ಸಾಮಾನ್ಯವಾಗಿ ಗಣಿಕೆ ಸೊಪ್ಪನ್ನು ಎಲ್ಲರೂ ನೋಡಿರುತ್ತಾರೆ, ಯಾಕಂದ್ರೆ ಗ್ರಾಮೀಣ ಭಾಗದ ಜನರು ಗಣಿಕೆ ಸೊಪ್ಪನ್ನು ಸರ್ವೇ ಸಾಮಾನ್ಯವಾಗಿ ಸಾಂಬಾರು ಮಾಡಲು ಉಪಯೋಗಿಸುತ್ತಾರೆ. ಗಣಿಕೆ ಸೊಪ್ಪಿನ ಸಾಂಬಾರಿನ ರುಚಿಯೇ ಬೇರೆ ಈ ಗಣಿಕೆ ಸೊಪ್ಪಿನ ಗಿಡವನ್ನು ಯಾರೂ ಬೆಳೆಯಬೇಕಿಲ್ಲ ಅದು ತಾನಾಗಿಯೇ ಹುಟ್ಟಿರುತ್ತದೆ ಹೀಗೆ ಗಣಿಕೆ ಸೊಪ್ಪು ಬರಿಯ ಸಾಂಬಾರು ಮಾಡಲು ಮಾತ್ರವಲ್ಲದೆ ದೇಹದಮೇಲೆ ಆಗುವ ಸಮಸ್ಯೆಗಳಿಂದ ಹಿಡಿದು ಜ್ವರ ಕೆಮ್ಮು ಶೀತ ಎಲ್ಲದ್ದಕ್ಕೂ ರಾಮಭಾಣ.
ಈ ಅದ್ಭುತ ಸೊಪ್ಪು ಹಾಗಾಗಿ ಆಯುರ್ವೇದ ಪದ್ದತಿಯಲ್ಲಿ ಇದನ್ನು ವೈದ್ಯಕೀಯ ಚಿಕಿತ್ಸೆಗೂ ಸಹ ಉಪಯೋಗಿಸಲಾಗುತ್ತದೆ, ಈ ಗಿಡದ ಹಣ್ಣಿನಲ್ಲಿ ಸತು ರಂಜಕ ಹಾಗೂ ಕಬ್ಬಿಣದ ಅಂಶಗಳು ಹೆಚ್ಚಾಗಿರುವುದಲ್ಲದೆ ವಿಟಮಿನ್ ಎ ಮತ್ತು ವಿಟಮಿನ್ ಸಿ ಗಳು ಹೆರಳವಾಗಿರುತ್ತವೆ. ಹಾಗಾಗಿಯೇ ಈ ಸಸ್ಯವು ಸಂಜೀವಿನಿಯಂತೆ ಭಾಸವಾಗುತ್ತದೆ ಆದ್ದರಿಂದಲೇ ಈ ಸೊಪ್ಪನ್ನು ಹಲವಾರು ಸಮಸ್ಯೆಗಳಿಗೆ ಔಷದಿಯಾಗಿ ಬಳಸಲಾಗುತ್ತದೆ. ಈ ಲೇಖನದ ಮೂಲಕ ನಾವು ಈ ಗಣಿಕೆ ಸೊಪ್ಪಿನ ಆರೋಗ್ಯಕರ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ.
ಗಣಿಕೆ ಸೊಪ್ಪನ್ನು ಹೆಚ್ಚಾಗಿ ಸೇವಿಸುವುದರಿಂದ ಹೆಣ್ಣುಮಕ್ಕಳ ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ ಅಲ್ಲದೇ ಮಲಬದ್ದತೆ ರಕ್ತದೊತ್ತಡ ಅಜೀರ್ಣ ಇರುವವರಿಗೂ ಕೂಡ ಇದು ಉತ್ತಮ ಆಹಾರವಾಗಿದೆ ಮತ್ತು ಈ ಗಣಿಕೆ ಸೊಪ್ಪನ್ನು ಉಪಯೋಗಿಸುವುದರಿಂದ ಬೊಜ್ಜು ಕರಗಿಸಿ ಸಣ್ಣಗಾಗಲುಬಹುದು ಮತ್ತು ಹೊಟ್ಟೆ ಹಸಿವೆ ಆಗದೆ ಸಮಸ್ಯೆಯನ್ನು ಎದುರಿಸುತ್ತಿರುವವರು ಈ ಸೊಪ್ಪನ್ನು ಬಳಸುವುದರಿಂದ ಜೀರ್ಣ ಕ್ರಿಯೆ ಸರಾಗವಾಗಿ ಸಾಗಿ ಸರಿಯಾದ ಸಮಯಕ್ಕೆ ಹೊಟ್ಟೆ ಹಸಿಯಲು ಪ್ರಾರಂಭಿಸುತ್ತದೆ, ಹಾಗೂ ಗಣಿಕೆ ಸೊಪ್ಪಿನ ಹಣ್ಣುಗಳನ್ನು ತಿನ್ನುವುದರಿಂದ ಜ್ವರ ಬಾಯಿ ಹುಣ್ಣು ಹಾಗೂ ಯಕೃತ್ತಿನ ಸಮಸ್ಯೆಗಳು ಕಡಿಮೆಯಾಗುತ್ತವೆ ಅಲ್ಲದೇ ಈ ಹಣ್ಣುಗಳನ್ನು ನಿಯಮಿತವಾಗಿ ತಿನ್ನುವುದರಿಂದ ಆಸ್ತಮಾ ಮತ್ತು ಬಾಯಾರಿಕೆ ಸಮಸ್ಯೆಗಳಿಗೂ ಕೂಡ ಪರಿಹಾರ ಸಿಗುತ್ತದೆ. ಹಾಗೂ ಕೆಮ್ಮು, ಕಫ ಅಸ್ತಮಾ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳು, ಅಧಿಕ ರಕ್ತ ಸ್ರಾವ, ಚರ್ಮದ ಅಲರ್ಜಿ ಇಂತಹ ಹಲವಾರು ಸಮಸ್ಯೆಗಳಿಗೆ ಇದನ್ನು ಔಷಧಿಯಾಗಿ ಬಳಕೆ ಮಾಡಬಹುದು.
ಮುಟ್ಟಿನ ಸಮಯದಲ್ಲಿ ಅರ್ಧ ಕಪ್ ಗಣಿಕೆ ಸೊಪ್ಪಿನ ರಸ ಸೇವಿಸಿದರೆ ಈ ಸಮಯದಲ್ಲಿ ಬರುವ ಹೊಟ್ಟೆ ನೋವು ಶಮನವಾಗುತ್ತದೆ. ದೇಹದಲ್ಲಿ ನೀರು ತುಂಬಿ ಊತವಿದ್ದರೆ ಗಣಿಕೆ ಸೊಪ್ಪಿನ ಕಷಾಯ ಸೇವಿಸಿದರೆ ದೇಹದ ಊತ ಕಡಿಮೆಯಾಗುತ್ತದೆ. ಗಣಿಕೆ ಸೊಪ್ಪನ್ನು ಮಜ್ಜಿಗೆ ಜತೆ ಸೇವಿಸಿದರೆ ಚರ್ಮದ ತುರಿಕೆ ಗಂದೆಗಳು ಮತ್ತು ಉರಿ ಕಡಿಮೆಯಾಗುತ್ತವೆ. ಸರ್ಪಸುತ್ತು ಆಗಿರುವ ಜಾಗಕ್ಕೆ ಗಣಿಕೆ ಸೊಪ್ಪಿನ ಪೇಸ್ಟ್ ಗೆ ತುಪ್ಪ ಬೆರೆಸಿ ಹಚ್ಚಿದರೆ ಉರಿ, ನೋವು ಕಡಿಮೆಯಾಗುತ್ತವೆ.
ಗಣಿಕೆ ಹಣ್ಣುಗಳ ಬೀಜಗಳಿಂದ ಮುಖದ ಮೇಲಿನ ಕಪ್ಪು ಕಲೆಗಳನ್ನು ತಿಕ್ಕಿದರೆ ಕಲೆಗಳು ನಿವಾರಣೆಯಾಗುತ್ತವೆ. ಗಾಯ ಅಥವಾ ಹುಣ್ಣಾಗಿದ್ದರೆ ಗಣಿಕೆ ಸೊಪ್ಪಿನ ಕಷಾಯವನ್ನು ಹತ್ತಿಯಲ್ಲಿ ಅದ್ದಿ ಗಾಯದ ಮೇಲೆ ಇಟ್ಟರೆ ಗಾಯ ಬೇಗ ಗುಣವಾಗುತ್ತದೆ. ಗಣಿಕೆ ಸೊಪ್ಪನ್ನು ಬಾಯಲ್ಲಿ ಇಟ್ಟುಕೊಂಡು ಜಗಿದರೆ ಬಾಯಿ ಹುಣ್ಣು ನಿವಾರಣೆಯಾಗುತ್ತದೆ. ಗಣಿಕೆ ಹಣ್ಣಿನ ತಿರುಳನ್ನು ನಿಯಮಿತವಾಗಿ ಸೇವಿಸಿದರೆ ಆಸ್ತಮಾ ಮತ್ತು ಹೆಚ್ಚು ಬಾಯಾರಿಕೆ ಸಮಸ್ಯೆ ನಿವಾರಣೆಯಾಗುತ್ತದೆ. ರಿಂಗ್ ವರ್ಮ್(ಹುಳು ಕಡ್ಡಿ) ಇದ್ದರೆ ಗಣಿಕೆ ಹಣ್ಣಿನ ಪೇಸ್ಟ್ ಅನ್ನು ಆ ಜಾಗಕ್ಕೆ ಲೇಪ ಮಾಡಿದರೆ ಗುಣವಾಗುತ್ತದೆ.
ಈ ಗಣಿಕೆ ಸೊಪ್ಪನ್ನು ನಾವು ಹೇಗೆ ಬಳಕೆ ಮಾಡುವುದು ಎಂದು ನೋಡುವುದಾದರೆ, ಈ ಸೊಪ್ಪನ್ನು ಪಲ್ಯ ಮಾಡಿ ತಿನ್ನುವುದರಿಂದ ಮೂಲವ್ಯಾಧಿ ಸಮಸ್ಯೆಯನ್ನು ಗುಣಪಡಿಸಿಕೊಳ್ಳಬಹುದು. ಗಂಟು ನೋವು ಇದ್ದರೆ ಆ ಜಾಗಕ್ಕೆ ಈ ಗಣಿಕೆ ಸೊಪ್ಪಿನ ರಸದ ಜೊತೆಗೆ ಅರಿಶಿನವನ್ನು ಅರೆದು ಹಚ್ಚಿದರೆ ನೋವುಗಳು ಮಾಯವಾಗುತ್ತವೆ. ಕಜ್ಜಿ ಹುಣ್ಣು ಆದಾಗ ಈ ಗಣಿಕೆ ಸೊಪ್ಪು ಮತ್ತು ಅರಿಶಿನವನ್ನು ಕೊಬ್ಬರಿ ಎಣ್ಣೆಯ ಜೊತೆ ಬೆರೆಸಿ ಬಿಸಿ ಮಾಡಿ ಹಚ್ಚಿದರೆ ನೋವು ಹಾಗೂ ಕಜ್ಜಿಯ ಗಾಯಾಗಳೂ ಸಹ ಕಡಿಮೆ ಆಗುತ್ತವೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430