Sanju Basayya: ಮದುವೆಯಾದ ನಂತರ ಹೆಂಡತಿಯೊಂದಿಗೆ ಸೇರಿ ಮೊದಲ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಸಂಜು ಬಸಯ್ಯ!

0

ಸ್ನೇಹಿತರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಕಾಮಿಡಿ ಕಿಲಾಡಿಗಳು ಎಂಬ ಹಾಸ್ಯ ಕಾರ್ಯಕ್ರಮದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಯಗೊಂಡು ಆನಂತರ ಸಾಕಷ್ಟು ಸಿನಿಮಾ ಹಾಗೂ ಶಾರ್ಟ್ ಮೂವಿಗಳಲ್ಲಿ ಅವಕಾಶ ಪಡೆದು ಇಂದು ಕನ್ನಡದ ಬಹು ಬೇಡಿಕೆಯ ಹಾಸ್ಯ ನಟರಾಗಿ ಹೊರಹೊಮ್ಮಿರುವಂತಹ ಸಂಜು ಬಸಯ್ಯ(Sanju Basayya)ನವರು ಕಳೆದ ಕೆಲವು ತಿಂಗಳುಗಳ ಹಿಂದೆ ತಮ್ಮ ಬಹುಕಾಲದ ಗೆಳತಿ ಪಲ್ಲವಿ ಬಳ್ಳಾರಿ (Pallavi Ballari)

ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಗೊಳಗಾದರು. ಹೌದು ಗೆಳೆಯರೇ ತಮಗಿಂತ ಉದ್ದನೆಯ ಹುಡುಗಿಯನ್ನು ಮದುವೆಯಾದಕ್ಕಾಗಿ ಸಾಕಷ್ಟು ಜನರು ಇವರಿಬ್ಬರ ಕುರಿತು ನಕಾರಾತ್ಮಕವಾದ ಟ್ರೋಲ್ ಮಾಡಿದರೆ, ಪ್ರೀತಿಗೆ ಬಾಹ್ಯಾಕರ ಮುಖ್ಯವಲ್ಲ ಎಂಬುದನ್ನು ತೋರಿಸಿಕೊಟ್ಟ ಪಲ್ಲವಿ ಬಳ್ಳಾರಿ (Pallavi Ballari) ಅವರ ಕುರಿತು ಸಾಕಷ್ಟು ಮೆಚ್ಚುಗೆಗಳು ಕೂಡ ವ್ಯಕ್ತವಾಗಿದ್ದವು.

ಹೌದು ಗೆಳೆಯರೆ ಜೂನ್ ಒಂಬತ್ತನೇ ತಾರೀಕಿನಂದು ಸದ್ದಿಲ್ಲದೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಂತಹ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ದಂಪತಿಗಳು ಜೂನ್ 31ನೇ ತಾರೀಕಿನಂದು ನಟಿ ರಚಿತರಾಮ್, ಜಗ್ಗೇಶ್, ಯೋಗರಾಜ್ ಭಟ್ರು, ಅನುಶ್ರೀ ಸೇರಿದಂತೆ ಮುಂತಾದ ಸ್ಟಾರ್ ಕಲಾವಿದರನ್ನು ಮದುವೆಯ ಆರತಕ್ಷತೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿ ಬೆಳಗಾವಿಯ ಪ್ರತಿಷ್ಠಿತ ಕಲ್ಯಾಣ ಮಂಟಪ ಒಂದರಲ್ಲಿ ರಿಸೆಪ್ಶನ್(Reception) ಮಾಡಿಕೊಂಡರು.

ಹೀಗೆ ತಮ್ಮ ಮದುವೆಯ ಸಾಲು ಸಾಲು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತ ಗಮನ ಸೆಳೆಯುತ್ತಿದ್ದಂತಹ ಈ ಮುದ್ದಾದ ದಂಪತಿಗಳು ಇದೀಗ ಒಟ್ಟಾಗಿ ಸೇರಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ್ದಾರೆ. ಹೌದು ಗೆಳೆಯರೇ ಸಂಜು ಮತ್ತು ಪಲ್ಲವಿ ಬಳ್ಳಾರಿ (Sanju & Pallavi Ballari) ದಂಪತಿಗಳಿಗೆ ಮದುವೆಯಾದ ನಂತರ ಬಂದಂತಹ ಮೊದಲ ಹಬ್ಬ ಇದಾಗಿದ್ದು,

ಮನೆಯಲ್ಲಿಗೆ ಸರಳವಾಗಿ ಲಕ್ಷ್ಮಿ ದೇವಿಯನ್ನು ಪೂರಿಸಿ ಅಲಂಕಾರ ಮಾಡಿ ದೇವತೆಗೆ ಪೂಜೆ ಸಲ್ಲಿಸಿದ್ದಾರೆ. ಅದೇ ಆ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ(Varamahalakshmi Festival) ಶುಭಾಶಯಗಳು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!