತು ಬಿಟ್ಟಿದ್ದರು.

ಆರು ವರ್ಷಗಳಿಂದ ಅದೆಷ್ಟೇ ವೇದಿಕೆಯನ್ನು ಸೃಷ್ಟಿಸಿದರು ಎಲ್ಲಿಯೂ ದರ್ಶನ್ ಆಗಲಿ ಸುದೀಪ್ ಆಗಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮನಸ್ಸಿನ ಮಾಡಲಿಲ್ಲ. ದರ್ಶನ ಅವರ ಬಳಿ ಸುದೀಪ್ ಅವರ ಕುರಿತು, ಹಾಗೆ ಸುದೀಪ್ ಅವರ ಬಳಿ ದರ್ಶನ್ ಅವರ ಕುರಿತು ಕೇಳಿದಾಗಲಿಲ್ಲ ಇಬ್ಬರು ನಟರು ಮೌನ ವಹಿಸುತ್ತಿದ್ದರು. ಹೀಗಿರುವಾಗ ಇದೆಲ್ಲದಕ್ಕೂ ತೆರೆ ಬಿದ್ದಿರುವ ಹಾಗೆ ಮಂಡ್ಯ ಸಂಸದ ಸುಮಲತಾ ಅಂಬರೀಶ್ ಅವರ ಜನ್ಮದಿನದ ಅಂಗವಾಗಿ ದರ್ಶನ್ ಹಾಗೂ ಸುದೀಪ್ ಒಟ್ಟಾಗಿ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಎಲ್ಲಿಲ್ಲದಂತಹ ಸಂತಸವನ್ನು ಸೃಷ್ಟಿಸಿದೆ.

ಹೌದು ಸ್ನೇಹಿತರೆ ಸುಮಲತಾ ಅಂಬರೀಶ್(Sumalatha Ambareesh) ಅವರ ಹುಟ್ಟು ಹಬ್ಬದ ಸಮಾರಂಭಕ್ಕೆ ಸಿನಿಮ ರಂಗದ ಸಾಕಷ್ಟು ಗಣ್ಯರು ಹಾಗೂ ಆತ್ಮೀಯರನ್ನು ಆಹ್ವಾನಿಸಲಾಗಿತ್ತು. ಆ ಸಂದರ್ಭದಲ್ಲಿ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾದಂತಹ ಸುದೀಪ್ ಹಾಗೂ ದರ್ಶನ್(Sudeep & Darshan) ಅವರನ್ನು ಕೂರಿಸಿಕೊಂಡು ಸುಮಲತಾ ಅಂಬರೀಶ್(Sumalatha Ambareesh) ಮತ್ತು ರಾಕ್ ಲೈನ್ ವೆಂಕಟೇಶ್(Rockline Venkatesh) ಇಬ್ಬರು ಸಂಧಾನ ಮಾಡುವ ಪ್ರಯತ್ನ ಮಾಡಿರುವ ಮಾಹಿತಿ ತಿಳಿದು ಬಂದಿದೆ. ಸದ್ಯ ಈ ಕುರಿತಾದ ಸಾಕಷ್ಟು ವಿಡಿಯೋ ಹಾಗು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಇದೆಲ್ಲವೂ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: