ಇಂದು ನಾವು ನಿಮಗೆ ಕರ್ನಾಟಕದ ಪ್ರಮುಖ ನದಿಗಳಲ್ಲಿ ಒಂದಾದ ಶರಾವತಿ ನದಿಯ ಮೇಲೆ ನಿರ್ಮಿಸಲಾಗಿರುವ ಶರಾವತಿ ರೈಲ್ವೆ ಸೇತುವೆಯ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ನಮ್ಮ ರಾಜ್ಯ ಕರ್ನಾಟಕದಲ್ಲಿ ಜನಿಸಿ ಕರ್ನಾಟಕದಲ್ಲಿಯೇ ಹರಿದು ಕೊನೆಗೆ ಅರಬ್ಬಿ ಸಮುದ್ರವನ್ನು ನಮ್ಮ ಕರ್ನಾಟಕದಲ್ಲಿ ಸಂಗಮಗೊಳ್ಳುವಂತಹ ಸುಂದರ ನದಿ ಶರಾವತಿ ನದಿ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತಹ ಗಾದೆ ಮಾತಿನಂತೆ ಈ ಸುಂದರ ಕರುನಾಡಿನ ಶರಾವತಿ ನದಿ ಕೇವಲ ನೂರಾ ಇಪ್ಪತ್ತು ಕಿಲೋಮೀಟರ್ ಹರಿವಿನ ಪಥವನ್ನು ಹೊಂದಿದ್ದರು ಕರ್ನಾಟಕ ರಾಜ್ಯದಲ್ಲಿ ಕೆಲವು ಅದ್ಭುತಗಳಿಗೆ ಕಾರಣವಾಗಿದೆ.
ಸಂಪೂರ್ಣ ವಿಶ್ವವೇ ನಿಬ್ಬೆರಗಾಗಿ ನೋಡುವಂತಹ ಜೋಗ ಜಲಪಾತದ ನಿರ್ಮಾತೃ ಈ ಶರಾವತಿ ನದಿ. ನಮ್ಮ ಕರ್ನಾಟಕ ರಾಜ್ಯಕ್ಕೆ ಅಗತ್ಯವಿರುವಂತಹ ವಿದ್ಯುತ್ ನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ತನ್ನು ಉತ್ಪಾದಿಸುವ ಲಿಂಗನಮಕ್ಕಿ ಜಲವಿದ್ಯುತ್ ಗಾರವು ಇದೇ ಶರಾವತಿ ನದಿಯ ಕೊಡುಗೆಯಾಗಿದೆ. ಅಷ್ಟೇ ಅಲ್ಲದೆ ನಮ್ಮ ರಾಜ್ಯ ಕರ್ನಾಟಕದಲ್ಲಿ ಅತಿ ಉದ್ದವಾದ ರೈಲ್ವೆ ಸೇತುವೆ ನಿರ್ಮಾಣಗೊಂಡಿರುವುದು ಕೂಡ ಇದೆ ಶರಾವತಿಯ ನದಿಯ ಮೇಲೆ ಎಂದರೆ ಆಶ್ಚರ್ಯವಾಗುತ್ತದೆ.
ಕರ್ನಾಟಕದ ಅತಿ ಉದ್ದದ ರೈಲ್ವೆ ಸೇತುವೆ ಶರಾವತಿ ರೈಲ್ವೆ ಸೇತುವೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ದಕ್ಷಿಣಕ್ಕೆ ಈ ರೈಲ್ವೆ ಸೇತುವೆ ನಿರ್ಮಾಣ ಮಾಡಲಾಗಿದೆ. ಶರಾವತಿ ರೈಲ್ವೆ ಸೇತುವೆಯನ್ನು ಕೊಂಕಣ ರೈಲ್ವೆಗಾಗಿ ನಿರ್ಮಿಸಲಾಗಿದೆ.
ನಮ್ಮ ದೇಶದ ರೈಲ್ವೆ ಇಲಾಖೆಯ ಕಿರೀಟ ಎನಿಸಿಕೊಂಡಿರುವ ಕೊಂಕಣ ರೈಲ್ವೆ ಸೇತುವೆಯಲ್ಲಿ ಅತಿ ದೊಡ್ಡ ರೈಲ್ವೆ ಸೇತುವೆ ಇದಾಗಿದೆ. ಈ ಸೇತುವೆಯ ಉದ್ದ ಬರೋಬ್ಬರಿ ಎರಡು ಸಾವಿರದ ಅರವತ್ತು ಮೀಟರ್ಗಳು. ನೀವೇನಾದರು ಕೊಂಕಣ ರೈಲ್ವೇ ಮಾರ್ಗದಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಿದರೆ ಈ ಶರಾವತಿ ರೈಲ್ವೆಯ ಪರಿಚಯವಾಗುತ್ತದೆ.
ಸಾವಿರದ ಒಂಬೈನೂರ ತೊಂಬತ್ನಾಲ್ಕನೇ ಇಸ್ವಿಯಲ್ಲಿ ನಿರ್ಮಾಣಗೊಂಡ ಈ ಸೇತುವೆಗೆ ಸಾವಿರದ ಒಂಬೈನೂರ ತೊಂಬತ್ತೈದರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ರಿಡ್ಜ್ ಇಂಜಿನಿಯರ್ಗಳು ಅತ್ಯುತ್ತಮ ರೈಲ್ವೇ ಸೇತುವೆ ಎಂಬ ಬಹುಮಾನವನ್ನು ನೀಡಿದ್ದಾರೆ. ಶರಾವತಿ ರೈಲ್ವೇ ಸೇತುವೆ ಮೇಲೆ ಚಲಿಸುತ್ತಿದ್ದರೆ ಎರಡು ಬದಿಗಳಲ್ಲಿ ಸಮೃದ್ಧವಾಗಿರುವ ಹಚ್ಚಹಸುರಿನ ದಟ್ಟ ಅರಣ್ಯ ಹಾಗೂ ಅದ್ಭುತ ಪ್ರಕೃತಿ ಸೌಂದರ್ಯವನ್ನು ನಾವು ಆನಂದಿಸಬಹುದು.
ಈ ಸೇತುವೆಯ ಮೇಲಿನಿಂದ ಕಾಣಸಿಗುವ ಬಂದರು ಹಾಗೂ ಸಮುದ್ರದ ಕಡೆಗೆ ಹರಿಯುವ ಶರಾವತಿ ನದಿಯ ದೃಶ್ಯಾವಳಿಯನ್ನು ವರ್ಣಿಸುವುದಕ್ಕೆ ಪದಗಳೇ ಸಾಲದು. ಈ ರೈಲ್ವೇ ಸೇತುವೆಯ ಪ್ರಾರಂಭದಲ್ಲಿ ಒಂದು.ಎರಡು ಕಿಲೋಮೀಟರ್ ಉದ್ದದ ಸುರಂಗ ಮಾರ್ಗವು ಕೂಡ ಇದೆ. ನೀವೇನಾದರೂ ಉತ್ತರಕನ್ನಡಜಿಲ್ಲೆಯ ಪ್ರವಾಸವನ್ನು ಕೈಗೊಳ್ಳುತ್ತಿದ್ದರೆ ಅಥವಾ ಹೊನ್ನಾವರದ ಸಮೀಪ ಭೇಟಿ ನೀಡುತ್ತಿದ್ದರೆ ತಪ್ಪದೇ ಈ ಶರಾವತಿ ರೈಲ್ವೆ ಸೇತುವೆಗು ಸಹ ಭೇಟಿ ನೀಡಿ.