WhatsApp Group Join Now
Telegram Group Join Now

ಜ್ವರ ವಾಸ್ತವವಾಗಿ ಒಂದು ವ್ಯಾಧಿಯಲ್ಲ, ನಮ್ಮ ರೋಗ ನಿರೋಧಕ ವ್ಯವಸ್ಥೆಯ ಒಂದು ಕಾರ್ಯವಿಧಾನ. ಸಾಮಾನ್ಯವಾಗಿ ತೇವಗೊಂಡ ಗಾಳಿಯ ಮೂಲಕ (ವಿಶೇಷವಾಗಿ ಮಳೆಗಾಲದಲ್ಲಿ) ಫ್ಲೂ ಜ್ವರಕ್ಕೆ ಕಾರಣವಾದ ವೈರಸ್ಸುಗಳು ಸುಲಭವಾಗಿ ನಮ್ಮ ಶ್ವಾಸದ ಮೂಲಕ ದೇಹವನ್ನು ಪ್ರವೇಶಿಸಿ ಧಾಳಿ ಮಾಡುತ್ತವೆ. ಆಗ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ದೇಹದ ಬಿಸಿಯನ್ನು ಹೆಚ್ಚಿಸಿ ರಕ್ತಪರಿಚಲನೆ ಹೆಚ್ಚಿಸಿ ಈ ವೈರಸ್ಸುಗಳ ವಿರುದ್ದ ಹೋರಾಡುತ್ತದೆ.

ಉಗುರುಬೆಚ್ಚನೆಯ ನೀರಿಗೆ ಕೊಂಚ ಶಿರ್ಕಾ ಸೇರಿಸಿ ಈ ನೀರನ್ನು ಅದ್ದಿದ ಅಗಲವಾದ ಬಟ್ಟೆಯನ್ನು ಹಿಂಡಿ ಮೈಮೇಲೆ ಐದರಿಂದ ಹತ್ತು ನಿಮಿಷ ಹರಡಿ. ಒಂದು ಕಪ್ ಕುದಿಯುವ ನೀರಿಗೆ ಒಂದು ಚಿಕ್ಕ ಚಮಚದಷ್ಟು ಜಜ್ಜಿದ ತುಳಸಿ ಎಲೆಗಳನ್ನು ಹಾಕಿ ಐದು ನಿಮಿಷಗಳವರೆಗೆ ಹಾಗೇ ಇಡಿ (ಮತ್ತೆ ಕುದಿಸಬೇಡಿ). ಬಳಿಕ ಇದನ್ನು ಸೋಸಿ ಸಾಧ್ಯವಿದ್ದಷ್ಟು ಬಿಸಿಯಾಗಿಯೇ ದಿನಕ್ಕೆ ನಾಲ್ಕು ಅಥಾವಾ ಐದು ಬಾರಿ ಕುಡಿಸಿ. ಜ್ವರ ಮರುದಿನವೇ ಕಡಿಮೆಯಾಗುವುದು ಗಮನಕ್ಕೆ ಬರುತ್ತದೆ. ಈ ಅವಧಿಯಲ್ಲಿ ಹೆಚ್ಚಿಗೆ ಬೆವರಿದಷ್ಟೂ ಜ್ವರ ಇಳಿಯುವ ಸಂಕೇತವಾಗಿದೆ.ಹಸಿ ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಬಿಲ್ಲೆಗಳನ್ನಾಗಿಸಿ. ಎರಡೂ ಪಾದಗಳ ಕೆಳಗೆ ಒಂದೊಂದು ಬಿಲ್ಲೆಗಳನ್ನಿಟ್ಟು ಬೆಚ್ಚಗಿನ ಮಫ್ಲರ್ ಅಥವಾ ಬಟ್ಟೆಯನ್ನು ಸುತ್ತಿ ರಾತ್ರಿ ಮಲಗಿಸಿ. ಬೆಳಿಗ್ಗೆ ಜ್ವರ ಕಡಿಮೆಯಾಗುತ್ತದೆ.ಒಂದು ಆಲುಗಡ್ಡೆಯನ್ನು ತೆಳುವಾದ ಬಿಲ್ಲೆಗಳನ್ನಾಗಿಸಿ ಶಿರ್ಕಾ ಸೇರಿಸಿದ ಉಗುರುಬೆಚ್ಚನೆಯ ನೀರಿನಲ್ಲಿ ಹತ್ತು ನಿಮಿಷ ಮುಳುಗಿಸಿ. ಬಳಿಕ ಈ ಬಿಲ್ಲೆಗಳನ್ನು ಹಣೆಯಿಡೀ ಆವರಿಸುವಂತೆ ಹರಡಿ ಇದರ ಮೇಲೊಂದು ಒಣ ಬಟ್ಟೆಯನ್ನು ಹರಡಿ. ಕೇವಲ ಇಪ್ಪತ್ತು ನಿಮಿಷಗಳಲ್ಲಿ ಜ್ವರ ಕಡಿಮೆಯಾಗಿರುವುದು ಗಮನಕ್ಕೆ ಬರುತ್ತದೆ.

ಜ್ವರ ಹೆಚ್ಚಿದ್ದರೆ ಅರ್ಧ ಕಪ್ ನೀರಿಗೆ ಸುಮಾರು ಇಪ್ಪತ್ತೈದು ಒಣದ್ರಾಕ್ಷಿಗಳನ್ನು ಹಾಕಿ ಕೊಂಚಕಾಲ ನೆನೆಸಿ. ಬಳಿಕ ಈ ದ್ರಾಕ್ಷಿಗಳನ್ನು ಜಜ್ಜಿ ಅದೇ ನೀರಿನಲ್ಲಿ ಚೆನ್ನಾಗಿ ಕದಡಿ. ಬಳಿಕ ಈ ನೀರನ್ನು ಸೋಸಿ ಅರ್ಧ ಲಿಂಬೆಹಣ್ಣಿನ ರಸ ಸೇರಿಸಿ ದಿನಕ್ಕೆರಡು ಬಾರಿ ಕುಡಿಯುವುದರಿಂದ ಜ್ವರ ಕೂಡಲೇ ಕಡಿಮೆಯಾಗುತ್ತದೆ. ಸ್ವಲ್ಪ ಪ್ರಮಾಣದ ಹೆಸರುಬೇಳೆಯನ್ನು ನೆನೆಸಿ ಆದ್ದರಿಂದ ಬಂದಂತಾ ನೀರನ್ನು ಕುಡಿಸಿದರೆ 15 ನಿಮಿಷದಲ್ಲಿ ಜ್ವರ ಕಡಿಮೆ ಪ್ರಮಾಣವಾಗುತ್ತದೆ ದಿನಕ್ಕೆರಡು ಬಾರಿ ಮಾಡಿದರೆ ಒಂದು ದಿನದಲ್ಲಿ ಜ್ವರ ಬಂದ ವ್ಯಕ್ತಿ ಸಾಮಾನ್ಯ ವ್ಯಕ್ತಿಯಾಗುತ್ತಾರೆ.ಬಿಳಿರಕ್ತಕಣಗಳು ಪ್ರತಿ ವೈರಸ್ಸಿನೊಂದಿಗೆ ಹೋರಾಡಿ ವೀರಮರಣವನ್ನಪ್ಪುತ್ತವೆ ಹಾಗೂ ನಮ್ಮ ದೇಹವನ್ನು ಈ ವೈರಸ್ಸುಗಳಿಂದ ಕಾಪಾಡುತ್ತವೆ. ಆದರೆ ಈ ಕ್ರಿಯೆಯಲ್ಲಿ ವೈರಸ್ಸುಗಳ ಸಂಖ್ಯೆ ಜಾಸ್ತಿಯಾದರೆ ದೇಹದ ತಾಪಮಾನವೂ ಅತಿ ಹೆಚ್ಚಾಗುವುದರಿಂದ ದೇಹದ ಇತರ ಕಾರ್ಯಗಳಿಗೆ ಧಕ್ಕೆಯುಂಟಾಗಿ ಅಪಾಯ ಎದುರಾಗುವ ಸಂಭವವಿದೆ. ವಿಶೇಷವಾಗಿ ದೇಹವಿನ್ನೂ ಪೂರ್ಣವಾಗಿ ಬೆಳವಣಿಗೆ ಪಡೆದಿರದ ಮಕ್ಕಳಲ್ಲಿ ಹೆಚ್ಚಿನ ತಾಪಮಾನ ಅಪಾಯಕಾರಿಯಾಗಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: