ಚಳಿಗಾಲದಲ್ಲಿ 3 ದಿನ ತಿನ್ನಿ, ಸೊಂಟಕ್ಕೆ ಗಟ್ಟಿ, ಕೈ ಕಾಲುನೋವು ನಿದ್ರಾಹೀನತೆ ಸುಸ್ತು, 100 ವರ್ಷದವರೆಗೂ ಬರುವುದಿಲ್ಲ.

0

ಇದನ್ನು ಅಳವಿ ಬೀಜ ಅಥಾವ ಅಳವಿ ಕಾಳು ಎಂದು ಕರೆಯುತ್ತಾರೆ. ನೋಡಲು ಎಳ್ಳಿನಂತೆ ಕಾಣುವ ಈ ಕಾಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಕಾಳಿನಲ್ಲಿ ಕ್ಯಾಲ್ಸಿಯಮ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಐರನ್, ಪ್ರೋಟಿನ್, ಫೋಲಿಕ್ ಆಸಿಡ್, ನ್ಯೂಟ್ರಿಯಂಟ್ಸ್, ಅಲ್ಲದೆ ಡಯಟರಿ ಫೈಬರ್ ಇದೆ. ಅಳವಿ ಕಾಳನ್ನು ಪ್ರತಿದಿನ ಒಂದು ಚಮಚ ತಿನ್ನುತ್ತಾ ಬಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೀರ್ಣಾಂಗ ಸಮಸ್ಯೆ, ಆಸಿಡಿಟಿ, ಗ್ಯಾಸ್ ಸಮಸ್ಯೆ ಇರುವವರು ಈ ಕಾಳನ್ನು ನಿಯಮಿತವಾಗಿ ತಿನ್ನುವುದರಿಂದ ನಿವಾರಣೆಯಾಗುತ್ತದೆ. ಅಳವಿ ಬೀಜವನ್ನು ಪ್ರಾಚೀನ ಕಾಲದಿಂದಲೂ ಬಳಸುತ್ತಿದ್ದರು. ಉತ್ತರ ಕರ್ನಾಟಕದಲ್ಲಿ ಇದನ್ನು ಹೆಚ್ಚು ಉಪಯೋಗಿಸುತ್ತಾರೆ.

ಮಹಿಳೆಯರಿಗೆ ಇದು ಹೆಚ್ಚು ಉಪಯುಕ್ತವಾಗಿದೆ. ಸೊಂಟ ನೋವು, ಕೈ ಕಾಲು ನೋವು, ಕೀಲು ನೋವು, ಬೆನ್ನು ನೋವು ಇದ್ದವರು ಈ ಕಾಳನ್ನು ಪ್ರತಿದಿನ ಸೇವಿಸಬೇಕು ಇದರಿಂದ ಮೂಳೆಗಳು ಗಟ್ಟಿಯಾಗುತ್ತದೆ ಮತ್ತು ಕೀಲುಗಳಲ್ಲಿ ಯಾವುದೇ ನೋವಿದ್ದರೂ ನಿವಾರಣೆಯಾಗುತ್ತದೆ. ಇದರಿಂದ ಶ್ವಾಸಕೋಶದ ಸಮಸ್ಯೆ ನಿವಾರಣೆಯಾಗುತ್ತದೆ, ಋತುಚಕ್ರದ ಸಮಸ್ಯೆಯನ್ನು ಅನುಭವಿಸುತ್ತಿರುವ ಮಹಿಳೆಯರು ಈ ಬೀಜವನ್ನು ನಿಯಮಿತವಾಗಿ ಸೇವಿಸಬೇಕು. ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮಹಿಳೆಯರು ಡೆಲವರಿ ಆದ ನಂತರ ಈ ಕಾಳುಗಳನ್ನು ಸೇರಿಸುವುದರಿಂದ ಸೊಂಟ ನೋವು ಬರುವುದಿಲ್ಲ, ಸೊಂಟಕ್ಕೆ ಬಲ ಬರುತ್ತದೆ.

ಒಂದು ಸ್ಪೂನ್ ಅಳವಿ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ಒಂದು ಪಾತ್ರೆಯಲ್ಲಿ ಎರಡು ಗ್ಲಾಸ್ ನೀರನ್ನು ಕುದಿಸಿ, ನೆನಸಿದ ಅಳವಿ ಬೀಜವನ್ನು ಹಾಕಿ ಎರಡು ನಿಮಿಷ ಚನ್ನಾಗಿ ಕುದಿಸಿ ಅದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲವನ್ನು  ಹಾಕಿ ಸ್ವಲ್ಪ ಕುದಿಸಿ ನಂತರ ಸ್ವಲ್ಪ ಹಾಲನ್ನು ಹಾಕಿ ಒಂದು ನಿಮಿಷ ಕುದಿಸಿ ಬೇಕಾದರೆ ಏಲಕ್ಕಿ ಸೇರಿಸಿದರೆ ಅಳವಿ ಪಾಯಸ ಸಿದ್ಧವಾಗುತ್ತದೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು.ಈ ಪಾಯಸವನ್ನು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಕುಡಿಯಬಹುದು.

ಮಹಿಳೆಯರಿಗೆ ಡೆಲವರಿ ಆದ ನಂತರ ಎದೆ ಹಾಲು ಕಡಿಮೆ ಇದ್ದರೆ ಈ ಪಾಯಸವನ್ನು ತಿನ್ನುವುದರಿಂದ ಎದೆ ಹಾಲು ಉತ್ಪತ್ತಿ ಹೆಚ್ಚಾಗುತ್ತದೆ. ಅಳವಿ ಬೀಜ ಬಾಣಂತಿ ಮಹಿಳೆಯರಿಗೆ  ಹಾಗೂ ಮಗುವಿನ ಆರೋಗ್ಯಕ್ಕೂ ಬಹಳ ಒಳ್ಳೆಯದು.

Leave A Reply

Your email address will not be published.

error: Content is protected !!