ಮೆದುಳು ಮತ್ತು ಸ್ನಾಯುಗಳಿಗೆ ಸರಿಯಾದ ಪ್ರಮಾಣದಲ್ಲಿ ಆಕ್ಸಿಜನ್ ದೊರಕಿದರೆ ದೇಹದ ಕಾರ್ಯವು ಸರಿಯಾಗಿ ನಡೆಯುತ್ತದೆ. ಆಕ್ಸಿಜನ್ ಕೊರತೆಯಿಂದ ದೇಹದ ಕಾರ್ಯವು ನಿಧಾನಿಸಿದರೆ ಬೇರೆ ಕಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಕೆಲವೊಂದು ಆಹಾರ ಪದಾರ್ಥಗಳಲ್ಲಿ ಆಕ್ಸಿಜನ್ ಪ್ರಮಾಣ ಹೆಚ್ಚಿದ್ದು ದೇಹಕ್ಕೆ ಆಕ್ಸಿಜನ್ ಪೂರೈಸುತ್ತದೆ ಅದು ಯಾವ ಆಹಾರದಲ್ಲಿ ಇರುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಪಾಲಕ್ ಸೊಪ್ಪುಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣದ ಅಂಶ ಹೊಂದಿದ್ದು ಇದು ಆಕ್ಸಿಜನ್ ನ್ನು ಬೇರೆ ಬೇರೆ ದೇಹದ ಭಾಗಗಳಿಗೆ ಸಾಗಿಸುತ್ತದೆ. ಇದರಿಂದ ಮೆದುಳು ಹಾಗೂ ಸ್ನಾಯುಗಳಿಗೆ ಸರಿಯಾದ ಪ್ರಮಾಣದ ಆಕ್ಸಿಜನ್ ದೊರಕುತ್ತದೆ ಹಾಗೂ ದೇಹದ ಸ್ನಾಯುಗಳು ಸಮತೋಲನದಲ್ಲಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಬ್ರೋಕೊಲ್ಲಿ ಎಂಬ ಹಸಿರು ತರಕಾರಿಯಲ್ಲಿ ಹೇರಳವಾದ ಪೋಷಕಾಂಶಗಳು, ಆಂಟಿ ಆಕ್ಸಿಡೆಂಟ್ಸಗಳು ಹಾಗೂ ಖನಿಜಗಳು ಹೊಂದಿದ್ದು ಇದರಲ್ಲಿ ಸಾಕಷ್ಟು ಔಷಧಿ ಗುಣಗಳನ್ನು ಹೊಂದಿದೆ, ಇದನ್ನು ಸೇವಿಸುವುದರಿಂದ ದೇಹದಲ್ಲಿ ಆಕ್ಸಿಜನ್ ಮೆಟಬೋಲಿಸಮ್ ಹೆಚ್ಚಿಸುತ್ತದೆ. ಅವಕಾಡೋಸ್ ವಿದೇಶಿ ಮೂಲದ ಹಣ್ಣಾಗಿದ್ದು ಇದರಲ್ಲಿ ಜೀವಸತ್ವಗಳು, ಖನಿಜಗಳು ಹಾಗೂ ದೇಹದ ಎಲ್ಲಾ ಭಾಗಗಳಿಗೆ ಆಕ್ಸಿಜನ್ ಪೂರೈಸುತ್ತದೆ ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹೆಚ್ಚಿನ ನೀರಿನ ಅಂಶ ಇದ್ದು ಮೆದುಳಿಗೆ ಸಾಕಾಗುವಷ್ಟು ಆಕ್ಸಿಜನ್ ಪೂರೈಕೆಗೆ ಸಹಾಯ ಮಾಡುತ್ತದೆ. ಗೆಣಸು ದೇಹಕ್ಕೆ ಆಗುವ ಹಲವಾರು ಹಾನಿಯನ್ನು ತಡೆಯುವಲ್ಲಿ ಸಹಾಯ ಮಾಡುತ್ತವೆ. ಇದರಲ್ಲಿ ಪೊಟ್ಯಾಷಿಯಮ್ , ಮೇಗ್ನಿಷಿಯಮ್, ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೊಂದಿದ್ದು ದೇಹದ ಜೀವಕೋಶಗಳಿಗೆ ಆಕ್ಸಿಜನ್ ಪೂರೈಸುತ್ತದೆ.
ಕಲ್ಲಗಂಡಿ ಹಣ್ಣಿನಲ್ಲಿ ಬೇರೆ ಹಣ್ಣುಗಳಲ್ಲಿ ಇರುವಷ್ಟು ಪೋಷಕಾಂಶ ಇರದಿದ್ದರೂ ಇದರಲ್ಲಿ ಲೈಕೋಪೀನ್ ಎಂಬ ಅಂಶವಿದ್ದು ದೇಹದ ಜೀವಕೋಶಗಳಿಗೆ ಆಕ್ಸಿಜನ್ ಪೂರೈಸಲು ಸಹಾಯ ಮಾಡುತ್ತದೆ. ಇದರಲ್ಲಿ ಬೇಟಾ ಕೆರೊಟಿನ್ ಎಂಬ ಅಂಶ ಹೇರಳವಾಗಿದೆ ದೇಹದ ಪ್ರತಿಯೊಂದು ಭಾಗಕ್ಕೂ ಆಕ್ಸಿಜನ್ ಪೂರೈಕೆ ಮಾಡುತ್ತದೆ. ಇದರಲ್ಲಿ ಹೆಚ್ಚು ನೀರಿನ ಅಂಶ ಇದ್ದು ಬೇಸಿಗೆಯಲ್ಲಿ ತಿನ್ನುವುದು ತುಂಬಾ ಪ್ರಯೋಜನಕಾರಿಯಾಗಿದೆ. ಮಾಂಸದಲ್ಲಿ ಹೆಚ್ಚು ಕಬ್ಬಿಣದ ಅಂಶವಿದೆ ಹಾಗೂ ಪ್ರೋಟಿನ್ ಗೆ ಇದು ಮೂಲವಾಗಿದೆ. ಆಕ್ಸಿಜನ್ ಪೂರೈಕೆಗೆ ಕಬ್ಬಿಣದ ಅಂಶವು ಅತೀ ಮುಖ್ಯ ಪಾತ್ರ ವಹಿಸುತ್ತದೆ. ಮಾಂಸ ಸೇವಿಸುವುದರಿಂದ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ದೇಹಕ್ಕೆ ಆಕ್ಸಿಜನ್ ಪೂರೈಕೆ ಮಾಡುವ ಪ್ರಮುಖ ಹಣ್ಣೆಂದರೆ ಅನಾನಸ್ ಇದರಲ್ಲಿ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್ ಅಂಶವು ಹೇರಳವಾಗಿದ್ದು ದೇಹದ ಜೀವಕೋಶಗಳಲ್ಲಿ ಆಕ್ಸಿಜನ್ ಕೊರತೆಯನ್ನು ನೀಗಿಸುವ ಶಕ್ತಿಯನ್ನು ಹೊಂದಿದೆ . ಸೀಫುಡ್ ಗಳಲ್ಲಿ ಹೆಚ್ಚು ಕಬ್ಬಿಣದ ಅಂಶ ಹೊಂದಿರುತ್ತದೆ ಇದು ಜೀವಕೋಶ, ಸ್ನಾಯುಗಳಿಗೆ ಹಾಗೂ ಮೆದುಳಿಗೆ ಆಕ್ಸಿಜನ್ ಸರಿಯಾದ ಪ್ರಮಾಣದಲ್ಲಿ ಪೂರೈಸುತ್ತದೆ. ಬೇರಿ ಹಣ್ಣು ಅಥವ ಬ್ಲೂ ಬೇರಿ ಎಂದು ಕರೆಯುವ ಈ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹೊಂದಿರುತ್ತದೆ. ಇದು ದೇಹದಲ್ಲಿ ಆಕ್ಸಿಜನ್ ಪೂರೈಸುತ್ತದೆ. ನಿಂಬೆ ಹಣ್ಣುಗಳಲ್ಲಿ ನಕಾರಾತ್ಮಕ ಆಯಾನುಗಳು ಹೊಂದಿದ್ದು ನಿಂಬೆ ರಸವನ್ನು ದಿನದಲ್ಲಿ ಒಂದು ಬಾರಿ ಸೇವಿಸುವುದರಿಂದ ದೇಹದ ಜೀವಕೋಶಗಳಿಗೆ ಆಕ್ಸಿಜನ್ ಪೂರೈಕೆ ಮಾಡುತ್ತದೆ.
ದೇಹವು ಆಕ್ಸಿಜನ್ ಪಡೆದು ಜೀವಕೋಶ, ಸ್ನಾಯುಗಳು, ಮೆದುಳು ತನ್ನ ಕೆಲಸವನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸುತ್ತದೆ. ಒಂದುವೇಳೆ ಆಕ್ಸಿಜನ್ ಕೊರತೆ ಉಂಟಾದರೆ ಕೆಲಸವನ್ನು ಮಾಡಲು ಶಕ್ತಿಯನ್ನು ಉತ್ಪಾದಿಸುವುದು ಕುಂಠಿತಗೊಳ್ಳುತ್ತದೆ. ಇದರಿಂದ ಮೆದುಳಿಗೆ ಕೆಲವೊಂದು ಬಾರಿ ತೊಂದರೆಯುಂಟಾಗುತ್ತದೆ. ಹಾಗೂ ಕೆಲವೊಂದು ಖಾಯಿಲೆಗಳು ಬರುವ ಸಾದ್ಯತೆ ಹೆಚ್ಚಾಗಿರುತ್ತದೆ. ಅದರಿಂದ ಆಕ್ಸಿಜನ್ ಹೆಚ್ಚು ಪ್ರಮಾಣದಲ್ಲಿ ದೇಹಕ್ಕೆ ಪೂರೈಸುವ ಆಹಾರವನ್ನು ಸೇವಿಸಬೇಕು.