WhatsApp Group Join Now
Telegram Group Join Now

Sudeep Puneeth Daughters : ಪ್ರೀತಿ ಹಾಗು ಸ್ನೇಹ ಸಂಬಂಧಕ್ಕೆ ನಮ್ಮ ಕನ್ನಡ ಸಿನಿಮಾ ರಂಗದಲ್ಲಿರುವಂತಹ ಬೆಲೆ ಗೌರವ ಬೇರೆ ಯಾವ ಸಿನಿ ಇಂಡಸ್ಟ್ರಿಯಲ್ಲಿಯು ಕಾಣಲು ಸಾಧ್ಯವಿಲ್ಲ. ಡಾಕ್ಟರ್ ವಿಷ್ಣುವರ್ಧನ್ ಹಾಗೂ ಅಂಬರೀಶ್(Vishnuvardhan- Ambarish) ಅವರ ಕುಚಿಕು ಗೆಳೆತನದಿಂದ ಹಿಡಿದು ಇಂದಿನ ಯುವ ನಟರ ಅದ್ಭುತ ಬಾಂಧವ್ಯವದವರೆಗೂ ಸ್ನೇಹ ಎಂಬ ಕೊಂಡಿ ಬೆಸೆದುಕೊಂಡು ಬರುತ್ತಲೇ ಇದೆ.

ಚಿಕ್ಕಂದಿನಿಂದಲೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಆಡಿ ಬೆಳೆದಂತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಯಾರೊಂದಿಗೂ ಸಣ್ಣ ಕಿರಿಕಿರಿಯನ್ನು ಮಾಡಿಕೊಳ್ಳದೆ ಅಜಾತ ಶತ್ರುವಿನಂತೆ ಬದುಕಿದವರು. ಈ ಕಾರಣದಿಂದಾಗಿ ಅವರನ್ನು ಕಂಡರೆ ಇಂದಿಗೂ ಅಪಾರ ಅಭಿಮಾನಿಗಳಿಗೆ ಎಲ್ಲಿಲ್ಲದ ಅಭಿಮಾನ ಗೌರವ.

ಇಂದು ಅಪ್ಪು ಬೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಅವರ ಕುರಿತು ಒಂದಲ್ಲ ಒಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸುದ್ದಿಗೊಳಗಾಗುತ್ತಲೇ ಇರುತ್ತದೆ. ತಮ್ಮ ಅದ್ಭುತ ವ್ಯಕ್ತಿತ್ವದ ಮೂಲಕ ಮತ್ತೆ ಮತ್ತೆ ನೆನಪಾಗುವ ಅಪ್ಪು ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಸುದೀಪ್(Sudeep) ಮುಂತಾದ ಸ್ಟಾರ್ ಸೆಲೆಬ್ರಿಟಿಗಳೊಂದಿಗೆ ಉತ್ತಮವಾದ ಸ್ನೇಹ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು.

ಅದರಲ್ಲೂ ಪುನಿತ್ ರಾಜಕುಮಾರ್(Puneeth Rajkumar) ಅವರಿಗೆ ಕಿಚ್ಚನನ್ನು ಕಂಡರೆ ಎಲ್ಲಿಲ್ಲದಂತಹ ಪ್ರೀತಿ ಅಭಿಮಾನ. ಹೌದು ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರದು ಹಲವು ವರ್ಷಗಳ ಹಿಂದಿನ ಸ್ನೇಹ. ಬಾಲ್ಯದಿಂದಲೂ ಒಬ್ಬರೊಟ್ಟಿಗೆ ಒಬ್ಬರು ಆಡಿ ಬೆಳೆದಂತಹ ನಟರುವರು.

ಇವರ ಚೈಲ್ಡ್ಹುಡ್(childhood) ಫೋಟೋಗಳೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಇಂದಿಗೂ ಅಪರೂಪದ ಗಳಿಗೆಯನ್ನು ನೆನಪಿಸುತ್ತವೆ. ದೊಡ್ಡವರಾದ ಮೇಲು ಕೂಡ ಒಬ್ಬರ ಸಿನಿಮಾಗಳಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಒಬ್ಬರನ್ನು ಮತ್ತೊಬ್ಬರು ಗೌರವಿಸುತ್ತಿದ್ದ ಗೆಳೆತನ ಎಂದರೆ ತಪ್ಪಾಗಲಿಕ್ಕಿಲ್ಲ. ಇದೀಗ ಪುನೀತ್ ರಾಜಕುಮಾರ್ ಹಾಗೂ ಕಿಚ್ಚನ ಮಕ್ಕಳು ಕೂಡ ಅಪ್ಪಂದಿರ ದಾರಿಯನ್ನ ಹಿಡಿಯುತ್ತಿದ್ದು, ಸಾನ್ವಿ ಹಾಗೂ ದೃತಿ ಬೆಸ್ಟ್ ಫ್ರೆಂಡ್ಸ್(best friends) ಎಂಬ ಮಾಹಿತಿ ತಿಳಿದು ಬಂದಿದೆ.

ಹೌದು ಸ್ನೇಹಿತರೆ ಸ್ಟಾರ್ ಕಿಡ್ಸ್ಗಳು (star kids) ಏನೇ ಮಾಡಿದರು ಅದು ಸಾಮಾಜಿಕ ಜಾಲತಾಣದ ತುಂಬೆಲ್ಲ ಬಾರಿ ವೈರಲ್ ಆಗುತ್ತವೆ. ಇದೀಗ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ(Sanvi) ಹಾಗೂ ಅಪ್ಪು ಪುತ್ರಿ ದೃತಿ(druthi)ಯೊಟ್ಟಿಗೆ ನಿಂತು ಕ್ಲಿಕಿಸಿಕೊಂಡಿರುವಂತಹ ಫೋಟೋ ಭಾರಿ ವೈರಲ್ ಆಗುತ್ತಿದ್ದು, ಅಪ್ಪಂದಿರಂತೆ ಮಕ್ಕಳು ಸಹ ಅದೇ ಬಾಂಡ್ ಬೆಳೆಸಿಕೊಂಡಿರುವುದು ಸದ್ಯ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿದೆ. ಪುನೀತ್ ರಾಜಕುಮಾರ್(Puneeth Rajkumar) ಅವರ ಪುತ್ರಿ ದೃತಿ ಪುನೀತ್ ರಾಜಕುಮಾರ್ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಇತ್ತ ಕಿಚ್ಚನ ಮಗಳು ಸಾನ್ವಿ ಗಾಯಕಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಪಾದರಪಣೆ ಮಾಡಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: