WhatsApp Group Join Now
Telegram Group Join Now

ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿದ್ದರೆ ಮಾತ್ರ ಬದುಕುಳಿಯುವುದು ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಒಂದು ವೇಳೆ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವು ಕಡಿಮೆಯಾದರೆ, ಅನೇಕ ಕಾಯಿಲೆಗಳಿಗೆ ಗುರಿಯಾಗುತ್ತೇವೆ. ಹಾಗಿದ್ರೆ ರಕ್ತದಲ್ಲಿ ಸಾಕಷ್ಟು ಪ್ರಮಾಣದ ಹಿಮೋಗ್ಲೋಬಿನ್ ಅನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಬೀಟ್​ರೂಟ್: ಬೀಟ್​ ರೂಟ್​ ಎನ್ನುವುದು ರಕ್ತಹೀನತೆಗೆ ಪರಿಣಾಮಕಾರಿ ಆಹಾರ. ಸಾಮಾನ್ಯ ರಕ್ತ ಕೊರತೆ ಉಂಟಾದರೆ ವೈದ್ಯರು ಕೂಡ ಮೊದಲು ಬೀಟ್ ರೂಟ್​ ಸೇವನೆಗೆ ಸಲಹೆ ನೀಡುತ್ತಾರೆ. ಇದರಲ್ಲಿ ಕಂಡು ಬರುವ ಕಬ್ಬಿಣಾಂಶ, ಫೋಲಿಕ್ ಆ್ಯಸಿಡ್, ಫೈಬರ್ ಮತ್ತು ಪೊಟಾಶಿಯಂ ಅಂಶಗಳು ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ. ಇದನ್ನು ನೀವು ಜ್ಯೂಸ್ ಆಗಿ ಕೂಡ ಕುಡಿಯಬಹುದು. ವಾರಕ್ಕೆ ಎರಡು ಬಾರಿಯಾದರೂ ಬೀಟ್​ ರೂಟ್​ ಸೇವನೆಯಿಂದ ರಕ್ತ ಮತ್ತು ಹಿಮೋಗ್ಲೋಬಿನ್ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡಬಹುದು. ದಾಳಿಂಬೆ: ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು, ದಾಳಿಂಬೆ ಸೇವಿಸಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದಲ್ಲದೆ, ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ದಾಳಿಂಬೆ ಸೇವನೆಯು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿನಿತ್ಯ ದಾಳಿಂಬೆ ಸೇವನೆ ಅಥವಾ ಜ್ಯೂಸ್ ಮಾಡಿ ಕುಡಿಯುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು.

ಕ್ಯಾರೆಟ್: ಸಾಮಾನ್ಯವಾಗಿ ಕ್ಯಾರೆಟ್ ಅನ್ನು ಸಲಾಡ್ ಆಗಿ ಸಹ ಸೇವಿಸಲಾಗುತ್ತದೆ. ಇನ್ನು ಕೆಲವರು ಕ್ಯಾರೆಟ್ ಅನ್ನು ಜ್ಯೂಸ್ ಮಾಡಿ ಕುಡಿಯುತ್ತಾರೆ. ಹೇಗೆ ಸೇವಿಸಿದರೂ ಇದರಿಂದ ನಿಮ್ಮ ರಕ್ತದಲ್ಲಿನ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಬಹುದು. ಏಕೆಂದರೆ ಕ್ಯಾರೆಟ್​ನಲ್ಲಿರುವ ಬೀಟಾ ಕ್ಯಾರೋಟಿನ್ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸತ್ತದೆ. ಕಿತ್ತಳೆ: ವಿಟಮಿನ್-ಸಿ ಆಹಾರದ ಪ್ರಮುಖ ಮೂಲವೆಂದರೆ ಕಿತ್ತಳೆ. ಇದನ್ನು ಜ್ಯೂಸ್​ ಅಥವಾ ಹಾಗೆಯೇ ತಿನ್ನಬಹುದು. ವೈಜ್ಞಾನಿಕ ಅಧ್ಯಯನದ ಪ್ರಕಾರ, ಕಿತ್ತಳೆ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವ ಜನರಲ್ಲಿ ಹಿಮೋಗ್ಲೋಬಿನ್ ಸಮಸ್ಯೆಯ ಅಪಾಯ ಬಹಳ ಕಡಿಮೆ. ಹೀಗಾಗಿ ಹಿಮೋಗ್ಲೋಬಿನ್ ಸಮಸ್ಯೆಗಳನ್ನು ದೂರ ಮಾಡಲು ಪ್ರತಿನಿತ್ಯ ಕಿತ್ತಲೆ ಅಥವಾ ಆರೆಂಜ್ ಸೇವಿಸಿ.ಮ್ಯೆಂತ್ಯ ಕಾಳನ್ನು ಒಂದು ದಿನದ ಕಾಲ ನೆನೆಸಿಟ್ಟು ಆ ನೀರನ್ನು ಕೂಡಿಯುತ್ತಾ ಬರಬೇಕು ಜೊತೆಗೆ ಅದರಲ್ಲಿನ ಮ್ಯೆಂತ್ಯವನ್ನು ತಿನ್ನಬೇಕು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: