ಮೆದುಳು ಸುಮಾರು ಹತ್ತು ಸಾವಿರಾರು ಕೋಟಿ ನರತಂತುಗಳ ಸಮೂಹದಿಂದ ರಚಿಸಲ್ಪಟ್ಟಿದೆ. ಇದರಲ್ಲಿ ಎರಡು ಭಾಗಗಳಿವೆ, ಎಡ ನರ ಮಂಡಲ ಮತ್ತು ಬಲ ನರ ಮಂಡಲ ಎಂದು. ನಮ್ಮ ಮೆದುಳು ಬೆನ್ನು ಹುರಿಯ ಮುಖಾಂತರ ದೇಹದ ಇತರ ಭಾಗಗಳಿಗೆ ವಿಸ್ತರಿಸಲಾಗಿದೆ. ಎಡ ಭಾಗದ ಮೆದುಳು ದೇಹದ ಬಲ ಭಾಗವನ್ನು ನಿಯಂತ್ರಿಸುತ್ತದೆ. ಕೆಲವೊಮ್ಮೆ ಮೆದುಳಿನ ರಕ್ತನಾಳಗಳಲ್ಲಾಗುವ ಹಠಾತ್ ವ್ಯತ್ಯಾಸಗಳಿಂದ ಮೆದುಳಿನ ಯಾವುದೋ ಭಾಗದಲ್ಲಿ ನರ ಕೋಶಗಳಿಗೆ ಸರಿಯಾದ ಆಹಾರ ಹಾಗೂ ಆಮ್ಲಜನಕ ಸಿಗದೆ ನರತಂತುಗಳು ನಿಷ್ಕ್ರಿಯಗೊಳ್ಳುವುದು. ಇದರಿಂದ ಆಘಾತಕ್ಕೋಳಗಾದ ಭಾಗಗಳು ನಿಯಂತ್ರಿಸುವ ದೇಹದ ಒಂದು ಪಾರ್ಶ್ವದ ಅಂಗಗಳು ಚಲನೆ ಕಳೆದುಕೊಳ್ಳುವವು. ಇದನ್ನು ಮೆದುಳಿನ ಆಘಾತ, ಲಕ್ವಾ ಅಥವಾ ಪಾರ್ಶ್ವವಾಯು ಎನ್ನುತ್ತಾರೆ.
ಪಾರ್ಶ್ವವಾಯುವನಲ್ಲಿ ಕಾಣಿಸಿಕೊಳ್ಳುವ ಸೂಚನೆಗಳು. 1. ತತ್ ಕ್ಷಣದಲ್ಲಿ ಮುಖದ ಕೈ ಕಾಲುಗಳು, ಮುಖ್ಯವಾಗಿ ದೇಹದ ಒಂದು ಪಾರ್ಶ್ವದಲ್ಲಿ ಜೋಮು ಹಿಡಿಯುವ ಅಥಾವ ಬಲ ಕಳೆದುಕೊಂಡಂತಹ ಅನುಭವ. 2 ಮಾತನಾಡಲು, ಆಹಾರ ನುಂಗಲು, ಇತರ ಮಾತುಗಳನ್ನು ಅಥಾವ ತಮ್ಮನ್ನು ತಾವು ಅರ್ಥೈಸಿಕೊಳ್ಳಲು ಕಷ್ಟವೇನಿಸುವುದು. 3.ಕಣ್ಣುಗಳು ಮಂಜಾಗುವುದು, ಒಂದು ಅಥಾವ ಎರಡು ಕಣ್ಣು.
4 ನಡೆಯಲು ಕಷ್ಟವೇನಿಸುವುದು, ದೇಹದ ಸಮತೋಲನ ತಪ್ಪಿದ ಅನುಭವ.
5.ಅತಿಯಾದ ತಲೆನೋವು ಅಥಾವ ವಾಂತಿ ಅನುಭವ ಆಗುವುದು.
ಪಾರ್ಶ್ವವಾಯು ಬರಲು ಕಾರಣಗಳು : ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಅನುವಂಶಿಕ ಲಕ್ವಾ ಸಮಸ್ಯೆ, ಅಪಘಾತದಲ್ಲಿ ಮೆದುಳಿಗೆ ಆಗುವ ತೀವ್ರ ಪೆಟ್ಟು, ಮೆದುಳಿನ ಖಾಯಿಲೆಗಳು, ಮೆದುಳಿನಲ್ಲಿ ಗಡ್ಡೆ ಸಮಸ್ಯೆ, ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡ, ದೇಹದ ರಕ್ತ ನಾಳಗಳಲ್ಲಾಗುವ ಹಠಾತ್ ವ್ಯತ್ತಾಸ,ಹುಟ್ಟುವ ಮಕ್ಕಳಲ್ಲಿ ಹೆರಿಗೆ ಸಮಯದಲ್ಲುಂಟಾಗುವ ಸಮಸ್ಯೆ. ಇತ್ಯಾದಿ.
ಇದಕ್ಕೆ ಮನೆಯಲ್ಲೇ ಮಾಡಿ ಕೊಳ್ಳಬಹುದಾದ ಮನೆ ಮದ್ದು ಈ ಕೆಳಗಿನಂತೆ ತಿಳಿಯೋಣ.
1.ಪುದೀನಾ ಎಲೆ ಮತ್ತು ಒಂದೆಲಗ ದಿನ ಬೆಳಗ್ಗೆ ಎರಡೆರಡು ತಿನ್ನಬೇಕು (ಅರ್ಧ ಗಂಟೆ ಏನು ಸೇರಿಸಬಾರದು. 2 ಆಹಾರದಲ್ಲಿ ಹೆಚ್ಚು ಮೂಲಂಗಿಯನ್ನು ಬಳಸಬೇಕು.3 ಉಪಯೋಗಿಸಿದ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಬೇಕರಿ ಪದಾರ್ಥವನ್ನು ಸೇವಿಸಬಾರದು. 4.ಉಪ್ಪಿನ ಸೇವನೆ ಕಡಿಮೆ ಮಾಡಬೇಕು. 5 ಶುದ್ಧವಾದ ಕೊಬ್ಬರಿ ಎಣ್ಣೆಯನ್ನು 150 ಅಥವಾ 200 ml ನಷ್ಟು ಮಾತ್ರ ಸೇವಿಸಬೇಕು ಹೀಗೆ ಸೇರಿಸುವುದರಿಂದ ಹೆಚ್ಚಿನ ಸ್ಟ್ರೋಕ್ ಆಗುವುದನ್ನು ತಡೆಯುತ್ತದೆ.