ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹಿಮೊಗ್ಲೋಬಿನ್ ಮಟ್ಟ ಬೇರೆ ಬೇರೆಯಾಗಿರುತ್ತದೆ ಸಾಮಾನ್ಯವಾಗಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇರುವವರು ಕಬ್ಬಿಣದ ಅಂಶ ಇರುವ ಅಥವಾ ವಿಟಮಿನ್ ಅಂಶವಿರುವ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗಿ ಬರುತ್ತದೆ ಆದರೆ ಹಿಮೋಗ್ಲೋಬಿನ್ ಹೆಚ್ಚಿಸಿಕೊಳ್ಳಲು ಮನೆಯಲ್ಲಿಯೇ ಇರುವ ಪದಾರ್ಥದಿಂದ ಕೆಂಪು ರಕ್ತ ಕಣವನ್ನು ಹೆಚ್ಚಿಸಿಕೊಳ್ಳಬಹುದು ಹಿಮೋಗ್ಲೋಬಿನ್ ಅಂಶದ ಕೊರತೆ ಉಂಟಾದರೆ ಹಲವಾರು ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ .ಇಂದಿನ ಪಾಸ್ಪುಡ್ ಹಾಗೂ ಖರೀದಿ ತಿಂಡಿಗಳನ್ನು ಹೆಚ್ಚಾಗಿ ಎಲ್ಲರೂ ತಿನ್ನುದರಿಂದ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಸಿಗುತ್ತಿಲ್ಲ ಹೀಗಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ನಾವು ಈ ಲೇಖನದ ಮೂಲಕ ಹಿಮೋಗ್ಲೋಬಿನ್ ಹೆಚ್ಚಾಗಲು ಮನೆಯಲ್ಲಿಯೇ ಮಾಡುವ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳೋಣ.
ಹಿಮೋಗ್ಲೋಬಿನ್ ಜಾಸ್ತಿ ಆಗಲು ಮನೆಯಲ್ಲಿಯೇ ಮನೆ ಮದ್ದನ್ನು ಮಾಡಬಹುದು ಒಂದು ಕ್ಯಾರೆಟ್ ತೆಗೆದುಕೊಳ್ಳಬೇಕುನಂತರ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಪಿಸ್ ಆಗಿ ಕಟ್ಟು ಮಾಡಿಕೊಳ್ಳಬೇಕು ನಂತರ ಒಂದು ಬೀಟ್ರೂಟ್ಅಲ್ಲಿ ಅರ್ಧ ಭಾಗವನ್ನು ತೆಗೆದುಕೊಳ್ಳಬೇಕು ನಂತರ ಚಿಕ್ಕ ಚಿಕ್ಕ ಪಿಸ್ ಆಗಿ ಕಟ್ಟುಮಾಡಿಕೊಳ್ಳಬೇಕು ಹಾಗೆಯೇ ನೆಲ್ಲಿಕಾಯಿಯನ್ನು ಸಹ ಚಿಕ್ಕ ಚಿಕ್ಕ ಪಿಸ್ ಆಗಿ ಕಟ್ಟುಮಾಡಿಕೊಳ್ಳಬೇಕು .ಹಾಗೆಯೇ ಹಸಿ ಅರಿಶಿನ ಕೊಂಬಿನ ಚೂರೂ ಭಾಗವನ್ನು ತೆಗೆದುಕೊಳ್ಳಬೇಕು ಅರಿಶಿಣ ಕೊಂಬಿನ ಸಿಪ್ಪೆಯನ್ನು ತೆಗೆಯಬೇಕು ಅರ್ಧ ದಾಳಿಂಬೆ ಹಣ್ಣನ್ನು ತೆಗೆದುಕೊಳ್ಳಬೇಕು ಇವೆಲ್ಲ ತರಕಾರಿ ಹಣ್ಣನ್ನು ಜ್ಯೂಸ್ ಮಾಡುವ ಮಿಕ್ಸಿಗೆ ಹಾಕಬೇಕು ಹಾಗೆಯೇ ಮೆಣಸಿನ ಕಾಳಿನ ಪೌಡರ್ ಅನ್ನು ಸ್ವಲ್ಪ ಹಾಕಬೇಕು ಹಾಗೆಯೇ ಅರ್ಧ ಗ್ಲಾಸ್ ನೀರನ್ನು ಹಾಕಬೇಕು ಮಕ್ಕಳಿಗೆ ಆದರೆ ಬಿಸಿ ನೀರನ್ನು ಕಾಯಿಸಿ ಆರಿಸಿ ಹಾಕಬೇಕು.
ಸಿಹಿ ಬೇಕಾದರೆ ಜೇನುತುಪ್ಪವನ್ನು ಸ್ವಲ್ಪ ಹಾಕಬೇಕು ರುಬ್ಬಿದ ಜ್ಯೂಸ್ ಅನ್ನು ಸೋಸಿಕೊಳ್ಳಬೇಕು ಪ್ರತಿದಿನ ಕುಡಿದರೆ ತುಂಬಾ ಒಳ್ಳೆಯದು ವಾರಕ್ಕೆ ಎರಡು ಬಾರಿಯಾದರೂ ಕುಡಿಯಬೇಕು ಈ ರೀತಿ ಜ್ಯೂಸ್ ಮಾಡಿ ಕುಡಿದರೆ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ ಮಕ್ಕಳಿಗೂ ಸಹ ಕುಡಿಸಬಹುದು ದಿನಕ್ಕೆ ಒಂದು ಸೇಬು ಹಣ್ಣನ್ನು ತಿನ್ನುವುದರಿಂದ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ ಸೇಬು ಮತ್ತು ದಾಳಿಂಬೆ ಹಣ್ಣಿನಲ್ಲಿ ಕಬ್ಬಿಣಾಂಶ ಸಮೃದ್ಧವಾಗಿರುತ್ತದೆ.ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ ಹಣ್ಣು ನಿಂಬೆ ಸ್ಟ್ರಾಬೆರಿ ಪಪ್ಪಾಯ ದ್ರಾಕ್ಷಿ ಹಾಗೂ ಟೊಮ್ಯಾಟೋ ಗಳನ್ನು ನಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಆಗ ದೇಹದಲ್ಲಿ ವಿಟಮಿನ್ ಸಿ ಯ ಪ್ರಮಾಣ ಹಾಗೂ ಕಬ್ಬಿಣಾಂಶವು ಸಮ ಪ್ರಮಾಣದಲ್ಲಿ ಇರುತ್ತದೆ ಹಾಗಾಗಿ ವಿಟಮಿನ್ ಸಿ ಇರುವ ಪದಾರ್ಥಗಳನ್ನು ಪ್ರತಿದಿನ ಸೇವಿಸುವುದು ತುಂಬಾ ಒಳ್ಳೆಯದು