ಇತ್ತಿಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂಬುದು ನಮಗೆ ತಿಳಿದಿರುವಂತಹ ವಿಷಯ,ಅದರಲ್ಲೂ ಕೆಲವೊಂದು ಆರೋಗ್ಯ ಸಮಸ್ಯೆಗಳು ಮೊದಲೆಲ್ಲ ವಯಸ್ಸಾದ ನಂತರ ಕಾಣಿಸಿಕೊಳ್ಳುತ್ತಿತ್ತು ಅಂದರೆ ವಂಶ ಪಾರಂಪರ್ಯವಾಗಿ ಕಾಣಿಸಿಕೊಳ್ಳುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಈಗಿನ ಆಹಾರ ಪದಾರ್ಥದಲ್ಲಾಗುವ ವ್ಯತ್ಯಾಸದಿಂದ ತುಂಬಾ ಕಡಿಮೆ ವಯಸ್ಸಿನಲ್ಲಿಯೇ, ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಅಂತಹ ಒಂದು ಸಮಸ್ಯೆ ಎಂದರೆ ಮಧುಮೇಹ. ಒಮ್ಮೆ ಮಧುಮೇಹ ಅಥಾವ ಸಕ್ಕರೆ ಕಾಯಿಲೆ ನಮ್ಮ ದೇಹವನ್ನು ಪ್ರವೇಶಿಸಿತು ಎಂದರೆ ಅದು ವಾಸಿಯಾಗದೆ ಇರುವಂತಹ ಒಂದು ಖಾಯಿಲೆಯಾಗಿದೆ, ಅದಕ್ಕೆ ಸಾಧ್ಯವಾದಷ್ಟು ನಾವು ನಮ್ಮ ಆಹಾರ ಪದಾರ್ಥದಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದನ್ನು ನೋಡಿ ಸೇವಿಸಬೇಕು, ಇದರಿಂದ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
ಸಕ್ಕರೆ ಖಾಯಿಲೆ ಬಂದ ವ್ಯಕ್ತಿಗೆ ಹಲವಾರು ರೀತಿಯ ಲಕ್ಷಣಗಳು ತೋರುತ್ತವೆ, ಸಕ್ಕರೆ ಖಾಯಿಲೆ ಬಂದಾಗ ಅತಿಯಾದ ಬಾಯಾರಿಕೆ ಆಗುವುದು ಹಾಗೂ ಎಷ್ಟು ನೀರನ್ನು ಕುಡಿದರು ಸಹ ಈ ಬಾಯಾರಿಕೆ ಹೋಗುವುದಿಲ್ಲ. ಬಹು ಮೂತ್ರತಾ, ದೇಹದಲ್ಲಿ ಆದ ಗಾಯ ಬೇಗ ವಾಸಿಯಾಗದೆ ಇರುವುದು, ರಾತ್ರಿ ಹೊತ್ತು ಗಾಡಿ ಓಡಿಸುವಾಗ ಕಣ್ಣು ಹೆಚ್ಚು ಮಂಜಾಗುವುದು, ಅತಿ ಬೇಗನೇ ದೇಹದ ತೂಕ ಇಳಿಯುವುದು ಕೂಡ ಮುಖ್ಯ ಲಕ್ಶಣಗಳು. ಕೆಲವರಂತೂ ಒಂದೇ ವಾರದ ಅವಧಿಯಲ್ಲಿ 6 ರಿಂದ 8 ಕೆಜಿ ಅಷ್ಟು ತೂಕವನ್ನು ಕಳೆದುಕೊಂಡು ಬಿಡುತ್ತಾರೆ. ಇವೆಲ್ಲವೂ ಸಕ್ಕರೆ ಕಾಯಿಲೆ ಲಕ್ಶಣಗಳು. ಕೆಲವೊಂದು ಬಾರಿ ಹೇಗಾಗುತ್ತದೆ ಅಂದ್ರೆ ಇನ್ಸುಲಿನ್ ಮಟ್ಟಕ್ಕೆ ಈ ಖಾಯಿಲೆ ನಮ್ಮನ್ನು ಕೊಂಡೊಯ್ಯುತ್ತದೆ, ಆದರೆ ಇದನ್ನು ಈಗ ನಾವು ಹೇಳುವಂತಹ ಮನೆ ಮದ್ದುಗಳನ್ನು ಬಳಸಿಕೊಂಡು ಈ ಖಾಯಿಲೆಯನ್ನು ಸ್ವಲ್ಪ ಮಟ್ಟಿಗೆ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.
ಎರಡು ಬೆಂಡೆಕಾಯಿಯನ್ನು ಉದ್ದುದ್ದ ಕತ್ತರಿಸಿ ರಾತ್ರಿ ನೀರಿನಲ್ಲಿ ನೆನೆಹಾಕಬೇಕು, ಮರುದಿನ ಬೆಳಿಗ್ಗೆ ನೆನೆಹಾಕಿದ ನೀರಿನಿಂದ ಬೆಂಡೆಕಾಯಿಯನ್ನು ತೆಗೆದು ಹಾಕಿ ಲೋಳೆಯ ನೀರನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸಕ್ಕರೆ ಖಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ದೇಹದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡಲು ಮುಖ್ಯವಾದ ತರಕಾರಿ ಎಂದರೆ ಅದು ಹಾಗಲಕಾಯಿ. ಇದನ್ನು ನಮ್ಮ ದಿನ ನಿತ್ಯದ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಅಂದರೆ ಹಾಗಲಕಾಯಿ ಪಲ್ಯ, ಜ್ಯೂಸ್ ಅಥಾವ ಹಾಗಲಕಾಯಿ ಸಾಂಬಾರ್ ಮಾಡಿ ಸೇವಿಸುವುದರಿಂದ ಸಕ್ಕರೆ ಖಾಯಿಲೆ ಕಡಿಮೆ ಮಾಡಬಹುದು.
ಮೆಂತೆ ಪುಡಿ, ಕರಿ ಜೀರಿಗೆ ಪುಡಿ ಹಾಗೂ ದನಿಯ ಪುಡಿ, ಈ ಮೂರನ್ನೂ ಸರಿ ಪ್ರಮಾಣದಲ್ಲಿ ಮಿಶ್ರಣ ಮಾಡಿ ಪ್ರತಿ ನಿತ್ಯ ಒಂದು ಲೋಟ ಬಿಸಿ ನೀರಿನ ಜೊತೆ ಸೇರಿಸಿ ದಿನ ನಿತ್ಯ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಸಕ್ಕರೆ ಬದಲಿ ಹೆಚ್ಚಾಗಿ ಬೆಲ್ಲವನ್ನು ಬಳಸುವುದು ಮತ್ತು ರಾತ್ರಿ ಮೆಂತೆಯನ್ನು ನೆನೆ ಹಾಕಿ ಬೆಳಗ್ಗೆ ಎದ್ದು ಮೆಂತೆಯನ್ನು ತಿಂದು ನೆನೆ ಹಾಕಿದ ನೀರನ್ನು ಕುಡಿಯುವುದರಿಂದ ಸಕ್ಕರೆ ಅಂಶ ಕಡಿಮೆ ಆಗುತ್ತದೆ.