ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಶರಣ್ ಮತ್ತು ಕುಟುಂಬ! ಇಲ್ಲಿವೆ ಫೋಟೋಸ್

0

actor sharan Home ಸ್ನೇಹಿತರೆ ಕನ್ನಡ ಸಿನಿಮಾ ರಂಗಕ್ಕೆ ಹಾಸ್ಯ ನಟನಾಗಿ ಎಂಟ್ರಿಕೊಟ್ಟು ಇಂದು ತಮ್ಮ ಅಪೂರ್ವ ಅಭಿನಯದ ಮೂಲಕ ನಾಯಕ ನಟನ ಸ್ಥಾನವನ್ನು ಗಿಟ್ಟಿಸಿಕೊಂಡು ಯಶಸ್ವಿ ಸಿನಿಮಾಗಳ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ಶರಣ್ (Sharan) ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಇದ್ದು ಆಗಾಗ ತಮ್ಮ ಕುಟುಂಬದ ಫೋಟೋಗಳನ್ನು ಹಾಗೂ ಮುಂದಿನ ಚಿತ್ರದ ಅಪ್ಡೇಟ್ಗಳನ್ನು ನೀಡುತ್ತಾ ಅಭಿಮಾನಿಗಳೊಡನೆ ಒಡನಾಟದಲ್ಲಿದ್ದಾರೆ.

ಹೀಗಿರುವಾಗ ಸದ್ಯ ಶರಣ್ಣವರ ಮನೆಯಲ್ಲಿ ಆಚರಿಸಲಾಗುವಂತಹ ಅದ್ದೂರಿ ವರಮಹಾಲಕ್ಷ್ಮಿ ಹಬ್ಬದ(Varamahalakshmi festival) ಕೆಲ ಫೋಟೋಗಳು ಭಾರಿ ವೈರಲಾಗುತ್ತಿದ್ದು, ಸರಳವಾಗಿ ಹೆಂಡತಿ ಮಗಳೊಂದಿಗೆ ಸೇರಿ ಶರಣ್ ವರಮಹಾಲಕ್ಷ್ಮಿಯ ವ್ರತವನ್ನು ಮಾಡಿದ್ದು ದೇವರ ಮನೆಯಲ್ಲೇ ಸಾಕ್ಷಾತ್ ಲಕ್ಷ್ಮಿ ದೇವಿಯನ್ನು ಪ್ರತಿಷ್ಠ ಮಂತ್ರಘೋಷಣೆಗಳ ನಡುವೆ ಪೂಜಾ ಕೈಂಕಾರ್ಯಗಳನ್ನು ನೆರವೇರಿಸಿ ಅನಂತರ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಹೌದು ಗೆಳೆಯರೇ ಸ್ಟಾರ್ ಸೆಲೆಬ್ರಿಟಿಯಾದರೂ ಕೂಡ ಬಹಳ ಸರಳವಾಗಿ ನೆಲದ ಮೇಲೆ ಕಾಲನ್ನು ಮಡಚಿ ಕುಳಿತು ದೇವರ ಪೂಜೆ ಮಾಡುತ್ತಿರುವ ಕೆಲವು ಫೋಟೋಗಳನ್ನು ಶರಣ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೆಂಡತಿ ಪಲ್ಲವಿ ಹಾಗೂ ಮಗಳೊಂದಿಗೆ ಹಬ್ಬ ಆಚರಿಸಿರುವ ಶರಣ್ ಅವರ ಈ ಫೋಟೋಗಳಿಗೆ ನಟ್ಟಿಗರು ವ್ಯಾಪಕ ಪ್ರತಿಕ್ರಿಯೆ ನೀಡುತ್ತಿದ್ದು, ಇವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

2012ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟಂತಹ ಶರಣ್ ಅವರು 10 ವರ್ಷಗಳಲ್ಲಿ ಬಹು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿ 80ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದ್ದಾರೆ. ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಹಿನ್ನೆಲೆ ಗಾಯಕನಾಗಿಯು ಗುರುತಿಸಿಕೊಂಡಿದ್ದಂತಹ ಶರಣ್ ಅವರು ರಾಜ ರಾಜೇಂದ್ರ, ವಜ್ರಕಾಯ, ಬುಲೆಟ್ ಬಸ್ಯಾ, ದನ ಕಾಯೋನು(Dana kayonu) ನಂತಹ ಸಿನಿಮಾಗಳ ಹಾಡಿಗೆ ಕಂಡ ದಾನ ಮಾಡಿದ್ದಾರೆ.

ಹೀಗೆ ಕಳೆದ ಕೆಲ ತಿಂಗಳುಗಳ ಹಿಂದೆ ಗುರು ಶಿಷ್ಯರು ಸಿನಿಮಾದ ಮೂಲಕ ತೆರೆಯ ಮೇಲೆ ಮಿಂಚಿದ್ದ ಶರಣ್(Sharan) ಅವರು ಇದೀಗ ಚೂ ಮಂಥರ್(Choo mantra) ಎಂಬ ಹಾಸ್ಯ ಥ್ರಿಲ್ಲರ್ ಸಿನಿಮಾದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಡಿಸೆಂಬರ್ ತಿಂಗಳಿನಲ್ಲಿ ತೆರೆಗಪ್ಪಳಿಸಲಿದ್ದಾರೆ.

Leave A Reply

Your email address will not be published.

error: Content is protected !!