WhatsApp Group Join Now
Telegram Group Join Now

Anchor Anushree Raj B Shetty : ತಮ್ಮ ಚಿಟಪಟ ಮಾತಿನ ಮೂಲಕವೇ ಕನ್ನಡ ಕಿರುತೆರೆಯಲ್ಲಿ ತಮ್ಮ ಅಮೋಘ ಮಾತುಗಾರಿಕೆ ಅಭಿನಯ ಹಾಗೂ ತುಂಟತನದ ಮೂಲಕ ಮನೆ ಮಾತಾಗಿರುವ ಆಂಕರ್ ಅನುಶ್ರೀ(Anushree) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ ಹೇಳಿ? ಹಲವಾರು ಸೀಸನ್ಗಳಿಂದ ಸರಿಗಮಪ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಜಿ ಕುಟುಂಬ ಅವಾರ್ಡ್ಸ್ ಸೇರಿದಂತೆ ಮುಂತಾದ ಕಾರ್ಯಕ್ರಮಗಳ ನಿರೂಪಣೆ ಜೊತೆಗೆ.

ಯಶಸ್ವಿ ನಟರ ಸಿನಿಮಾದ ಆಡಿಯೋ ಲಾಂಚ್ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಕನ್ನಡಿಗರ ಮನೆಮಗಳಾಗಿ ಹೋಗಿರುವ ಅನು ಸದ್ಯ ಕನ್ನಡ ಚಿತ್ರ ರಂಗದ ಹೆವಿ ಟ್ಯಾಲೆಂಟೆಡ್ ರಾಜಾ ಬಿ ಶೆಟ್ಟಿ (Raj B Shetty) ಅವರೊಡನೆ ಕ್ಲಿಕ್ಕಿಸಿಕೊಂಡಿರುವಂತಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿಯ ವೈರಲಾಗುತ್ತಿದೆ. ಮಂಗಳೂರಿನ ಕಲಾವಿದರಿಬ್ಬರು ಒಟ್ಟಿಗೆ ಒಂದೇ ಪ್ರೇಮ್ ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದು.

Anchor Anushree Raj B Shetty Photos

ಫೋಟೋದಲ್ಲಿ ಖುಷಿ ಖುಷಿಯಿಂದ ಅನುಶ್ರೀ ಅವರಿಗೆ ರಾಜ್ ಬಿ ಶೆಟ್ಟಿ ಹಗ್ ನೀಡಿದ್ದಾರೆ. ಹೌದು ಸ್ನೇಹಿತರೆ, ರಾಜ್ ಬಿ ಶೆಟ್ಟಿ (Raj B Shetty) ಸದ್ಯ ತಮ್ಮ ಮುಂದಿನ ಚಿತ್ರ ಟೋಬಿ(Toby) ಕೆಲಸದಲ್ಲಿ ತೊಡಗಿಕೊಂಡಿದ್ದು, ದಿನೇ ದಿನೇ ವಿಭಿನ್ನವಾದ ಪೋಸ್ಟರ್ (poster) ಹಾಗೂ ಮೋಶನ್ ಟೀಸರ್ಗಳ(motion teaser) ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟಾಗಿಸುತ್ತಿದ್ದಾರೆ ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಂತಹ ಅನುಶ್ರೀ ಅವರು ಟೋಬಿ(Toby) ಸಿನಿಮಾ ತಂಡಕ್ಕೆ ವಿಶ್ ಮಾಡಿದರು.

ಆ ವೇಳೆ ತಮ್ಮ ಹಾಗೂ ರಾಜ್ ಬಿ ಶೆಟ್ಟಿ (Raj B Shetty) (Raj B Shetty)ಶೆಟ್ಟಿಯವರ ನಡುವೆ ಇರುವಂತಹ ಬಾಂಧವ್ಯದ ಮೆಲುಕು ಹಾಕಿದರು. ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಆರಂಭಿಕ ದಿನದಿಂದ ಹಿಡಿದು ಇಂದಿನವರೆಗೂ ಅಷ್ಟೇ ಒಳ್ಳೆಯ ಸ್ನೇಹಿತರಾಗಿರುವ ಅನು ಮತಿ ರಾಜ ಬಿ ಶೆಟ್ಟಿ ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಕನ್ನಡ ಚಿತ್ರರಂಗದ ಆತ್ಮೀಯ ಗೆಳೆಯರಾಗಿದ್ದಾರೆ.

ಇವರಿಬ್ಬರ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದ್ದು, ಅನುಶ್ರೀ ಕೂಡ ಟೋಬಿ(Toby) ಸಿನಿಮಾದಲ್ಲಿ ಅಭಿನಯಿಸಬೇಕಿತ್ತು ಎಂದು ತಮ್ಮ ಅಭಿಪ್ರಾಯವನ್ನು ನೆಟ್ಟಿಗರು(netizens) ಹೊರಹಾಕಿದ್ದಾರೆ. ಸಾಕಷ್ಟು ನಟಿಯರ ಆಡಿಷನ್ನು ನಡೆಸಿದ ಟೋಬಿ(Toby) ಸಿನಿಮಾ ತಂಡ ಕೊನೆಗೆ ಸಿಂಗರ್ ಚೈತ್ರ ಜೆ ಆಚಾರ್(Chaitra J Achar) ಅವರನ್ನು ಸಿನಿಮಾದ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಈಗಾಗಲೇ ಪೋಸ್ಟರ್ ಮೂಲಕ ಸದ್ದು ಮಾಡುತ್ತಿರುವ ಟೋಬಿ(Toby) ಸಿನಿಮಾ ತೆರೆಗೆ ಬಂದ ನಂತರ ಜನರ ಮನಸ್ಸನ್ನು ಗೆಲ್ಲಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: