Avinash Malavika latest photos in social media: ಸ್ನೇಹಿತರೆ, ಪೋಷಕ ಪಾತ್ರಗಳ ಮುಖೇನವಾಗಿ ಹೆಚ್ಚು ಜನಪ್ರಿಯತೆ ಪಡೆದಿರುವಂತಹ ಅವಿನಾಶ್ ಹಾಗೂ ಮಾಳವಿಕಾ ಡಾ. ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ರಂತಹ ನಟರ ಕಾಲದಿಂದಲೂ ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ಅಭಿನಯಿಸುತ್ತ ಇಂದಿಗೂ ಬಹು ಬೇಡಿಕೆಯ ಪೋಷಕ ನಟ ನಟಿಯರಾಗಿ ಗುರುಜಿಸಿಕೊಂಡಿದ್ದಾರೆ.
ಆಗಿನ ಬ್ಲಾಕ್ ಅಂಡ್ ವೈಟ್ (Black and white ) ಸಿನಿಮಾಗಳಿಂದ ಹಿಡಿದು ಈಗಿನ ಕಲರ್ ಫುಲ್ ಚಿತ್ರಗಳವರೆಗೂ ತಮ್ಮ ಯಶಸ್ವಿ ನಟನೆಯ ಮೂಲಕ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿರುವ ಸ್ಯಾಂಡಲ್ವುಡ್ನ ಮುದ್ದಾದ ಜೋಡಿಗಳಾದ ಅವಿನಾಶ್ ಮತ್ತು ಮಾಳವಿಕ ಸೋಶಿಯಲ್ ಮೀಡಿಯಾದಲ್ಲಿಯೂ ಸಕ್ಕತ್ ಆಕ್ಟಿವ್ ಇದ್ದು, ಆಗಾಗ ತಮ್ಮ ಸಿನಿ ಬದುಕಿನ ಜರ್ನಿ, ತಮ್ಮ ವೈಯಕ್ತಿಕ ವಿಚಾರ ಹಾಗೂ ಕ್ಯೂಟೆಸ್ಟ್ ಫೋಟೋಗಳನ್ನು
ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ನಂತಹ ಖಾತೆಗಳಲ್ಲಿ ಅಭಿಮಾನಿಗಳೊಡನೆ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಮಾಳವಿಕಾ ಮತ್ತು ಅವಿನಾಶ್ ಅವರು ಒಟ್ಟಿಗೆ ಕ್ಲಿಕಿಸಿಕೊಂಡಿರುವಂತಹ ಕೆಲ ಫೋಟೋಗಳು ಇನ್ಸ್ಟಾಗ್ರಾಮ್ ನಲ್ಲಿ ಬಾರಿ ವೈರಲ್ ಆಗುತ್ತಿದ್ದು, ಸ್ಯಾಂಡಲ್ವುಡ್ನ ಆದರ್ಶ ದಂಪತಿಗಳನ್ನು ಕಂಡಂತಹ ಅಭಿಮಾನಿಗಳು ಲೈಕ್ಸ್ ಹಾಗೂ ಕಾಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಹೌದು ಗೆಳೆಯರೇ 1998ರಲ್ಲಿ ಪ್ರಸಾರವಾದಂತಹ ಮಾಯಾಮೃಗ(Mayamruga) ಎಂಬ ಕನ್ನಡದ ಧಾರವಾಹಿಯ ಮೂಲಕ ಒಂದಾದಂತಹ ಮಾಳವಿಕಾ ಮತ್ತು ಅವಿನಾಶ್ ಕಿರುತೆರೆ ಲೋಕದಲ್ಲಿ ಬಹು ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿಕೊಳ್ಳುತ್ತಾರೆ. ಹೀಗೆ ತೆರೆಯ ಮೇಲೆ ಬಹುದೊಡ್ಡ ಜನಪ್ರಿಯತೆ ಪಡೆದುಕೊಂಡಿದಂತಹ ಅವಿನಾಶ್ ಮತ್ತು ಮಾಳವಿಕಾ ಜೋಡಿ ನಿಜ ಜೀವನದಲ್ಲಿಯೂ ಒಟ್ಟಾಗಿ ಇರಬೇಕೆಂಬ ನಿರ್ಧಾರ ಮಾಡಿ 2001ರಲ್ಲಿ
ಮನೆಯವರೆಲ್ಲರ ಒಪ್ಪಿಗೆ ಪಡೆದು ಗುರು ಹಿರಿಯರ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಮದುವೆ ಸಂಭ್ರಮಕ್ಕೆ ಆಗಿನ ಕನ್ನಡ ಸಿನಿಮಾ ರಂಗದ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದರು. ಹೀಗೆ ಬರೋಬ್ಬರಿ 22 ವರ್ಷಗಳ ಕಾಲ ಸುಖ ಸಾಂಸಾರಿಕ ಜೀವನವನ್ನು ನಡೆಸಿಕೊಂಡು ಬಂದಿರುವ ಮಾಳವಿಕಾ ಮತ್ತು ಅವಿನಾಶ್ (Malavika & Avinash) ಜೋಡಿಗಳು
ಇಂದಿಗೂ ಅದೆಷ್ಟೋ ಚಿತ್ರಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿರುತ್ತಾರೆ. ಈ ದಂಪತಿಗಳಿಗೆ ಗಾಲವ್ (Galav) ಎಂಬ ಮಗನಿದ್ದು ಆತನ ಆರೈಕೆಯಲ್ಲಿ ಪೋಷಕರು ತಮ್ಮ ಸುಖ ಜೀವನವನ್ನು ಕಳೆಯುತ್ತಿದ್ದಾರೆ. ಇದನ್ನೂ ಓದಿ ವಿಜಯ್ ರಾಘವೇಂದ್ರ ಮತ್ತು ಸ್ಪಂದನ ಕುಟುಂಬದ ಸಿಹಿ ನೆನಪುಗಳು!