Sudeep Wife And Darshan Wife : ಸ್ನೇಹಿತರೆ ಇತರೆ ಭಾಷೆಯ ಸಿನಿಮಾ ರಂಗಕ್ಕೆ ಹೋಲಿಸಿದರೆ ನಮ್ಮ ಕನ್ನಡ ಸಿನಿಮಾರಂಗದಲ್ಲಿ ಪ್ರೀತಿ ಹಾಗೂ ಸ್ನೇಹ ಎಂಬ ಮಧುರ ಬಾಂಧವ್ಯಕ್ಕೆ ಹೆಚ್ಚಿನ ಬೆಲೆ ಇದೆ ಎಂದರೆ ತಪ್ಪಾಗಲಿಕ್ಕಿಲ್ಲ. ಡಾಕ್ಟರ್ ವಿಷ್ಣುವರ್ಧನ್ ಹಾಗೂ ಅಂಬರೀಶ್(Dr.Vishnuvardhan And Ambarish) ಅವರ ಕುಚಿಕು ಗೆಳೆತನದಿಂದ ಹಿಡಿದು ಸುದೀಪ್ ಹಾಗೂ ದರ್ಶನ್(Sudeep-Darshan) ಅವರ ದೋಸ್ತಿಯವರೆಗೂ ಸ್ನೇಹ ಬಾಂಧವ್ಯವೆಂಬುದು ಬಹಳ ಗಟ್ಟಿಯಾಗಿ ಉಳಿದಿದೆ.
ಫ್ರೆಂಡ್ಶಿಪ್ ಎಂಬುದು ಕೇವಲ ನಟರಿಗೆ ಮಾತ್ರ ಸೀಮಿತವಾಗದೆ ಸ್ಟಾರ್ ನಟಿಯರ ಮಧ್ಯೆಯು ಈ ರೀತಿಯ ಮಧುರ ನೆಂಟನ್ನು ಕಾಣಬಹುದು. ಅಲ್ಲದೆ ಸಾಮಾಜಿಕ ಜಾಲತಾಣ(social media)ಗಳು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದ ಹಾಗೆ ಸೆಲೆಬ್ರಿಟಿಗಳ ಬದುಕಿನ ಕೆಲ ಅಪರೂಪದ ಫೋಟೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತದೆ.
ಅದರಂತೆ ಈಗ ಪ್ರಿಯ ಸುದೀಪ್ ಹಾಗೂ ವಿಜಯಲಕ್ಷ್ಮಿ ದರ್ಶನ್(Priya Sudeep-Vijayalakshmi Darshan) ಅವರ ಹಳೆಯ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ, ಹೌದು ಗೆಳೆಯರೇ ಅದೊಂದು ಕಾಲದಲ್ಲಿ ಕೈ ಕೈ ಹಿಡಿದು ವೇದಿಕೆಯ ಮೇಲೆ ಸ್ಟೆಪ್ ಹಾಕುತ್ತಿದ್ದ ದರ್ಶನ್ ಹಾಗೂ ಸುದೀಪ್ ಅವರ ಮಧ್ಯೆ ಅದೆಂತ ಬಾಂಧವ್ಯವಿತ್ತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ.
ಒಬ್ಬರ ಸಿನಿಮಾಗೆ ಮತ್ತೊಬ್ಬರು ಸಪೋರ್ಟ್(support) ಮಾಡುತ್ತಾ, ಕೆಸಿಸಿ ಕ್ರಿಕೆಟ್ ಆಡುವಾಗಲೂ ಒಬ್ಬರನ್ನು ಎತ್ತಿ ಮತ್ತೊಬ್ಬರು ಮುದ್ದಾಡಿದಂತಹ ಫೋಟೋಗಳೆಲ್ಲವೂ ಇಂದಿಗೂ ಅಭಿಮಾನಿಗಳ ಕಣ್ಣು ಕಟ್ಟಿದಂತಿದೆ. ಆದರೆ ಕಳೆದ ಕೆಲವು ವರ್ಷಗಳ ಹಿಂದೆ ಈ ಜೋಡಿಯ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದು, ಮಾತನಾಡುವುದನ್ನು ನಿಲ್ಲಿಸಿದ್ದಾರೆ.
ಹೌದು ಗೆಳೆಯರೇ ಮಾರ್ಚ್ 5 ನೇ ತಾರೀಕು 2017ರಂದು ಸುದೀಪ್(Sudeep) ಸಂದರ್ಶನ ಒಂದ್ರಲ್ಲಿ ಮಾತನಾಡುವಾಗ ದರ್ಶನ್ ಅವರ ಮೆಜೆಸ್ಟಿಕ್ ಸಿನಿಮಾದ ಹೆಸರನ್ನು ಸೂಚಿಸಿದ್ದು, ನಾನೇ ಎಂಬ ಹೇಳಿಕೆ ನೀಡಿದರು. ಇದು ದರ್ಶನ್ ಅವರಿಗೆ ಇಷ್ಟವಾಗದೆ ನನ್ನ ಮೆಜೆಸ್ಟಿಕ್(Majestic) ಸಿನಿಮಾದ ಹೆಸರನ್ನು ಯಾವ ನಟರು ಸೂಚಿಸಲಿಲ್ಲ, ಅವಕಾಶ ನನನ್ನು ಹುಡುಕಿಕೊಂಡು ಬಂದಿದ್ದು. ಇನ್ನು ಮುಂದೆ ನಾನು ಮತ್ತು ಸುದೀಪ್(Sudeep) ಅವರು ಸ್ನೇಹಿತರಲ್ಲ ಕನ್ನಡ ಸಿನಿಮಾ ರಂಗದ ನಟರು ಮಾತ್ರ.
ಈ ಕುರಿತು ಇನ್ನು ಯಾವುದೇ ಊಹಾಪೋಹಗಳು ಬೇಡ, ಇದು ಇಲ್ಲಿಗೆ ಮುಗಿತು ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು. ಆದರೆ ಇವರ ಪತ್ನಿಯರಾದ ವಿಜಯಲಕ್ಷ್ಮಿ ಹಾಗೂ ಪ್ರಿಯ ಸುದೀಪ್ ಇಂದಿಗೂ ಅದೇ ಬಾಂಧವ್ಯವನ್ನು ಉಳಿಸಿಕೊಂಡು ಬಂದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇವರಿಬ್ಬರ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗುತ್ತಿದ್ದು ಕನ್ನಡಿಗರ ಅತ್ತಿಗೆಯರನ್ನು ಒಟ್ಟಾಗಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.