WhatsApp Group Join Now
Telegram Group Join Now

Golden Star Ganesh : ಸ್ನೇಹಿತರೆ ಕಾಮಿಡಿ ಟೈಮ್ಸ್ ಕಾರ್ಯಕ್ರಮದ ಮೂಲಕ ಹೆಸರುವಾಸಿಯಾಗಿದ್ದಂತಹ ಗಣೇಶ್(Ganesh) ಅವರು 2006ರಲ್ಲಿ ತೆರೆಕಂಡ ಯೋಗರಾಜ್ ಭಟ್(Yogaraj bhat) ಅವರ ನಿರ್ದೇಶನದಲ್ಲಿ ಮೂಡಿ ಬಂದ ಮುಂಗಾರು ಮಳೆ(Mungaru Male) ಸಿನಿಮಾದಿಂದ ಹೆಸರುವಾಸಿಯಾದರು. ಹೌದು ಸ್ನೇಹಿತರೆ ಪೂಜಾ ಗಾಂಧಿ(Pooja Gandhi) ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕಾಂಬಿನೇಷನಲ್ಲಿ ಮೂಡಿಬಂದಂತಹ.

ಈ ಪ್ರೇಮ ಕಥೆಯು ಬರೋಬ್ಬರಿ 870 ದಿನಗಳ ಕಾಲ ಕರ್ನಾಟಕದ ಎಲ್ಲಾ ಥಿಯೇಟರ್(Theatre)ಗಳಲ್ಲಿ ಮಲ್ಟಿಪ್ಲೆಕ್ಸ್ (Multiplex) ಗಳಲ್ಲಿ ನಿರಂತರ ಪ್ರದರ್ಶನ ಕಾಣುವ ಮೂಲಕ ಬರೋಬ್ಬರಿ 75 ಕೋಟಿಗೂ ಅಧಿಕ ಹಣವನ್ನು ತನ್ನ ಗಲ್ಲಪೆಟ್ಟಿಗೆಗೆ ಸಂಗ್ರಹ ಮಾಡಿಕೊಳ್ಳುತ್ತದೆ. ಹೀಗೆ ಈ ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರಾದಂತಹ ಗೋಲ್ಡನ್ ಸ್ಟಾರ್ ಗಣೇಶ್(Ganesh) ಮತ್ತೆಂದು ಹಿಂದಿರುಗಿ ನೋಡಿಯೇ ಇಲ್ಲ.

ಹೌದು ಗೆಳೆಯರೇ ಅನಂತರ ಅವರ ಅಭಿನಯದಲ್ಲಿ ಮೂಡಿ ಬಂದ ಗಾಳಿಪಟ, ರೋಮಿಯೋ, ಶ್ರಾವಣಿ ಸುಬ್ರಮಣ್ಯ, ಚೆಲುವಿನ ಚಿತ್ತಾರ, ಜೂಮ್, ಚಮಕ್, ಆರೆಂಜ್ ಹೀಗೆ ಮುಂತಾದ ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟರಾಗಿ ಹೊರಹೊಮ್ಮಿದ್ದಾರೆ. ಕೇವಲ ನಟನೆಯಲ್ಲಿ ಮಾತ್ರವಲ್ಲದೆ ನಿರೂಪಣೆಯಲ್ಲಿಯೂ ತಮ್ಮ ಚಾತುರ್ಯತೆಯನ್ನು ತೋರುವ ಮುಖಾಂತರ.

ಸೂಪರ್ ಮಿನಿಟ್(Super Minute), ಫ್ಯಾಮಿಲಿ ಟೈಮ್(Family time) ಹೀಗೆ ಮುಂತಾದ ಕಾರ್ಯಕ್ರಮಗಳ ನಿರೂಪಣೆಯಲ್ಲಿ ತೊಡಗಿಕೊಂಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅವರು ಫೆಬ್ರವರಿ 11ನೇ ತಾರೀಕು 2008 ರಂದು ರಾತ್ರೋರಾತ್ರಿ ಶಿಲ್ಪಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದರು.

ಹೌದು ಗೆಳೆಯರೇ ಕೆಲ ವೈಯಕ್ತಿಕ ಕಾರಣಗಳಿಂದಾಗಿ ಗಣೇಶ್(Ganesh) ಯಾರಿಗೂ ತಿಳಿಯದಂತೆ ಮದುವೆಯಾಗಬೇಕಾದಂತ ಪ್ರಸಂಗ ಎದುರಾಗುತ್ತದೆ. ಆದರೆ ಇದರ ಅಸಲಿ ಮಾಹಿತಿ ತಿಳಿಯದಂತಹ ಕೆಲ ಮಾಧ್ಯಮಗಳಲ್ಲಿ ಇಲ್ಲಸಲ್ಲದ ವದಂತಿಗಳನ್ನೆಲ್ಲಾ ಹಬ್ಬಿಸಲಾಯಿತು. ಎಷ್ಟೇ ಕಠಿಣ ಪ್ರಸಂಗಗಳು ಎದುರಾದರೂ ಒಬ್ಬರನ್ನೊಬ್ಬರು ಬಿಟ್ಟುಕೊಡದೆ ಬರೋಬ್ಬರಿ 15 ವರ್ಷಗಳ ಕಾಲ ಒಟ್ಟಿಗೆ ಸಂಸಾರಿಕ ಜೀವನ ನಡೆಸುತ್ತಾ ಬಂದಿರುವ.

ಗಣೇಶ್ ಹಾಗೂ ಶಿಲ್ಪ ದಂಪತಿಗೆ ಚರಿತ್ರಿಯ ಮತ್ತು ವಿಹಾನ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದು, ಅವರು ಕೂಡ ತಮ್ಮ ತಂದೆಯಂತೆ ಸಿನಿಮಾ ಇಂಡಸ್ಟ್ರಿಗೆ ಬರಲು ಸಜ್ಜಾಗುತ್ತಿದ್ದಾರೆ.‌ ಇನ್ನು ಕಳೆದ ಕೆಲವು ದಿನಗಳ ಹಿಂದೆ ಗಣೇಶ್ ತಮ್ಮ 43ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಆ ಸಂದರ್ಭದಲ್ಲಿ ಗಣೇಶ್(Ganesh) ಅವರ ಸಾಕು ಕುಟುಂಬದ ಫೋಟೋ ಗಳೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗುತ್ತಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: