ಕೃಷ್ಣಾ ತುಳಸಿ ಹಾಗು ಶ್ವೇತಾ ತುಳಸಿ ಇದರಲ್ಲಿ ಶರೀರಕ್ಕೆ ಯಾವುದು ಒಳ್ಳೇದು ಗೊತ್ತೇ

0

ಭಾರತದಲ್ಲಿ ಅದರಲ್ಲೂ ಹಿಂದೂಗಳು ತುಳಸಿಯನ್ನು ತುಂಬಾ ಪವಿತ್ರವೆಂದು ಭಾವಿಸುವರು. ತುಳಸಿ ಗಿಡದಲ್ಲಿ ದೇವದೇವತೆಗಳು ನೆಲೆಸಿರುವರು ಎಂದು ಪುರಾಣಗಳು ಕೂಡ ಹೇಳಿವೆ. ಅದೇ ರೀತಿಯಲ್ಲಿ ತುಳಸಿ ಗಿಡವನ್ನು ಪುರಾತನ ಕಾಲದಿಂದಲೂ ಆಯುರ್ವೇದದಲ್ಲಿ ಔಷಧಿಯಾಗಿಯೂ ಬಳಸಿಕೊಂಡು ಬರಲಾಗುತ್ತಾ ಇದೆ. ತುಳಸಿ ಎಲೆಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದೆ ಎಂದು ಹೇಳಲಾಗುತ್ತದೆ. ಕೆಲವೊಂದು ಅಧ್ಯಯನಗಳು ಕೂಡ ಇದನ್ನು ಸಾಬೀತು ಮಾಡಿವೆ.

ತುಳಸಿ ಗಿಡವನ್ನು ಹೆಚ್ಚಾಗಿ ಭಾರತದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಧಾರ್ಮಿಕ ಹಾಗೂ ಔಷಧಿ ಯಾಗಿಯೂ ಇದನ್ನು ಬಳಕೆ ಮಾಡಲಾಗುತ್ತದೆ. ತುಳಸಿ ಗಿಡವನ್ನು ಚಾ, ತಾಜಾ ಎಲೆಗಳು, ಜ್ಯೂಸ್ ಮತ್ತು ಒಣಗಿಸಿ ಹುಡಿ ಮಾಡಿದ ರೂಪದಲ್ಲಿ ಬಳಸಲಾಗುತ್ತದೆ. ಆದರೆ ತುಳಸಿಯಲ್ಲಿ ಎರಡು ವಿಧಗಳು ಇವೆ. ಆ ಎರಡು ವಿಧಗಳು ಯಾವವು? ಹಾಗೂ ಯಾವ ತುಳಸಿಯನ್ನು ನಮ್ಮ ಆರೋಗ್ಯದ ಹಿತಕ್ಕೆ ಬಳಸುವುದು ಉತ್ತಮ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಆಧ್ಯಾತ್ಮದ ಹಿನ್ನಲೆ ಇರುವ ಗಿಡ ತುಳಸಿಯಲ್ಲಿ ಕೃಷ್ಣ ತುಳಸಿ ಹಾಗೂ ಶ್ವೇತ ತುಳಸಿ ಎಂದು ಎರಡು ವಿಧಗಳು ಇವೆ. ಸತ್ಯಯುಗ, ದ್ವಾಪರ ಯುಗ ಮತ್ತು ತ್ರೇತಾ ಯುಗದಲ್ಲಿ ಕೂಡಾ ತುಳಸಿಯ ಬಳಕೆ ಮಾಡಲಾಗುತ್ತಿತ್ತು. ತುಳಸಿ ಒಂದು ಕ್ರಿಮಿ ಹರ ದ್ರವ್ಯ ಎಂದು ಹೇಳಬಹುದು. ಆಯುರ್ವೇದದ ಪ್ರಕಾರ, ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್ ಇವುಗಳನ್ನು ಸಹ ಕ್ರಿಮಿ ಎಂದೇ ಹೇಳುತ್ತಾರೆ. ಸಾಮಾನ್ಯವಾಗಿ ಎಲ್ಲರ ಮನೆಯ ಬಾಗಿಲಿನ ಎದುರು ಸಹ ತುಳಸಿ ಗಿಡವನ್ನು ನಾವು ಕಾಣುತ್ತೇವೆ. ಆದರೆ ಯಾಕೆ ಮನೆಯ ಎದುರು ಮಾತ್ರವೇ ತುಳಸಿ ಗಿಡವನ್ನು ನೆಡುತ್ತಾರೆ? ಮನೆಯ ಎದುರು ಬಾಗಿಲಿನಿಂದ ತಾನೇ ಯಾರಾದರೂ ಬಂದರೆ ಮನೆಯ ಒಳಗೆ ಬರುವುದು? ಹಾಗೇ ಕ್ರಿಮಿಗಳು ಕೂಡಾ ಮನೆಯ ಒಳಗೆ ಬರುತ್ತವೆ. ಆದರೆ ಮನೆಯ ಎದುರು ತುಳಸಿ ಗಿಡವನ್ನು ನೆಟ್ಟರೆ ಅದು ಬೀಸುವ ಗಾಳಿಯನ್ನು ಶುದ್ಧ ಮಾಡಿ ನಮಗೆ ಶುದ್ಧ ಗಾಳಿಯನ್ನು ನೀಡುತ್ತದೆ. ಇದರಿಂದ ಅದೆಷ್ಟೋ ಕ್ರಿಮಿಗಳು ನಾಶ ಆಗುತ್ತವೆ. ಇನ್ನೂ ಹೆಣ್ಣುಮಕ್ಕಳು ತುಳಸಿ ಕಟ್ಟೆಗೆ ಪ್ರದಕ್ಷಿಣೆ ಹಾಕುವ ಪದ್ಧತಿ ರೂಢಿಯಲ್ಲಿ ಇತ್ತು ಇದಕ್ಕೂ ಒಂದು ಕಾರಣ ಇದೆ. ತುಳಸಿ ಗಿಡದ ಬಳಿ ಆಮ್ಲಜನಕ ಹೆಚ್ಚಾಗಿ ಸಿಗುತ್ತದೆ.

ತುಳಸಿಯ ಗಂಧ, ಪರಿಮಳ ಇದು ಮನಸ್ಸಿಗೆ ಪ್ರಪುಲ್ಲಕರವಾಗಿ ಇರುತ್ತದೆ. ನಮ್ಮ ಮನಸ್ಸು ಮತ್ತು ದೇಹ ಎರಡೂ ಚೈತನ್ಯದಿಂದ ಇರುತ್ತದೆ. ಇಬ್ಬರು ವ್ಯಕ್ತಿ ಮಾಡುವ ಕೆಲಸವನ್ನು ಒಬ್ಬ ವ್ಯಕ್ತಿ ಮಾಡುವಷ್ಟು ಹುಮ್ಮಸ್ಸು ನಮ್ಮಲ್ಲಿ ಇರುತ್ತದೆ. ಈ ಕಾರಣಕ್ಕೆ ತುಳಸಿಯ ಎಲೆಯನ್ನು ಕಿತ್ತು ಹೆಂಗಸರು ತಮ್ಮ ಮುಡಿಯಲ್ಲಿ ಮುಡಿದುಕೊಳ್ಳುತ್ತಿದ್ದರು ಹಾಗೂ ಗಂಡಸರು ಕಿವಿಯಲ್ಲಿ ತುಳಸಿಯ ಎಲೆಯನ್ನು ಇಟ್ಟುಕೊಳ್ಳುತ್ತಿದ್ದರು. ಇನ್ನೂ ಹಿಂದಿನ ಕಾಲದಲ್ಲಿ ಅಂತೂ ಶ್ರೀ ಕೃಷ್ಣ ತುಳಸಿಯ ಮಾಲೆಯನ್ನೆ ಧರಿಸುತ್ತಿದ್ದರು.

ಇನ್ನು ತುಳಸಿ ಎಲೆಯ ಔಷಧೀಯ ಗುಣಗಳನ್ನು ನೋಡುವುದಾದರೆ, ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ಸಿಗುವ ಲಾಭಗಳ ಬಗ್ಗೆ ನಿಮಗೆ ತಿಳಿದಿದೆಯೋ ಇಲ್ಲವೋ, ಆದರೆ ಇದರಿಂದ ದೇಹದೊಳಗಿನ ಹಾಗೂ ಹೊರಗಿನ ಆರೋಗ್ಯಕ್ಕೆ ಹಲವಾರು ಲಾಭಗಳೂ ಇವೆ. ತುಳಸಿ ಎಲೆಗಳಲ್ಲಿ ಚಿಕಿತ್ಸಕ ಗುಣಗಳು ಇದೆ ಎಂದು ಹಿಂದಿನಿಂದಲೂ ಪರಿಗಣಿಸಲಾಗಿದೆ. ತುಳಸಿ ಎಲೆಗಳನ್ನು ಸೇವಿಸುವ ಅಥವಾ ಅದರ ನೀರು ಕುಡಿಯುವ ಪ್ರಮೂಕ ಲಾಭವೆಂದರೆ ಇದು ಪ್ರತಿರೋಧಕ ವ್ಯವಸ್ಥೆ ಬಲಪಡಿಸುವುದು. ತುಳಸಿ ಎಲೆಗಳನ್ನು ಆ್ಯಂಟಿ ಆಕ್ಸಿಡೆಂಟ್ ಸಮೃದ್ಧವಾಗಿದೆ ಮತ್ತು ಇದು ಸೋಂಕಿನ ವಿರುದ್ಧ ಹೋರಾಡುವುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಆರೋಗ್ಯವಾಗಿರುವುದು.

ನಿಯಮಿತವಾಗಿ ತುಳಸಿ ಚಹಾ ಸೇವನೆ ಮಾಡುವುದರಿಂದ ಕ್ಯಾನ್ಸರ್ ನ್ನು ತಡೆಗಟ್ಟಲು ಪರಿಣಾಮಕಾರಿಯಾಗಲಿದೆ. ತುಳಸಿ ಚಹಾ ಕುಡಿಯುವುದರಿಂದ ಬಾಯಿ ಕ್ಯಾನ್ಸರ್, ಚರ್ಮ, ಶ್ವಾಸಕೋಶ ಮತ್ತು ಯಕೃತ್‌ನ ಕ್ಯಾನ್ಸರ್ ತಡೆಗಟ್ಟಬಹುದು. ತುಳಸಿ ಎಲೆಗಳಲ್ಲಿ ಇರುವಂತಹ ಫೈಥೊಕೆಮಿಕಲ್ ಸಾಮಾನ್ಯ ಕೋಶಗಳು ಕ್ಯಾನ್ಸರ್ ಕೋಶಗಳಾಗಿ ಪರಿವರ್ತನೆಯಾಗದಂತೆ ತಡೆಯುವುದು ಮತ್ತು ಆರಂಭಿಕ ಹಂತದ ಕ್ಯಾನ್ಸರ್ ವರ್ಗಾವಣೆಯಾದಂತೆ ನೋಡಿಕೊಳ್ಳುವುದು. ತುಳಸಿ ಗಿಡದಲ್ಲಿ ಮಧುಮೇಹ ವಿರೋಧಿ ಗುಣಗಳು ಇವೆ ಎಂದು ಈಗಾಗಲೇ ಸಾಬೀತಾಗಿದೆ. ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನ ಮತ್ತು ಮನುಷ್ಯರ ಮೇಲೆ ಪ್ರಯೋಗ ಮಾಡಿದ ಸಂದರ್ಭದಲ್ಲಿ ತುಳಸಿ ಗಿಡವು ಅಸಾಮಾನ್ಯ ಸಕ್ಕರೆ ಅಂಶವನ್ನು ಕಡಿಮೆ ಮಾಡುವುದು, ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುವುದು ಮತ್ತು ಮಧುಮೇಹದಿಂದ ಕಿಡ್ನಿ ಮತ್ತು ಯಕೃತ್ ಗೆ ಆಗಿರುವ ಹಾನಿ ತಡೆಗಟ್ಟುವುದು.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!