ಶರೀರಕ್ಕೆ ಇಮ್ಮ್ಯೂನಿಟಿ ನೀಡುವ ಖಜಾನೆ ಇದನ್ನು ಸೇವಿಸಿ

0

ಕೊರೊನಾ ವೈರಸ್ ಜಗತ್ತನ್ನೇ ವ್ಯಾಪಿಸಿದ್ದು ಇದೊಂದು ಸಾಂಕ್ರಾಮಿಕ ರೋಗ ಎಂದು ವಿಶ್ವಸಂಸ್ಥೆಯೇ ಘೋಷಿಸಿದೆ. ಹೀಗಿದ್ದಾಗ ಇದರ ಹರಡುವಿಕೆಯನ್ನು ತಪ್ಪಿಸಿಕೊಳ್ಳಲು ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವುದು ಎಲ್ಲರಿಗೂ ಅನಿವಾರ್ಯವಾಗಿದೆ. ಆದರೆ ಅದಕ್ಕೂ ಮುನ್ನ ನಮ್ಮ ರಕ್ಷಣೆಯನ್ನು ಸ್ವತಃ ನಾವೇ ಮಾಡಿಕೊಳ್ಳುವುದು ಕೂಡಾ ಅತಿ ಸುರಕ್ಷಿತವಾಗಿದೆ. ಕೋರೋನ ಸೋಂಕಿಗೆ ಒಳಗಾಗದಂತೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೂ ಬಹಳ ಪ್ರಮುಖವಾಗಿದೆ. ಹಾಗಿದ್ದರೆ ನಾವು ಹೇಗೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವುದನ್ನು ನಾವಿಲ್ಲಿ ನೋಡೋಣ.

ಮೊದಲಿಗೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸುಲಭ ಮನೆಮದ್ದು ಎಂದರೆ ತುಳಸಿ ಎಲೆಗಳನ್ನು ತಿನ್ನುವುದು. ಪ್ರತೀ ದಿನ ಬೆಳಗ್ಗೆ ಎದ್ದು ಬ್ರಷ್ ಮಾಡಿ ಆದ ನಂತರ ಖಾಲಿ ಹೊಟ್ಟೆಯಲ್ಲಿ ಎರಡು ತುಳಸಿ ಎಲೆಗಳು ಹಾಗೂ ಅದರ ಜೊತೆಗೆ ಒಂದು ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಜಗಿದು ತಿನ್ನಬೇಕು ಹೀಗೆ ಮಾಡುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಎರಡನೆಯದಾಗಿ ಕ್ಯಾರೆಟ್ ಸೇವನೆ ಮಾಡುವುದು. ಕ್ಯಾರೆಟ್ ನಲ್ಲಿ ಬ್ಲಡ್ ಕ್ಯಾನ್ಸರ್ ದೂರ ಮಾಡುವ ಗುಣ ಕೂಡಾ ಇದೆ ಹಾಗಾಗಿ ಪ್ರತೀ ದಿನ ಹಸಿಯಾದ ಕ್ಯಾರೆಟ್ ಸೇವನೆ ಮಾಡುವುದರಿಂದ ಬ್ಲಡ್ ಕ್ಯಾನ್ಸರ್ ಮಾತ್ರ ಇಲ್ಲದಂತೆ ಮಾಡುವುದು ಮಾತ್ರವಲ್ಲದೆ ಇದು ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಮೂರನೆಯದಾಗಿ ನಮ್ಮ ದಿನನಿತ್ಯದ ಆಹಾರದಲ್ಲಿ ಮಿತ ಪ್ರಮಾಣದಲ್ಲಿ ಶುಂಠಿಯನ್ನು ಬಳಕೆ ಮಾಡುವುದು. ಇನ್ನು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಏನನ್ನೂ ಸೇವಿಸಬಾರದು ಎಂದು ನೋಡುವುದಾದರೆ ಮೈದಾ ಬಳಕೆ ಮಾಡಬಾರದು. ಮೈದಾ ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ ಹಾಗಾಗಿ ಮೈದಾ ಬಳಕೆ ಆದಷ್ಟು ಕಡಿಮೆ ಆದರೆ ಉತ್ತಮ.

ಇನ್ನು ಸಾಧ್ಯವಾದಷ್ಟು ನಮ್ಮ ದೇಹ ಚಟುವಟಿಕೆಯಿಂದ ಇರುವ ಹಾಗೆ ನೋಡಿಕೊಳ್ಳಬೇಕು ಅದಕ್ಕೆ ಪ್ರತೀ ದಿನ ಬೆಳಗ್ಗೆ ಸಂಜೆ ಆದಷ್ಟು ಸಮಯ ಯೋಗ ವ್ಯಾಯಾಮ ವಾಕಿಂಗ್ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು. ದ್ರಾಕ್ಷಿ ಹಣ್ಣು ಕಿತ್ತಳೆ ಹಣ್ಣು ಮುಸಂಬಿ ಹಣ್ಣು ನಿಂಬೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ದಿಯಾಗುವುದು. ಕೆಂಪು ದೊಣ್ಣೆ ಮೆಣಸಿನ ಕಾಯಿ ಗೆಡ್ಡೆ ಕೋಸು ಬೆಳ್ಳುಳ್ಳಿ ಇವೂ ಕೂಡಾ ಆರೋಗ್ಯದಾಯಕ ಆಹಾರಗಳಾಗಿವೆ. ಅದೇ ರೀತಿ ಮೊಸರು ಬಾದಾಮಿ ಸೂರ್ಯಕಾಂತಿ ಬೀಜ ನಿಂಬೆ ಹಣ್ಣು ಅರಿಶಿಣ ಗ್ರೀನ್ ಟೀ, ಪಪ್ಪಾಯಿ ಮತ್ತು ಕಿವಿಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಕೊರೋನಾ ವೈರಸ್‌ ಸಂಪೂರ್ಣವಾಗಿ ನಮ್ಮನ್ನು ಗೆಲ್ಲುವುದಕ್ಕಿಂತ ಮೊದಲು ನಾವೇ ಅದನ್ನು ಎದುರಿಸಲು ಅಣಿಯಾಗಬೇಕು. ಅದಕ್ಕಿರುವ ಸದ್ಯದ ಒಂದು ಮಾರ್ಗವೆಂದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು. ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಾವು ನಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ಆಗಲಿ ಆಚರಣೆಯಲ್ಲಿ ಆಗಲಿ ಈ ಮೇಲಿನ ಒಂದಷ್ಟು ಬದಲಾವಣೆಗಳನ್ನು ಅಳವಡಿಸಿಕೊಳ್ಳಲೆಬೇಕಿದೆ.

Leave A Reply

Your email address will not be published.

error: Content is protected !!